ನಾವು ಮೀಸಲಾತಿ ನೀಡೋ ವಿಚಾರದಲ್ಲಿ ಬದ್ಧರಿದ್ದೇವೆ. ವಾಲ್ಮೀಕಿ ಜಯಂತಿ (Valmiki jayanthi) ಬಹಿಷ್ಕಾರ ಮಾಡೋದು ಸರಿಯಲ್ಲಾ ಎಂದು ಸಚಿವ ಶ್ರೀರಾಮುಲು (Sri ramulu) ಹೇಳಿದ್ದಾರೆ. ವಿಜಯನಗರ (Vijayanagara) ದಲ್ಲಿ ಮಾತನಾಡಿದ ಅವರು ಸತೀಶ್ ಜಾರಕಿಹೊಳಿ (Satish jarakiholi) ಅವರ ಬಗ್ಗೆ ನಮಗೆ ಗೌರವ ಇದೆ.
ಸ್ವಾಮೀಜಿ ಮತ್ತು ಸತೀಶ್ ಜಾರಕಿಹೊಳಿಯವರು ಈ ವಿಚಾರದಲ್ಲಿ ರಾಜಕೀಯ ಮಾಡೋದು ಬೇಡ . ಕಾನೂನು ಬಲ್ಲವರು ಸತೀಶ್ ಜಾರಕಿಹೊಳಿ ಅಣ್ಣನವರು ಎಂದು ಹೇಳಿದ್ರು. ಇದೇ ವೇಳೆ ಅಕ್ಟೋಬರ್ 8 ರಂದು ನಾವು ಸರ್ವ ಪಕ್ಷಗಳ ಸಿಎಂ ಸಭೆ ಕರೆದಿದ್ದೇವೆ. ಸಿಎಂ ಎಲ್ಲಾ ನಾಯಕರ ಸಲಹೆ ಪಡೆಯುತ್ತಾರೆ . 8 ನೇ ತಾರಿಖು ಇನ್ನೂ ದೂರ ಇಲ್ಲಾ . ಈ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ಜಯಂತಿ ವಿಚಾರದಲ್ಲಿ ರಾಜಕೀಯ ಮಾಡಿದ್ರೆ ಸಮಾಜಕ್ಕೆ ಮಾರಕವಾಗ್ತದೆ. ಇದನ್ನು ಓದಿ :- ಕಾಂಗ್ರೆಸ್ ನವರಿಂದ ನಾವು ಪಾಠ ಕಲಿಯಬೇಕಿಲ್ಲ – ಆರ್. ಅಶೋಕ್ ವ್ಯಂಗ್ಯ
ಕೊಟ್ಟ ಮಾತು ನಾವು ಉಳಿಸಿಕೊಳ್ಳುತ್ತೇವೆ, ನಮ್ಮ ಸರ್ಕಾರ ಬದ್ಧವಿದೆ ಎಂದು ತಿಳಿಸಿದ್ರು.ಕಾಂಗ್ರೆಸ್ ಗೆ ಶ್ರೀರಾಮುಲು ಅವರನ್ನು ನಾಗೇಂದ್ರ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ನಾನು ಹಾದಿ ಬಿದೀಲಿ ಹೋಗೋರಿಗೆಲ್ಲಾ ಉತ್ತರ ಕೊಡಲ್ಲಾ ಎಂದು ಶ್ರೀರಾಮುಲು ತಿಳಿಸಿದ್ದಾರೆ.
ಇದನ್ನು ಓದಿ :- ಬಡವರಿಗೆ ಮನೆ ನಿರ್ಮಾಣ ವಿಚಾರ – ಕೆಜಿಎಫ್ ಬಾಬು ಮನವಿಗೆ ಸ್ಪಂದಿಸದ ಶಾಸಕ ಗರುಡಾಚಾರ್