ನಾನು ಮೊದಲ ಬಾರಿ ಬಿಜೆಯಲ್ಲಿ ಶಾಸಕನಾದಾಗ ಆರ್. ಅಶೋಕ್ ಅಶ್ವಥ್ ನಾರಾಯಣ್ ಬಿಜೆಪಿಯಲ್ಲಿ ಇರಲಿಲ್ಲ ಎಂಬ ಮಾಜಿ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರ (Ramnagara) ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆ ಗ್ರಾಮದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ (Ashwath narayan) ಪ್ರತಿಕ್ರಿಯೆ ನೀಡಿದ್ದಾರೆ. ಯಾಕಪ್ಪ ಕನ್ ಪ್ಯೂಸ್ ಆಗಿದ್ಯಾ ಬಾಲಕೃಷ್ಣ. ಕನ್ ಪ್ಯೂಸ್ ಆಗಬೇಡ ಸ್ಪಷ್ಟತೆ ತಿಳಿದಿಕೋ ಎಂದು ಬಾಲಕೃಷ್ಣಗೆ ತಿರುಗೇಟು ನೀಡಿದ್ದಾರೆ.
ಡಿಕೆಶಿ (DK.Shivkumar) ಗೆ ಒಕ್ಕಲಿಗ ಸಮುದಾಯ ಬೆಂಬಲ ನೀಡಿ ಎಂಬ ಬಾಲಕೃಷ್ಣ ಹೇಳಿಕೆ ವಿಚಾರ ಮೊದಲು ಜನರ ವಿಶ್ವಾಸ ಗಳಿಸಿಕೊಳ್ಳಬೇಕು. ಅಧಿಕಾರ ಪಡೆದುಕೊಳ್ಳೋದು ನಮಗೋಸ್ಕರ ಅಲ್ಲ. ತನ್ನ ವ್ಯಕ್ತಿಗತ ಆಸೆ ಪೂರೈಸಿಕೊಳ್ಳೋದಕ್ಕೆ ಅಲ್ಲ. ಅಧಿಕಾರ ಪಡೆದುಕೊಳ್ಳೋದು ನಾಡಿನ ಶ್ರೇಯಸ್ಸಿಗಾಗಿ. ನನಗೊಂದಿಷ್ಟು ಕೊಡಿ ಅನ್ನೋದು ಅಂಗಡಿಯಲ್ಲಿ ವ್ಯಾಪಾರ ಮಾಡಿದಂತಲ್ಲ. ಬದ್ದತೆ ಕಾಳಜಿ ಮೊದಲು ಇರಬೇಕು ರಾಜಕೀಯ ಎಂಬುದು ಬಹಳ ಪವಿತ್ರವಾದುದ್ದು. ಬಯಸುವುದು ತಪ್ಪಲ್ಲ, ಅದಕ್ಕೆ ಆದಂತಹ ಅರ್ಹತೆ, ಯೋಗ್ಯತೆ ಇರಬೇಕು. ಯೋಗ್ಯತೆ, ಅರ್ಹತೆ ಬೆಳೆಸಿಕೊಂಡು ಯಾರು ಬೇಕಾದ್ರು ಸಿಎಂ ಆಗಲಿ. ನಿವೃತ್ತಿ ಹಂಚಿನಲ್ಲಿರುವ ಸಿದ್ದರಾಮಯ್ಯ (Siddaramaiah) ಒಂದು ಭಾಗ. ಇದನ್ನು ಓದಿ :- ನಂದೇನೆ ಇದ್ರೂ ಎಲ್ಲ ಎಲೆಕ್ಷನ್ ಕಮಿಷನ್ ಗೆ ಕೊಟ್ಟಿದ್ದೇನೆ – ಕೆ. ಸುಧಾಕರ್
ಯೋಗ್ಯತೆ, ಅರ್ಹತೆ ಇಲ್ಲದಂತಹ ಡಿಕೆಶಿ ಒಂದು ಕಡೆ. ಇವರನ್ನು ಸಿಎಂ ಮಾಡಿ ನಾಡಿನ ಜನರು ಏನು ನೋಡಬೇಕು. ನಾಡಿನ ಜನರ ಕಷ್ಟಕ್ಕೆ ಸ್ಪಂದಿಸುವ ಒಳ್ಳೆಯ ನಾಯಕ ಬರಬೇಕು ಎಂದು ಬಯಸುತ್ತಾರೆ. ಅವರ ಆಸೆ ಪೂರೈಸಿಕೊಳ್ಳಲು ನಾಡಿನ ಜನರನ್ನು ಬಲಿ ಕೊಡಲು ಸಾಧ್ಯವೇ. ಬಲಿ ಕೊಟ್ಟಿರುವುದು ಸಾಕು,ಬೇರೆ ಯಾರು ಬಲಿಯಾಗುವುದು ಬೇಡ. ಅವರ ಭಾರವನ್ನು ಹೊರಲು ನಮ್ಮ ಜನ ಏನು ಕರ್ಮ ಮಾಡಿದ್ದಾರೆ. ಸತ್ಯವಂತರೂ ಸಿಎಂ ಆಗಲಿ ಎಂದು ಚಾಮುಂಡೇಶ್ವರಿ ತಾಯಿಯಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ರು.
ಇದನ್ನು ಓದಿ :- ಆ.2 ರಿಂದ 15ರವರೆಗೆ ರಾಷ್ಟ್ರಧ್ವಜವನ್ನು ನಿಮ್ಮ ಪ್ರೊಫೈಲ್ ಚಿತ್ರವಾಗಿ ಬಳಸಿ – ಪ್ರಧಾನಿ ನರೇಂದ್ರ ಮೋದಿ