74 ನೇ ಗಣರಾಜ್ಯೋತ್ಸವ (Republic day) ದ ದಿನದ ಅಂಗವಾಗಿ ಗಣನೀಯ ಸೇವೆ ಸಲ್ಲಿಸಿದ 901 ಪೊಲೀಸ್ (Police) ಸಿಬ್ಬಂದಿಗೆ ರಾಷ್ಟ್ರಪತಿ ಪದಕ (Rashtrapathi padaka) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಪೈಕಿ ಕರ್ನಾಟಕ ಪೋಲೀಸ್ (Karnataka police) ಸಿಬ್ಬಂದಿಗೆ ಒಟ್ಟು 20 ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಗಣನೀಯ ಸೇವೆ ಸಲ್ಲಿಸಿದ 901 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕ ಪೋಲೀಸ್ ಸಿಬ್ಬಂದಿಗೆ ಒಟ್ಟು 20 ಪ್ರಶಸ್ತಿ ಲಭಿಸಿದೆ. ಅದರಲ್ಲಿ 19 ಪ್ರಶಸ್ತಿ ವಿಶಿಷ್ಟ ಸೇವೆ ಮತ್ತು 1 ಗಣನೀಯ ಸೇವೆಗೆ ಪ್ರಶಸ್ತಿ 8 ಇತರೇ ಪ್ರಶಸ್ತಿ ಎಂದು ತಿಳಿಸಿದೆ. ಇದನ್ನು ಓದಿ :- ವೋಟ್ ಗೆ 6 ಸಾವಿರ ಹೇಳಿಕೆ ಸಮರ್ಥಿಸಿಕೊಂಡ ರಮೇಶ್ ಜಾರಕಿಹೊಳಿ !
ಎಡಿಜಿಪಿ ಸಿಐಡಿ ಕೆ ವಿ ಶರತ್ ಚಂದ್ರ (Sharath chandra) , ಅವರಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಲಭಿಸಿದೆ. ರಾಜ್ಯ ಗುಪ್ತವಾರ್ತೆಯ ಹೆಚ್ಚುವರಿ ನಿರ್ದೇಶಕ ಲಾಭೂರಾಮ್ ಸೇರಿದಂತೆ 19 ಮಂದಿಗೆ ವಿಶಿಷ್ಟ ಸೇವೆಗೆ ಶ್ಲಾಘನೀಯ ಸೇವೆ ಪ್ರಶಸ್ತಿ ನೀಡಲಾಗಿದೆ.
ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾದ ಕರ್ನಾಟಕ ಪೋಲೀಸ್ ಸಿಬ್ಬಂದಿ ಹೆಸರು ಈ ಕೆಳಗಿನಂತಿವೆ.
ಕರ್ನಾಟಕದ ADGP ಶರತ್ ಚಂದ್ರ
ಲಾಂಬೂರಾಂ, ಸಿಜಿ, ಹುಬ್ಬಳ್ಳಿ
ನಾಗರಾಜು- ಡಿಎಸ್ಪಿ, ಬೆಂಗಳೂರು
ಪದ್ಮರಾಜಯ್ಯ ವೀರೇಂದ್ರ ಕುಮಾರ್- ಡಿಎಸ್ಪಿ ಬೆಂಗಳೂರು
ಬೆದ್ರಾಜೆ ಪ್ರಮೋದ್ ಕುಮಾರ್- ಡಿಎಸ್ಪಿ ಬೆಂಗಳೂರು
ಸಿದ್ದಲಿಂಗಪ್ಪ ಆರ್ ಪಾಟೀಲ್- ಡಿಎಸ್ಪಿ ಬೆಂಗಳೂರು ಲೋಕಾಯುಕ್ತ
ಸಿವಿ ದೀಪಕ್- ಡಿಎಸ್ಪಿ ಬೆಂಗಳೂರು
ಹೆಚ್ ವಿಜಯ- ಡಿಎಸ್ಪಿ ಬೆಂಗಳೂರು
ಬಿ. ಶಿವಲಿಂಗೇಗೌಡ ಮಂಜುನಾಥ್, ಇನ್ಸ್ಪೆಕ್ಟರ್- ಬೆಂಗಳೂರು ಗ್ರಾಮಾಂತರ
ಗಣೇಶ್ ಜನಾರ್ಧನ ರಾವ್- ಇನ್ಸ್ಪೆಕ್ಟರ್- ಬೆಂಗಳೂರು
ಇತರರು
ಇದನ್ನು ಓದಿ :- ದಾಖಲೆಯ ಏರಿಕೆ ಕಂಡ ಚಿನ್ನದ ದರ- 57 ಸಾವಿರ ಗಡಿ ದಾಟಿದ ಹಳದಿ ಲೋಹ