ರೈಲುಗಳಲ್ಲಿ ಮಕ್ಕಳಿಗಾಗಿ ‘ಬೇಬಿ ಬರ್ತ್’ – ಪ್ರಯಾಣಿಕರು ಫುಲ್ ಖುಷ್

ಪುಟ್ಟ ಮಕ್ಕಳನ್ನು ಕರೆದುಕೊಂಡು ರೈಲುಗಳಲ್ಲಿ ಸಂಚರಿಸುವ ಪೋಷಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ, ಇನ್ನು ಮುಂದೆ ರೈಲುಗಳಲ್ಲಿ ಮಕ್ಕಳಿಗಾಗಿ ‘ಬೇಬಿ ಬರ್ತ್’ ಇರಲಿವೆ.

ಶಿಶುಗಳೊಂದಿಗೆ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ರೈಲು ಪ್ರಯಾಣವನ್ನು ಹೆಚ್ಚು ಅನುಕೂಲಕರ ಮತ್ತು ಆರಾಮದಾಯಕವಾಗಿಸುವ ಸಲುವಾಗಿ ಭಾರತೀಯ ರೈಲ್ವೆ ಹೊಸ ಹೆಜ್ಜೆ ಇಟ್ಟಿದೆ. ಹಸುಗೂಸುಗಳನ್ನು ಕರೆದುಕೊಂಡು ಸಂಚರಿಸುವ ಪೋಷಕರಿಗೆ ಭಾರಿ ಅನುಕೂಲವಾಗಲಿ ಎಂದು ರೈಲುಗಳಲ್ಲಿ ಮಕ್ಕಳಿಗಾಗಿ ‘ಬೇಬಿ ಬರ್ತ್’ ಅಳವಡಿಸಲಾಗಿದೆ. ಆರಂಭಿಕ ಹಂತದಲ್ಲಿ ಲಖನೌ ಮೇಲ್‌ ರೈಲುಗಳ ಲೋವರ್‌ ಬರ್ತ್ ಗಳಿಗೆ ಬೇಬಿ ಬರ್ತ್ ಗಳನ್ನು ಅಳವಡಿಸಲಾಗಿದೆ. 770 ಮಿ.ಮೀ ಉದ್ದ, 255 ಮಿ.ಮೀ ಅಗಲ ಹಾಗೂ 76.2 ಮಿ.ಮೀ ಎತ್ತರದ ಬೇಬಿ ಬರ್ತ್ ಗಳನ್ನು ರೈಲುಗಳಲ್ಲಿ ಅಳವಡಿಸಲಾಗಿದೆ. ಇದನ್ನೂ ಓದಿ : – ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯೋದಕ್ಕೂ ಶಿಕ್ಷಣ ಇಲಾಖೆಯಲ್ಲಿ ನಡೆಯೋದಕ್ಕು ವ್ಯತ್ಯಾಸ ಇದೆ – ಬಸವರಾಜ್ ರಾಯರೆಡ್ಡಿ

ರೈಲುಗಳಲ್ಲಿ ಪ್ರಯಾಣಿಸುವ ಶಿಶುಗಳಿಗಾಗಿ ‘ಬೇಬಿ ಬರ್ತ್’ ಆಸನ ವ್ಯವಸ್ಥೆ ಇರಲಿದೆ. ಆರಂಭಿಕ ಹಂತದಲ್ಲಿ ಲಖನೌ ಮೇಲ್‌ ರೈಲುಗಳಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಅಳವಡಿಸಲಾಗಿದೆ. ಮಕ್ಕಳಿಗಾಗಿ ಅಳವಡಿಸಿರುವ ಈ ಆಸನಗಳು 770 ಮಿ.ಮೀ ಉದ್ದ, 255 ಮಿ.ಮೀ ಅಗಲ ಹಾಗೂ 76.2 ಮಿ.ಮೀ ಎತ್ತರ ಇರಲಿವೆ. 

‘ಪ್ರಯಾಣಿಕರ ಸಲಹೆ ಮೇರೆಗೆ ‘ಬೇಬಿ ಬರ್ತ್’ ಆಸನ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆತರೆ ಮುಂಬರುವ ದಿನಗಳಲ್ಲಿ ಈ ಸೇವೆಯನ್ನು ವಿಸ್ತರಿಸಲು ರೇಲ್ವೆ ಇಲಾಖೆ ನಿರ್ಧರಿಸಿದೆ. ‘ಬೇಬಿ ಬರ್ತ್’ ಆಸನ ವ್ಯವಸ್ಥೆಯ ಬಗ್ಗೆ ರೈಲ್ವೆ ವ್ಯವಸ್ಥೆಗಳ ಮಾಹಿತಿ ಕೇಂದ್ರದಲ್ಲಿ (ಸಿಆರ್‌ಐಎಸ್‌) ಅಗತ್ಯ ವಿವರಗಳನ್ನು ಒದಗಿಸಲಾಗಿದೆ. ಪ್ರಯಾಣಿಕರು ಅಗತ್ಯಕ್ಕೆ ತಕ್ಕಂತೆ ಬುಕ್ ಮಾಡಿಕೊಳ್ಳಬಹುದು. ಇದನ್ನೂ ಓದಿ : – 8 ಕೋಟಿ ವಂಚಿಸಿ ಓಡಿ ಹೋದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ- ಕಾಂಗ್ರೆಸ್ ನಾಯಕರ ವಿರುದ್ಧ ರಮ್ಯಾ ಕಿಡಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!