ಫೆ. 6 ರಂದು ಕರುನಾಡಿಗೆ ಪ್ರಧಾನಿ ನರೇಂದ್ರ ಮೋದಿ (NARENDRA MODI)ಆಗಮಿಸಲಿದ್ದು, ಬೆಂಗಳೂರು ನಗರ ಮತ್ತು ತುಮಕೂರು (TUMUKURU) ಜಿಲ್ಲೆಯ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕಲ್ಯಾಣ ಕರ್ನಾಟಕ ಆಯ್ತು ಇದೀಗ ಹಳೇ ಮೈಸೂರು ಭಾಗದ ಮೇಲೆ ಮೋದಿ ಫೋಕಸ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಬ್ಯಾಕ್ ಟು ಬ್ಯಾಕ್ ಎಂಟ್ರಿ ಯಿಂದ ಕಾಂಗ್ರೆಸ್ –ಜೆಡಿಎಸ್ ಗೆ ಫುಲ್ ಟೆನ್ಷನ್ ಶುರುವಾಗಿದೆ. ಫೆ.6 ರಂದು ಬೆಳಿಗ್ಗೆ 8:20ಕ್ಕೆ ದೆಹಲಿಯಿಂದ ವಿಶೇಷ ವಿಮಾನದ ಬೆಂಗಳೂರಿಗೆ ಮೋದಿ ಆಗಮಿಸಲಿದ್ದು, 10:55 ಕ್ಕೆ ಬೆಂಗಳೂರು ಏರ್ಪೋರ್ಟ್ ತಲುಪಲಿದ್ದಾರೆ. ಏರ್ಪೋರ್ಟ್ ನಿಂದ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರು ಅಂತರಾರಾಷ್ಟ್ರೀಯ ಎಕ್ಸಿಬಿಷನ್ ಸೆಂಟರ್ ಪ್ರಯಾಣ ಬೆಳಸಲಿದ್ದಾರೆ. 11:25 ಕ್ಕೆ ರಸ್ತೆ ಮೂಲಕ ಬಿ ಐ ಇ ಸಿ ತಲುಪಲಿರುವ ಮೋದಿ,ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಇದನ್ನು ಓದಿ :- ಸತ್ತರೂ ಮತ್ತೊಮ್ಮೆ ಬಿಜೆಪಿಯೊಂದಿಗೆ ಮೈತ್ರಿ ಇಲ್ಲ- ನಿತೀಶ್ ಕುಮಾರ್
ಮಧ್ಯಾಹ್ನ 2:45 ಕ್ಕೆ ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ತುಮಕೂರು ಜಿಲ್ಲಾ ಪ್ರವಾಸ ಮಾಡಲಿದ್ದು, ಸಂಜೆ 4:30ಕ್ಕೆ ಹೆಚ್.ಎ. ಎಲ್ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಉದ್ಘಾಟನೆ ಮಾಡಲಿದ್ದಾರೆ. ಜಲಜೀವನ್ ಮಿಷನ್ ಯೋಜನೆಗಳನ್ನು ಉದ್ಘಾಟನೆ ಮಾಡಲಿರುವ ಮೋದಿ, ಸಂಜೆ 4:40ಕ್ಕೆ ತುಮಕೂರು ಹೆಲಿಪ್ಯಾಡ್ ನಿಂದ ಬೆಂಗಳೂರು ಏರ್ಪೋರ್ಟ್ ನತ್ತ ಪ್ರಯಾಣ ಮಾಡಲಿದ್ದಾರೆ. ಸಂಜೆ 7:20ಕ್ಕೆ ಬೆಂಗಳೂರು ಏರ್ಪೋರ್ಟ್ ನಿಂದ ದೆಹಲಿಗೆ ಹಿಂತಿರುಗಲಿದ್ದಾರೆ. ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೆಹಲಿ ತಲುಪಲಿದ್ದಾರೆ.
ಇದನ್ನು ಓದಿ :- ಲಕ್ಷ್ಮಿ ವಿರುದ್ಧ ರಮೇಶ್ ಜಾರಕಿಹೊಳಿ ವಿಷ ಕನ್ಯೆ ಪದ ಬಳಕೆಗೆ ಚನ್ನರಾಜ ಹಟ್ಟಿಹೊಳಿ ಆಕ್ಷೇಪ