ತಿಪಟೂರು ಸಚಿವ ಬಿ.ಸಿ.ನಾಗೇಶ್ ಮನೆ ಮುಂದೆ ಪ್ರತಿಭಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ NSUI ಕಾರ್ಯಕರ್ತರಿಗೆ ಜಾಮೀನು ದೊರೆತಿದೆ.
ವಿಚಾರಣೆ ನಡೆಸಿ ಆದೇಶ ನೀಡಿದ ತಿಪಟೂರು ಜೆಎಂಎಫ್ ಸಿ ನ್ಯಾಯಾಲಯ ಬಂಧಿತರಾಗಿದ್ದ 24 ಮಂದಿಗೂ ಜಾಮೀನು ಮಂಜೂರು ಮಾಡಿದ್ದಾರೆ. ಸದ್ಯ ತುಮಕೂರು ಕಾರಾಗೃಹದಲ್ಲಿರೋ ಬಂಧಿತರಿದ್ದಾರೆ. ನಾಳೆ ಎನ್‌ಎಸ್‌ಯುಐ ಕಾರ್ಯಕರ್ತರು ಬಿಡುಗಡೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ :- ಶಿಕ್ಷಣ ಸಚಿವರ ಮನೆ ಮೇಲಿನ ದಾಳಿ ಪ್ರಕರಣ – ಬಂಧಿತರನ್ನ ಭೇಟಿ ಮಾಡಲಿರೋ ಡಿಕೆಶಿ
ನಮ್ಮ ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿ ಪ್ರತಿಭಟನೆ ನಡೆಸಿದ್ದಾರೆ. ಆದ್ರೆ ಉದ್ದೇಶ ಪೂರ್ವಕವಾಗಿ ಮಕ್ಕಳನ್ನು ಬಂಧಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಮ್ಮ ಮಕ್ಕಳು ಪ್ರತಿಭಟನೆ ನಡೆಸಿದ್ರು. ಪ್ರತಿ ದಿನ ಸಾವಿರಾರು ಜನರು ಪ್ರತಿಭಟನೆ ಮಾಡ್ತಾರೆ. ಅಂತಹದುರಲ್ಲಿ ಈ ಮಕ್ಕಳು ಏನು ದೊಡ್ಡ ತಪ್ಪು ಮಾಡಿಲ್ಲ. ಸಚಿವರ ಮನೆಯಲ್ಲಿ ಸಿಸಿಟಿವಿ ಇರಲ್ವಾ, ಸೆಕ್ಯೂರಿಟಿ ಇರಲ್ವಾ, ಯಾರನ್ನು ಯಾಕೆ ಕೇಳಬೇಕು, ವಿಡಿಯೋದಲ್ಲಿ ನೋಡಿದ್ರೆ ಎಲ್ಲಾ ಗೊತ್ತಾಗುತ್ತೆ. ಚಡ್ಡಿಗೂ ಬೆಂಕಿ ಹಚ್ಚಿಲ್ಲ, ಪೇಪರ್ಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಸಿಸಿಟಿವಿ ವಿಡಿಯೋ ನೋಡಿ ತನಿಖೆ ಮಾಡಿ ದಯವಿಟ್ಟು ನಮ್ಮ ಮಕ್ಕಳನ್ನು ಬಿಟ್ಟು ಬಿಡಿ ಎಂದು ಪೋಷಕರು ಅಳಲು ತೊಡಿಕೊಂಡಿದ್ದರು.
ಇದನ್ನೂ ಓದಿ :- ಪ್ರವಾದಿ ಬಗ್ಗೆ ಅವಹೇಳನ ವಿಚಾರ- ಕೇಂದ್ರ ಸರ್ಕಾರ ಕ್ಷಮೆ ಕೇಳಬೇಕು ಎಂದ ಜಿ. ಪರಮೇಶ್ವರ್