ಇಂದು ಬೆಳಿಗ್ಗೆ ದೆಹಲಿ (Delhi) ಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿ (Bangalore) ಗೆ ಮೋದಿ (Modi) ಪ್ರಯಾಣ ಮಾಡಿದ್ದಾರೆ. ಏರ್ಪೋರ್ಟ್ ನಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರು ಅಂತರ್ ರಾಷ್ಟ್ರೀಯ ಎಕ್ಸಿಬಿಷನ್ ಸೆಂಟರ್ ಗೆ ಪ್ರಯಾಣ ಮಾಡಲಿದ್ದಾರೆ. 11:25 ಕ್ಕೆ ರಸ್ತೆ ಮೂಲಕ ಬಿ ಐ ಇ ಸಿ ಗೆ ಮೋದಿ ತಲುಪಲಿದ್ದಾರೆ. ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.
ಮಧ್ಯಾಹ್ನ 2:45 ಕ್ಕೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ತುಮಕೂರು (Tumakuru) ಜಿಲ್ಲಾ ಪ್ರವಾಸ ಮಾಡಲಿದ್ದಾರೆ. ಮಧ್ಯಾಹ್ನ 3.43ಕ್ಕೆ ಕಾರ್ಯಕ್ರಮದ ವೇದಿಕೆಗೆ ಮೋದಿ ಆಗಮಿಸಲಿದ್ದಾರೆ. 10 ನಿಮಿಷ ಫ್ಯಾಕ್ಟರಿ ವೀಕ್ಷಣೆ ನಂತರ ಎಲ್ ಯು ಹೆಲಿಕಾಪ್ಟರ್ ಅನಾವರಣ ಮಾಡಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಾಗತ ಭಾಷಣ ಮಾಡಲಿದ್ದಾರೆ. ನಂತರ ಸಿಎಂ ಬಸವರಾಜ ಬೊಮ್ಮಾಯಿ 4 ನಿಮಿಷ ಭಾಷಣ ಮಾಡಲಿದ್ದಾರೆ. ಆನಂತರ HAL ಹೆಲಿಕಾಪ್ಟರ್ ಫ್ಯಾಕ್ಟರಿಯನ್ನು ದೇಶಕ್ಕೆ ಪ್ರಧಾನಿ ಸಮರ್ಪಿಸಲಿದ್ದಾರೆ. ಚಿಕ್ಕನಾಯಕನಹಳ್ಳಿ, ತಿಪಟೂರು ಜಲಜೀವನ್ ಮಿಷನ್ ಗೆ ಪ್ರಧಾನಿ ಅಡಿಗಲ್ಲು ಹಾಕಲಿದ್ದಾರೆ. ತುಮಕೂರು ಕೈಗಾರಿಕಾ ಟೌನ್ ಶಿಪ್ ಗೆ ಪ್ರಧಾನಿ ಶಿಲಾನ್ಯಾಸ ಮಾಡಲಿದ್ದಾರೆ. ಇದನ್ನುಓದಿ :- ಬಿ.ಎಸ್ ಯಡಿಯೂರಪ್ಪ ಇಲ್ಲದೇ ಸಿದ್ದರಾಮಯ್ಯ ಗೆಲ್ಲೋಕೆ ಆಗಲ್ಲ – ಸಿ.ಎಂ ಇಬ್ರಾಹಿಂ
ವೇದಿಕೆಯಲ್ಲಿ ಪ್ರಧಾನಿ ಮೋದಿ ಜತೆ 15 ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath singh) , ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಗೃಹಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಮುರುಗೇಶ್ ನಿರಾಣಿ, ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ರಾಜ್ಯಸಭಾ ಸದಸ್ಯ ಜಗ್ಗೇಶ್, ಸಂಸದ ಬಸವರಾಜು, ಶಾಸಕರಾದ ಜ್ಯೋತಿ ಗಣೇಶ್, ಎಂ.ಚಿದಾನಂದ, ಎ.ಎಸ್.ಜಯರಾಂ, ರಾಜೇಶ್ ಗೌಡ ಗೆ ವೇದಿಕೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಇದನ್ನುಓದಿ :- ಬಿಜೆಪಿಯ ಹುನ್ನಾರ ಆರ್ ಎಸ್ ಎಸ್ ಕುತಂತ್ರಕ್ಕೆ ಬಲಿಯಾಗಬೇಡಿ – ಕುಮಾರಸ್ವಾಮಿ