ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಗೆ ಕಾಂಗ್ರೆಸ್ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ (Mansoor ali khan) ಅವರನ್ನು ಕಣಕ್ಕೆ ಇಳಿಸಿದೆ.
ಒಟ್ಟು ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಸದ್ಯ ಕಾಂಗ್ರೆಸ್ ಬಳಿ 70 +1 ಮತಗಳು ಇವೆ. ಈ ಪೈಕಿ ಮೊದಲ ಅಭ್ಯರ್ಥಿಗೆ 45 ಮತಗಳ ಅಗತ್ಯ ಇದೆ. ಉಳಿದ ಮತಗಳನ್ನು ಎರಡನೇ ಅಭ್ಯರ್ಥಿಗೆ ಹಾಕಿದರೂ ಗೆಲುವು ಕಷ್ಟ. ಆದ್ರೂ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನ ಕಣಕ್ಕಿಳಿಸಿದೆ.ಮನ್ಸೂರ್ ಅಲಿ ಖಾನ್ ಹಿರಿಯ ಕಾಂಗ್ರೆಸ್ ಮುಖಂಡ ರೆಹಮಾನ್ ಖಾನ್ (Rehamankhan) ಪುತ್ರರಾಗಿದ್ದಾರೆ. ಸಿಎಲ್ಪಿ ನಾಯಕ ಸಿದ್ದರಾಮಯ್ಯ ( Siddaramaiah ) ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮನ್ಸೂರ್ ಅಲಿ ಖಾನ್ ಗೆ ಬಿ ಫಾರಂ ಕೊಡಲಾಗಿದೆ.ಜೆಡಿಎಸ್ (JDS) ಕುಪೇಂದ್ರ ರೆಡ್ಡಿಯನ್ನ ಕಣಕ್ಕಿಳಿಸಿದ್ದು ಈಗ ಬಿಜೆಪಿಯಿಂದ ಬೆಂಬಲ ಕೋರುವ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಬಿಜೆಪಿ ಬೆಂಬಲವನ್ನ ಪಡೆದರೆ ಜೆಡಿಎಸ್ ಗೆ ಕೋಮುವಾದಿ ಪಟ್ಟ ಕಟ್ಟಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಇದನ್ನೂ ಓದಿ : –ರಾಜ್ಯಸಭೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ – ಡಿಕೆಶಿ ವಿರುದ್ಧ ಮುದ್ದಹನುಮೇಗೌಡ ಅಸಮಾಧಾನ