ಕಲಬುರಗಿಯ (Kalaburagi) ಕಮಲಾಪುರ (kamalapura) ತಾಲೂಕಿನ ಹೊರವಲಯದಲ್ಲಿ ಭೀಕರ ಬಸ್ ದುರಂತ ಸಂಭವಿಸಿ ಮೃತಪಟ್ಟ ಪ್ರಯಾಣಿಕರ ಸಂಖ್ಯೆ 7ಕ್ಕೇರಿದೆ. ಇವರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ.
ಗೋವಾದಿಂದ (Goa) ಖಾಸಗಿ ಬಸ್ ಹೈದರಾಬಾದ್ ಗೆ (Hyderabad)ತೆರಳುತ್ತಿದ್ದಾಗ ಚಾಲಕನ ವೇಗದ ಅಜಾಗರೂಕತೆ ಚಾಲನೆಯಿಂದ ಬಸ್ ಪಲ್ಟಿಯಾಗಿ ಟೆಂಪೊಗೆ ಡಿಕ್ಕಿ ಹೊಡೆದಿದೆ. ಕಮಲಾಪುರ ಹೊರವಲಯದ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ.ಖಾಸಗಿ ಬಸ್ ನಲ್ಲಿ 35ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಸುಮಾರು 15 ಮಂದಿಗೆ ಗಾಯಗಳಾಗಿದ್ದು 12 ಜನರನ್ನು ರಕ್ಷಿಸಲಾಗಿದೆ. ಗಾಯಗೊಂಡವರನ್ನು ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೈದರಾಬಾದ್ ನಿಂದ ಗೋವಾಕ್ಕೆ ಪ್ರವಾಸ ಹೋಗಿದ್ದರು. ಹಿಂತಿರುಗಿ ಬರುವಾಗ ಈ ಅಪಘಾತ ಸಂಭವಿಸಿದೆ, ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಜಾಸ್ತಿ ಸ್ಪೀಡ್ನಲ್ಲಿ ಹೋಗದಂತೆ ಚಾಲಕನಿಗೆ ಪ್ರಯಾಣಿಕರು ಹೇಳಿದ್ದರಂತೆ. ದಯವಿಟ್ಟು ಸ್ಪೀಡ್ ಕಡಿಮೆ ಮಾಡುವಂತೆ ಕೇಳಿಕೊಂಡಿದ್ದರೂ, ಪ್ರಯಾಣಿಕರ ಮಾತು ಕೇಳದೆ ಚಾಲಕ ಜೋರಾಗಿ ಬಸ್ಸು ಓಡಿಸುತ್ತಿದ್ದ ಎನ್ನಲಾಗಿದೆ.
ಇನ್ನು ಸಾವನ್ನಪ್ಪಿದವರನ್ನ ಅರ್ಜುನ್ ಕುಮಾರ್ (37) ಪತ್ನಿ ಸರಳಾದೇವಿ (32 ) ಬಿವಾನ್ (4) ಅರ್ಜುನಕುಮಾರನ ಮಗು, ದೀಕ್ಷಿತ್ ( 9 ) ಅನಿತಾ ರಾಜು (40) ಶಿವಕುಮಾರ (35) ರವಾಲಿ (30) ಶಿವಕುಮಾರನ ಹೆಂಡತಿ ಎಂದು ಗುರುತಿಸಲಾಗಿದೆ. ಒಂದು ಕುಟುಂಬದ 21, ಇನ್ನೊಂದು ಕುಟುಂಬದ 11 ಜನ, ಓರ್ವ ಡ್ರೈವರ್ ಇಬ್ಬರು ಕ್ಲೀನರ್ ಗೋವಾ ಟ್ರೀಪ್ ತೆರಳಿದ್ದರು. ನಿನ್ನೆ ಮಗುವಿನ ಜನ್ಮದಿನಾಚರಣೆ ಮಾಡಿ ಸಂಭ್ರಮಿಸಿದ್ದರು.ಈ ಕುರಿತು ಹೇಳಿಕೆ ನೀಡಿರುವ ಸಾರಿಗೆ ಸಚಿವ ಬಿ ಶ್ರೀರಾಮುಲು, ಖಾಸಗಿ ಬಸ್ಸು-ಟೆಂಪೊ ಡಿಕ್ಕಿಯಾಗಿ ನಂತರ ಬಸ್ಸು ಹೊತ್ತಿ ಉರಿದ ದುರ್ಘಟನೆಯಲ್ಲಿ 7 ಮಂದಿ ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ : – PRIYANAKA GANDHI – ಸೋನಿಯಾ ಬಳಿಕ ಪ್ರಿಯಾಂಕ ಗಾಂಧಿಗೂ ಕೊರೊನಾ ಪಾಸಿಟಿವ್