ವಕೀಲೆ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ (Lakshmi chandra victroria gowri ) ಅವರನ್ನು ಮದ್ರಾಸ್ ಹೈಕೋರ್ಟ್ (Madras highcourt ) ಹೆಚ್ಚುವರಿ ಜಡ್ಜ್ ಆಗಿ ನೇಮಕ ಮಾಡಲಾಗಿದೆ. ರಾಜಕೀಯ ಪ್ರೇರಿತವಾದ ಈ ನೇಮಕವನ್ನು ತಡೆ ಹಿಡಿಯಬೇಕು ಎಂದು ರಾಜು ರಾಮಚಂದ್ರನ್ ಸೇರಿ ಕೆಲವು ಹಿರಿಯ ವಕೀಲರು ಅರ್ಜಿ ಸಲ್ಲಿಸಿದ್ದು, ತುರ್ತು ವಿಚಾರಣೆ ನಡೆಸಲು ಸಿಜೆಐ ಚಂದ್ರಚೂಡ್ ನೇತೃತ್ವದ ಪೀಠ ಸಮ್ಮತಿಸಿದೆ.
ಫೆಬ್ರವರಿ 10ಕ್ಕೆ ನಿಗದಿಯಾಗಿದ್ದ ವಿಚಾರಣೆಯನ್ನು ಫೆಬ್ರವರಿ 7ರಂದು ನಡೆಸಿ, ನೇಮಕಾತಿಯಲ್ಲಿ ಆದ ಲೋಪದೋಷ ಸರಿಪಡಿಸುವುದಾಗಿ ಅರ್ಜಿದಾರರಿಗೆ ನ್ಯಾಯಪೀಠ ಭರವಸೆ ನೀಡಿದೆ. ಆದರೆ ವಿಕ್ಟೋರಿಯಾ ಗೌರಿ ಅವರು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಮಂಗಳವಾರವೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ (Supreme court) ತೀರ್ಪಿನ ಬಳಿಕ ಏನಾಗಲಿದೆ ಎಂಬ ಕುತೂಹಲ ಮೂಡಿದೆ. ಮದ್ರಾಸ್ ಹೈಕೋರ್ಟ್ ನ ಮದುರೈ ಪೀಠದಲ್ಲಿ ಕೇಂದ್ರ ಸರಕಾರದ ಪರ ವಕೀಲೆಯಾಗಿ ಕೆಲಸ ಮಾಡಿದ್ದ ವಿಕ್ಟೋರಿಯಾ ಗೌರಿ ಅವರಿಗೆ ಪದೋನ್ನತಿ ನೀಡಿ ಹೈಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿತ್ತು. ಗೌರಿ ಸೇರಿ 11 ವಕೀಲರು, ನ್ಯಾಯಾಂಗ ಅಧಿಕಾರಿಗಳಿಗೆ ನ್ಯಾಯಮೂರ್ತಿಗಳಾಗಿ ಸರಕಾರ ಬಡ್ತಿ ನೀಡಿ ಸೋಮವಾರ ಅಧಿಸೂಚನೆ ಹೊರಡಿಸಿತ್ತು. ಕೊಲಿಜಿಯಂ ಕ್ರಮ, ಸರಕಾರದ ನೇಮಕಾತಿ ಆದೇಶ ಪ್ರಶ್ನಿಸಿ ಒಂದು ವರ್ಗದ ವಕೀಲರು ಸುಪ್ರೀಂಕೋರ್ಟ್ ಕದ ತಟ್ಟಿದರೆ, ಮತ್ತೊಂದು ವರ್ಗದ ವಕೀಲರು ವಿಕ್ಟೋರಿಯಾ ಗೌರಿ ಬೆಂಬಲಿಸಿ ಸಿಜೆಐ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ : – ಮತಾಂಧರು ಪಠಾಣ್ ನ ಬ್ಯಾನ್ ಮಾಡಲು ಬಯಸಿದ್ದರು – ಪ್ರಕಾಶ್ ರಾಜ್