ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Maan ) ವಿಚ್ಛೇದವಾಗಿ 6 ವರ್ಷಗಳ ನಂತರ ಜುಲೈ 7ರಂದು ಎರಡನೇ ಮದುವೆಯಾಗುತ್ತಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ( Arvind Kejriwal ) ಮದುವೆಯಲ್ಲಿ ಭಾಗವಹಿಸಲಿದ್ದಾರೆ.
ಸಿಎಂ ತಮ್ಮ ಅಧಿಕೃತ ನಿವಾಸದಲ್ಲಿ ವಿವಾಹವಾಗಲಿದ್ದು, ಸಮಾರಂಭದಲ್ಲಿ ಆಪ್ತರು ಹಾಗೂ ಸಂಬಂಧಿಕರು ಮಾತ್ರ ಭಾಗವಹಿಸಲಿದ್ದಾರೆ. ಪಂಜಾಬ್ ಸಿಎಂ ವಿವಾಹವಾಗುತ್ತಿರುವ ವಧು ಡಾ. ಗುರುಪ್ರೀತ್ ಕೌರ್ ಎಂಬಿಬಿಎಸ್ ಪದವೀಧರೆ. ಇದನ್ನೂ ಓದಿ : – ವಾಯುಪಡೆಯಲ್ಲಿ ಇತಿಹಾಸ ಸೃಷ್ಟಿ- ಬೀದರ್ ನಲ್ಲಿ ತಂದೆ ಮಗಳಿಂದ ಯುದ್ಧ ವಿಮಾನ ಹಾರಿಸಿ ಸಾಧನೆ!
ಭಗವಂತ್ ಮನ್ ಆರು ವರ್ಷಗಳ ಹಿಂದೆ ಮೊದಲ ಪತ್ನಿ ಇಂದರ್ ಪ್ರೀತ್ ಕೌರ್ ರಿಂದ ವಿಚ್ಛೇದನ ಪಡೆದಿದ್ದರು. ಮೊದಲ ಪತ್ನಿ ಮತ್ತು ಇಬ್ಬರು ಮಕ್ಕಳು ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ. ಮಾನ್ ಮಕ್ಕಳಿಬ್ಬರೂ ತಂದೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಂದಿದ್ದರು.
ಯಾರೀಕೆ ಗುರ್ಪ್ರೀತ್ ಕೌರ್?
ಭಗವಂತ್ ಮಾನ್ ಎರಡನೇ ಮದುವೆಯಾಗುತ್ತಿರುವ ಮಹಿಳೆ ಹೆಸರು ಡಾ. ಗುರ್ಪ್ರೀತ್ ಕೌರ್. ಭಗವಂತ್ ಮಾನ್ ಅವರ ಸಹೋದರಿ ಮತ್ತು ತಾಯಿ, ಮಾನ್ ಅವರಿಗಾಗಿ ಗುರ್ಪ್ರೀತ್ ಅವರನ್ನು ಆಯ್ಕೆ ಮಾಡಿದ್ದಾರೆ. ಗುರ್ಪ್ರೀತ್ ಅವರು ಹರ್ಯಾಣದ ಹಿಸ್ಸಾರ್ ಜಿಲ್ಲೆಯವರು. ಭಗವಂತ್ ಮಾನ್ ಮತ್ತು ಕೌರ್ ಅವರು ಕಳೆದ ಒಂದೂವರೆ ವರ್ಷಗಳಿಂದ ಪರಿಚಿತರು ಎನ್ನಲಾಗಿದೆ. ಮಾನ್ ಅವರಿಗಿಂತ ಗುರ್ಪ್ರೀತ್ ಅವರು 16 ವರ್ಷ ಚಿಕ್ಕವರು ಎನ್ನಲಾಗಿದೆ. ಗುರ್ಪ್ರೀತ್ ಅವರದು ಬಹಳ ಸರಳ ಕುಟುಂಬ. ಮಾನ್ ಅವರು ಪಂಜಾಬ್ ಸಿಎಂ ಆಗುವುದಕ್ಕೆ ಮುನ್ನವೇ ಮದುವೆ ಮಾತುಕತೆ ನಡೆದಿತ್ತು. ಆದರೆ ಚುನಾವಣೆ, ನಂತರ ಸಿಎಂ ಆಗಿ ಅಧಿಕಾರ ಸ್ವೀಕಾರ, ಕೆಲಸದ ಒತ್ತಡಗಳ ಮಧ್ಯೆ ಮದುವೆಯನ್ನು ಮುಂದೂಡಲಾಗಿತ್ತು. ಗುರ್ಪ್ರೀತ್ ಅವರು ತಾವು ಮದುವೆಯಾಗುತ್ತಿರುವ ಪಂಜಾಬ್ ಸಿಎಂ ಭಗವಂತ್ ಮಾನ್ ಅವರಿಗಿಂತ 16 ವರ್ಷ ಚಿಕ್ಕವರು. ಭಗವಂತ್ ಮಾನ್ ಅವರಿಗೆ 48 ವರ್ಷವಾದರೆ, ಗುರ್ಪ್ರೀತ್ ಅವರಿಗೆ 32 ವರ್ಷ.
ಇದನ್ನೂ ಓದಿ : – ಮುಸ್ಲಿಂ ಸಮುದಾಯಕ್ಕೆ ಉಪರಾಷ್ಟ್ರಪತಿ ಪಟ್ಟ? ರೇಸ್ ನಲ್ಲಿ ನಖ್ವಿ, ಆರಿಫ್ ಮೊಹಮ್ಮದ್ ಖಾನ್, ನಜ್ಮಾ ಹೆಪ್ತುಲ್ಲಾ !