ಪಿಎಸ್ ಐ (PSI) ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕನೊಬ್ಬನನ್ನು ಸಿಐಡಿ ಬಂಧಿಸಿದೆ. ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಬಂಧಿತ ಆರೋಪಿ. ಈ ಮೂಲಕ ಈ ಪ್ರಕರಣದ ಬಿಸಿ ಕಾಂಗ್ರೆಸ್ ಬುಡಕ್ಕೂ ಬಂದಿದೆ. ಬ್ಲೂಟೂತ್ ಡಿವೈಸ್ ಬಳಕೆ ಮಾಡಿ ಪರೀಕ್ಷೆ ಬರೆಸುವಲ್ಲಿ ಅಕ್ರಮ ಎಸಗಿದ್ದ ಈತನನ್ನು ಅಫಜಲಪುರ ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ಬಂಧಿಸಲಾಗಿದೆ. ಮಹಾಂತೇಶ್ ಪಾಟೀಲ್ ಕಾಂಗ್ರೆಸ್ ಅವಧಿಯಲ್ಲಿ ಹಲವು ಉನ್ನತ ಸ್ಥಾನ ಪಡೆದಿದ್ದ.
ಇದನ್ನು ಓದಿ :– ಇದು ಕಾಂಗ್ರೆಸ್ ಸರ್ಕಾರ ಅಲ್ಲ, ಅವ್ರನ್ನ ಹಿಡಿ, ಇವ್ರನ್ನ ಬಿಡಿ ಎನ್ನುವುದಕ್ಕೆ – ಅರಗ ಜ್ಞಾನೇಂದ್ರ
ಈ ಹಿಂದೆ ಸಿದ್ದರಾಯ್ಯ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಗಳ ಶಾಶ್ವತ ಆಯೋಗದ ಸದಸ್ಯನಾಗಿದ್ದ. ಶನಿವಾರ ಮಹಾಂತೇಶ್ ಪಾಟೀಲ್ ಹಾಗೂ ಆತನ ಸಹೋದರ ಆರ್.ಡಿ.ಪಾಟೀಲ್ 101 ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮಹಾಂತೇಶ್ ಪಾಟೀಲ್ ಬಂಧನ ಮಾಡುವ ವೇಳೆ ಹೈಡ್ರಾಮಾ ಮಾಡಿದ್ದಾನೆ. ನಮ್ಮ ಹಿಂದೆ ಕಾಂಗ್ರೆಸ್ ನಾಯಕರಿದ್ದಾರೆ. ಅರೆಸ್ಟ್ ಮಾಡುವ ಮುನ್ನ ಎಚ್ಚರ ಎಂದು ಸಿಐಡಿ ಪೊಲೀಸರಿಗೆ ಅವಾಜ್ ಹಾಕಿದ್ದಾನೆ. ಇದರಿಂದ ಆಕ್ರೋಶಗೊಂಡ ಡಿವೈಎಸ್ಪಿ ಶಂಕರಗೌಡ, ಆರೋಪಿ ಮಹಾಂತೇಶ್ ಪಾಟೀಲ್ ಕೊರಳ ಪಟ್ಟಿ ಹಿಡಿದು ಎಳೆದುಕೊಂಡು ಹೋಗಿದ್ದಾರೆ. ಕಲಬುರಗಿ ನಗರದ ಐವಾನ್ ಏ ಶಾಹಿ ಅತಿಥಿ ಗೃಹದಲ್ಲಿರುವ ಸಿಐಡಿ ಕಚೇರಿಗೆ ಮಹಾಂತೇಶ್ ಪಾಟೀಲ್ ನನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನು ಓದಿ :– ಇದು ಕಾಂಗ್ರೆಸ್ ಸರ್ಕಾರ ಅಲ್ಲ, ಅವ್ರನ್ನ ಹಿಡಿ, ಇವ್ರನ್ನ ಬಿಡಿ ಎನ್ನುವುದಕ್ಕೆ – ಅರಗ ಜ್ಞಾನೇಂದ್ರ