ವಿರೋಧ ಪಕ್ಷಗಳಿಂದ ಒಮ್ಮತದ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಮಾಡುವ ಸಲುವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ( Mamata Banerjee )ಕರೆದಿದ್ದ ಸಭೆಯಲ್ಲಿ ಕನಿಷ್ಠ 17 ರಾಜಕೀಯ ಪಕ್ಷಗಳು ಭಾಗವಹಿಸಿದ್ದವು.
ಮಮತಾ ಬ್ಯಾನರ್ಜಿ ಕರೆದ ಸಭೆಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ಎನ್ಸಿಪಿ, ಡಿಎಂಕೆ, ಆರ್ಜೆಡಿ ಮತ್ತು ಎಡಪಕ್ಷಗಳು ಹಾಜರಾಗಿದ್ದವು. ಜತೆಗೆ ಶಿವಸೇನಾ, ಸಿಪಿಐ( CPI ) ಸಿಪಿಎಂ(CPM) ಸಿಪಿಐ (ಎಂಎಲ್), ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, (PDP) ಜೆಡಿಎಸ್, ಆರ್ಎಸ್ಪಿ, ಆರ್ಎಲ್ಡಿ, ಐಯುಎಂಎಲ್ ಮತ್ತು ಜೆಎಂಎಂ ನಾಯಕರು ಕೂಡ ಪಾಲ್ಗೊಂಡಿದ್ದರು. ಎನ್ಸಿಪಿಯ ಶರದ್ ಪವಾರ್, ಪ್ರಫುಲ್ ಪಟೇಲ್, ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲ, ಜೆಡಿಎಸ್ನ ಎಚ್ ಡಿ ದೇವೇಗೌಡ ಮತ್ತು ಎಚ್ಡಿ ಕುಮಾರಸ್ವಾಮಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಪಿಡಿಪಿಯ ಮೆಹಬೂಬ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ನ ಒಮರ್ ಅಬ್ದುಲ್ಲಾ ಸಭೆಯಲ್ಲಿ ಹಾಜರಿದ್ದರು. ಇದನ್ನೂ ಓದಿ : – ರಾಷ್ಟ್ರಪತಿ ಚುನಾವಣೆ ಕುರಿತು ಚರ್ಚಿಸಲು ನಾಳೆ ಮಮತಾ ಬ್ಯಾನರ್ಜಿ ಸಭೆ – ಕಾಂಗ್ರೆಸ್ , ಎನ್ ಸಿ ಪಿ ಭಾಗಿ
ಎನ್ಡಿಎಯಿಂದ ಮೈತ್ರಿ ಕಡಿದುಕೊಂಡಿರುವ ಶಿರೋಮಣಿ ಅಕಾಲಿ ದಳ, ಆಮ್ ಆದ್ಮಿ ಪಕ್ಷ, ತೆಲಂಗಾಣದ ಟಿಆರ್ಎಸ್ ಮತ್ತು ಒಡಿಶಾದ ಬಿಜೆಡಿ ಪಕ್ಷಗಳು ಮಮತಾ ಕರೆದಿದ್ದ ಸಭೆಗೆ ಗೈರಾಗಿದ್ದವು. ಭಾರತದ 15ನೇ ರಾಷ್ಟ್ರಪತಿ ಆಯ್ಕೆಗೆ ಜುಲೈ 21ರಂದು ಚುನಾವಣೆ ನಡೆಯಲಿದೆ. ಜೂನ್ 29ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಅದಕ್ಕೂ ಮುನ್ನ ಆಡಳಿತಾರೂಢ ಎನ್ಡಿಎ ಹಾಗೂ ವಿಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ.
ಇದನ್ನೂ ಓದಿ : – ED BREAKING – ನ್ಯಾಷನಲ್ ಹೆರಾಲ್ಡ್ ಪ್ರಕರಣ- ರಾಹುಲ್ ಗಾಂಧಿಗೆ 3ನೇ ದಿನವೂ ED ಡ್ರಿಲ್