ರಾಜ್ಯದಲ್ಲಿನ ವಿಧಾನಸಭೆ ಚುನಾವಣೆ (Vidhanasabha election) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra modi) ಪದೇ ಪದೇ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಒಂದು ತಿಂಗಳ ಅಂತರದಲ್ಲಿ ಮೂರನೇ ಬಾರಿಗೆ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಹೈದರಾಬಾದ್ ಕರ್ನಾಟಕ, ಕಿತ್ತೂರು ಕರ್ನಾಟಕದ ಬಳಿಕ ದಕ್ಷಿಣ ಕರ್ನಾಟಕದತ್ತ ಮೋದಿ ಚಿತ್ತ.
ಕಲ್ಪತರು ನಾಡು ತುಮಕೂರು (Tumakuru) ಜಿಲ್ಲೆಯಲ್ಲಿ ಮತಬೇಟೆಗೆ ಮೋದಿ ರೆಡಿಯಾಗಿದ್ದಾರೆ. ಫೆಬ್ರವರಿ 6ರಂದು ತುಮಕೂರಿಗೆ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಹೆಚ್ಎ ಎಲ್ ನ ಹೆಲಿಕಾಪ್ಟರ್ ತಯಾರಿಕಾ ಘಟಕ ಉದ್ಘಾಟನಾ ನೆಪದಲ್ಲಿ ಮೋದಿ ತುಮಕೂರಿಗೆ ಬರುತ್ತಿದ್ದಾರೆ. ಹಲವು ದಿನಗಳಿಂದ ಹೆಚ್ಎಎಲ್ ಹೆಲಿಕಾಪ್ಟರ್ (HAL helicopter) ತಯಾರಿಕಾ ಘಟಕ ನೆನೆಗುದಿಗೆ ಬಿದ್ದಿದೆ. ಇದೀಗ ಚುನಾವಣಾ ಹೊತ್ತಲ್ಲಿ ಘಟಕದ ಉದ್ಘಾಟನೆಗೆ ಮೋದಿ ಮುಂದಾಗಿದ್ದಾರೆ. ಇದನ್ನು ಓದಿ :- ಪೊಲೀಸ ರಿಂದ ಸುಲಿಗೆ ಆರೋಪ – ಟ್ವೀಟ್ ಮಾಡಿ ಅಳಲು ತೋಡಿಕೊಂಡ ಸಂತ್ರಸ್ತೆ
ಮೋದಿ ಜಲಜೀವನ್ ಮಿಷನ್ ನ ಹಲವು ಯೋಜನೆಗಳ ಶೀಲಾನ್ಯಾಸ ನೆರವೇರಿಸಲಿದ್ದಾರೆ. ಮೋದಿ ಪ್ರವಾಸ ಹಿನ್ನೆಲೆ ಗೃಹ ಸಚಿವ ಆರಗ ಜ್ಞಾನೇಂದ್ರ (Araga jnanendra) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಚಿವ ಆರಗ ಜ್ಞಾನೇಂದ್ರ ಚರ್ಚೆ ನಡೆಸಿದ್ದಾರೆ.
ಇದನ್ನು ಓದಿ :- ಇಂದಿನಿಂದ ಪಕ್ಷ ಬಲವರ್ಧನೆಗೆ ರೆಡ್ಡಿ ಕಲ್ಯಾಣರಥಯಾತ್ರೆ ಆರಂಭ