ಅಜ್ಜಿ, ಅಮ್ಮನಂತ ಗುಣ ಇದ್ದ ಹುಡುಗಿ ಸಿಕ್ರೆ ಮದ್ವೆಯಾಗ್ತಾರಂತೆ ರಾಹುಲ್ ಗಾಂಧಿ!

ನಾನು ಮದುವೆಯಾಗುತ್ತೇನೆ. ಆದರೆ ಅವಳು ನನ್ನ ತಾಯಿ ಮತ್ತು ಅಜ್ಜಿ ಇಬ್ಬರ ಗುಣಗಳನ್ನು ಹೊಂದಿದ್ದರೆ ಉತ್ತಮ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ನಾನು ಮದುವೆಯಾಗುತ್ತೇನೆ. ಆದರೆ ಅವಳು ನನ್ನ ತಾಯಿ ಮತ್ತು ಅಜ್ಜಿ ಇಬ್ಬರ ಗುಣಗಳನ್ನು ಹೊಂದಿದ್ದರೆ ಉತ್ತಮ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ತಮ್ಮ ತಾಯಿ ಸೋನಿಯಾ ಗಾಂಧಿ (Sonia gandhi) ಮತ್ತು ಅಜ್ಜಿ ಇಂದಿರಾ ಗಾಂಧಿ (Indira Gandhi) ಇಬ್ಬರ ಗುಣಗಳನ್ನು ಹೊಂದಿರುವ ಹುಡುಗಿಯನ್ನು ನನ್ನ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆ ವೇಳೆ ಯೂಟ್ಯೂಬ್ ಚಾನೆಲ್ವೊಂದರ (You tube Channel) ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೇ ನನ್ನ ಮೊದಲ ಪ್ರೀತಿ ಮತ್ತು ನನ್ನ ಎರಡನೇ ತಾಯಿ ಎಂದಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಇದೇ ವೇಳೆ ಮೋಟರ್ಸೈಕಲ್ ಮತ್ತು ಸೈಕಲ್ಗಳನ್ನು ಓಡಿಸುವ ಬಗ್ಗೆ ತಮಗಿರುವ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಎಲೆಕ್ಟ್ರಿಕ್ ಮೋಟಾರ್ಗಳೊಂದಿಗೆ ಬೈಸಿಕಲ್ ಮತ್ತು ಮೌಂಟೇನ್ ಬೈಕ್ಗಳನ್ನು ತಯಾರಿಸುವ ಚೀನಾದ ಎಲೆಕ್ಟ್ರಿಕ್ ಕಂಪನಿಯನ್ನು ಪ್ರಸ್ತಾಪಿಸಿದ್ದಾರೆ. ಇದನ್ನು ಓದಿ : – ಭಾರತ ಸಿದ್ಧಪಡಿಸಿದ ಕೆಮ್ಮಿನ ಸಿರಪ್‌ನಿಂದ 18 ಮಕ್ಕಳ ಸಾವು- ಗ್ಯಾಂಬಿಯಾ ಬಳಿಕ ಉಜ್ಬೇಕಿಸ್ತಾನ ಆರೋಪ

Image

ಈ ಮಧ್ಯೆ ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಅವರ ಕೆನ್ನೆಯನ್ನು ಹಿಡಿದು ಮುದ್ದಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನು ಓದಿ : –  ಅಮಿತ್ ಶಾ ಬಂದ್ರೆ ಸದನ ನಡೆಸೋಕೆ ಏನು ? – ಸಿದ್ದರಾಮಯ್ಯ ಪ್ರಶ್ನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!