ರಾಜ್ಯದ ಮಸೀದಿಗಳಲ್ಲಿ ಆಜಾನ್ (AZAN )ನಿಷೇಧಕ್ಕೆ ಆಗ್ರಹಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಷ್ಟು ದಿನ ಇಲ್ಲದ ಆಜಾನ್ ವಿಚಾರ ಈಗ ಏಕೆ ಬಂದಿದೆ? ಇದೇ ರೀತಿ ಮಾಡ್ತಾ ಹೋದರೆ ಬಿಜೆಪಿ ಸರ್ವನಾಶವಾಗುತ್ತೆ. ಇದು ಉತ್ತರ ಪ್ರದೇಶವಲ್ಲ, ಕರ್ನಾಟಕ (KARNATAKA). ರಾಜ್ಯದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡಿ. ಡಾ.ಮನಮೋಹನ್ ಸಿಂಗ್ ಅವರನ್ನು (Manmohan singh) ಮೌನಿ ಸಿಂಗ್ ಎನ್ನುತ್ತಿದ್ದರು. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಮೌನಿ ಆಗಿದ್ದಾರೆ. ಹಿಜಾಬ್ ವಿಚಾರ ಸರ್ಕಾರ ನಿಯಂತ್ರಿಸಿದ್ದರೆ ಇದು ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ. ರಾಜ್ಯದಲ್ಲಿರುವುದು ರಿಮೋಟ್ ಸರ್ಕಾರ. ಆರ್ಎಸ್ಎಸ್ ಮೆಚ್ಚಿಸುವುದಕ್ಕೆ ನಡೆಸುತ್ತಿರುವ ಸರ್ಕಾರವಾಗಿದೆ.
ಇದನ್ನೂ ಓದಿ- ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು- ಸೆಂಟ್ರಲ್ ಬ್ಯಾಂಕ್ ಗವರ್ನರ್ , 26 ಸಂಪುಟ ಸಚಿವರು ರಾಜೀನಾಮೆ !
ದೇಗುಲದಲ್ಲಿ ಹಿಂದೂಯೇತರರ ವ್ಯಾಪಾರಕ್ಕೆ ನಿರ್ಬಂಧ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುವುದಿಲ್ಲ. ಧಾರ್ಮಿಕ ದತ್ತಿ ಕಾಯ್ದೆಯನ್ನು ತಂದವರೇ ಕಾಂಗ್ರೆಸ್ ನಾಯಕರು. ಹೀಗಿರಬೇಕಾದರೆ ಇನ್ನೆಲ್ಲಿ ಈ ಬಗ್ಗೆ ಮಾತಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಜನರ ಪೂರ್ಣ ಆಶೀರ್ವಾದ ಸಿಗದಿದ್ದರೂ 2 ಬಾರಿ ಸಿಎಂ ಆಗಿದ್ದೆ. ನಾನು ಗಾಳಿಪಟ, ಲಕ್ಕಿಡಿಪ್ ಸಿಎಂ ಅಂತ ಕುಮಾರಸ್ವಾಮಿ ಹೇಳಿದ್ರು.
ನಿಮ್ಮ ಮನಸ್ಸಿನಲ್ಲಿ ನಿಜವಾದ ಹಿಂದುತ್ವವೇ ಇರೋದಾದರೆ. ಬೆಲೆಏರಿಕೆಯ ವಿರುದ್ಧ ಹೋರಾಟ ಮಾಡಲು ಬನ್ನಿ. ಅಧಿಕಾರ ಹಿಡಿಯುವುದಕ್ಕೆ ಮಾಡಬಾರದ ಹೇಸಿಗೆ ಕೆಲಸ ಮಾಡಿದ್ದೀರಿ. ನೀವು ಗಾಜಿನ ಮನೆಯಲ್ಲಿ ಇದ್ದೀರಿ, ನಾವು ರೋಡ್ನಲ್ಲಿದ್ದೇವೆ. ನಾವು ನಿಮಗೆ ಕಲ್ಲು ಹೊಡೆಯಬಹುದು, ಆದ್ರೆ ನಿಮ್ಮಿಂದ ಆಗಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ – ಮಸೀದಿ ಸೌಂಡ್ ಬ್ಯಾನ್ ಗೆ ಮುಂದಾದ ಹಿಂದೂ ಸಂಘಟನೆಗಳು