ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಆಡಿಯೋ ಬಾಂಬ್ ಸಿಡಿಸಿದ್ದರು. ಸದ್ಯ ಈ ವಿಚಾರವಾಗಿ ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ (D.K SHIKUMAR ) ಪ್ರತಿಕ್ರಿಯಿಸಿದ್ದು, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ.
ಅವರಿಗೆ ಮಂತ್ರಿ ಆಗಬೇಕಿತ್ತು, ಅವರ ಪಕ್ಷ ಕೊಟ್ಟಿಲ್ಲ. ಹೀಗಾಗಿ ಹತಾಶೆಯಿಂದ ಹೀಗೆ ಮಾತಾಡುತ್ತಿದ್ದಾರೆ. ಅವರ ಮಾತುಗಳನ್ನು ಕೇಳಿದರೆ ಅಯ್ಯೋ ಅನ್ನಿಸುತ್ತೆ. ರಮೇಶ್ ಜಾರಕಿಹೊಳಿಯನ್ನು ಬಿಜೆಪಿಯವರು ಆಸ್ಪತ್ರೆಗೆ ತೋರಿಸಬೇಕು. ತನಿಖೆ ಮಾಡಿಸಲು ಜಾರಕಿಹೊಳಿಯನ್ನು ಯಾರು ತಡೆದಿದ್ದಾರೆ. ನಾನೇನು ಪ್ರತಿಕ್ರಿಯೆ ಕೊಡಲ್ಲ, ಯಾವ ತನಿಖೆ ಬೇಕಾದ್ರೂ ಮಾಡಲಿ ಎಂದು ವ್ಯಂಗ್ಯವಾಡಿದವರು. ಇದನ್ನುಓದಿ :- ಸರ್ಕಾರದ ಪ್ರತಿಯೊಂದು ಯೋಜನೆಗಳು ತಲುಪುವ ನಿಟ್ಟಿನಲ್ಲಿ ಬಜೆಟ್ ಮಂಡಿಸಲಾಗಿದೆ – ಅಶ್ವಥ್ ನಾರಾಯಣ್
ಇನ್ನು ವಿದೇಶದಲ್ಲಿ ಡಿ.ಕೆ.ಶಿವಕುಮಾರ್ ಫ್ಲ್ಯಾಟ್ ಇದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, 10% ಆದರೂ ಬರುವ ಹಾಗೆ ಮಾಡಿ, ನಾನೇ ಹೋಗಿ ಬರುತ್ತೇನೆ. ಐ ವಿಷ್ ಹಿಮ್ ಆಲ್ ದ ಬೆಸ್ಟ್, ಶುಭವಾಗಲಿ ಯಶಸ್ಸಾಗಲಿ ಎಂದು ಜಾರಕಿಹೊಳಿಗೆ ಟಾಂಗ್ ನೀಡಿದರು. ಯಾವ ಆಸ್ತಿ, ಯಾವ ಆಡಿಯೋ ಬೇಕಾದರೂ ಮಾಡಿಕೊಳ್ಳಲಿ. ಅವರಲ್ಲಿ ಏನೇನು ಪಟ್ಟುಗಳು, ಆಸನಗಳು ಇದ್ದಾವೆ ತೋರಿಸಲಿ ನೋಡಿಕೋಳ್ತಿವಿ ಎಂದು ಜಾರಕಿಹೊಳಿಗೆ ಡಿಕೆಶಿ ತಿರುಗೇಟು ನೀಡಿದ್ರು.
ಇದನ್ನುಓದಿ :- ಮೇಕೆದಾಟು ಯೋಜನೆಗೆ ಸಾವಿರ ಕೋಟಿ ಇಟ್ಟಿದ್ದೀವಿ ಅಂತಾರೆ – ಯಾಕೆ ಇನ್ನೂ ಕಾಮಗಾರಿ ಆರಂಭವಾಗಿಲ್ಲ – ಡಿ.ಕೆ ಶಿವಕುಮಾರ್