ಎಲ್ಲ ಕಡೆಗಳಲ್ಲೂ ಆರ್ಆರ್ಆರ್ ಸಿನಿಮಾ ಅಬ್ಬರ ಜೋರಾಗಿದೆ. ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಈ ಸಿನಿಮಾ ನೋಡಲು ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಫ್ಯಾನ್ಸ್ ಮುಗಿಬೀಳುತ್ತಿದ್ದಾರೆ.
ಎಲ್ಲ ಕಡೆಗಳಲ್ಲೂ ಆರ್ಆರ್ಆರ್ ಸಿನಿಮಾ ಅಬ್ಬರ ಜೋರಾಗಿದೆ. ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಈ ಸಿನಿಮಾ ನೋಡಲು ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಫ್ಯಾನ್ಸ್ ಮುಗಿಬೀಳುತ್ತಿದ್ದಾರೆ. ಬಹುನಿರೀಕ್ಷಿತ ‘ಆರ್.ಆರ್.ಆರ್’ ಸಿನಿಮಾ (RRR Movie) ತೆರೆಕಂಡಿದೆ. ಮಾ.24ರ ರಾತ್ರಿ ಹಾಗೂ ಮಾ.25 ನಸುಕಿನಲ್ಲೇ ಹಲವೆಡೆ ಈ ಸಿನಿಮಾದ ಪ್ರದರ್ಶನ ಆರಂಭಗೊಂಡಿದೆ. ಇದು ತೆಲುಗು ಸಿನಿಮಾ ಆಗಿದ್ದರೂ ಕೂಡ ಕರ್ನಾಟಕದಲ್ಲಿ ಜನರು ಈ ಚಿತ್ರವನ್ನು ಹುಚ್ಚೆದ್ದು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ಕಲಾವಿದರಾದ ರಾಮ್ ಚರಣ್ ಮತ್ತು ಜ್ಯೂ. ಎನ್.ಟಿ.ಆರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕರ್ನಾಟಕದಲ್ಲಿ ಈ ಚಿತ್ರಕ್ಕೆ ಜನರು ಯಾರ ರೀತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ? ಆ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.
ರಾಯಚೂರಿನಲ್ಲಿ ಥಿಯೇಟರ್ ನ ಗೋಡೆ ಹೇರಿ(RRR Movie) ವಿಕ್ಷೀಸಿದ ಪ್ರೇಕ್ಷಕರು
ಇತ್ತ ರಾಯಚೂರಿನಲ್ಲಿ ಸಿನಿಮಾ ನೋಡಲು ನೂಕುನುಗ್ಗಲು ಉಂಟಾಗಿ, ಅಭಿಮಾನಿಗಳು ಗೋಡೆ ಹೇರಿ ಚಿತ್ರವನ್ನು ನೋಡಿದ್ದಾರೆ. ನಗರದ ಪೂರ್ಣಿಮಾ ಚಲನಚಿತ್ರ ಮಂದಿರದಲ್ಲಿ ಬೆಳಂಬೆಳಿಗ್ಗೆ ಸಿನಿಮಾ ರಿಲೀಸ್ ಆಗಿದ್ದು, ಚಿತ್ರ ವಿಕ್ಷೇಣೆಗೆ ನೂರಾರು ಜನರು ಆಗಮಿಸಿದ್ದಾರೆ. ಟಿಕೆಟ್ ಪಡೆದುಕೊಂಡು ಸಾಲು ಹೋಗಬೇಕಾದ ಪ್ರೇಕ್ಷಕರು ನಾ ಮುಂದು, ತಾ ಮುಂದು ತಿಕ್ಕಾಟ ನಡೆಸಿ, ಗೋಡೆ ಹೇರಿ ಚಿತ್ರಮಂದಿರದಲ್ಲಿ ನುಗ್ಗುತ್ತಿರುವ ದೃಶ್ಯ ಕಂಡು ಬಂದಿದೆ. ಅಲ್ಲದೇ ಒಳಗಡೆ ಪ್ರವೇಶ ಬಾಗಿಲು ಮುರಿದಿದ್ದು, ನೂಕನುಗ್ಗಲು ವೇಳೆ ಲಾಠಿಯಿಂದ ಜನರನ್ನು ಒಡೆಯುತ್ತಿರುವ ದೃಶ್ಯ ಕಂಡು ಬಂದಿದೆ.
ಚಿಕ್ಕಬಳ್ಳಾಪುರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ ರಾಮ್ ಚರಣ್ ಅಭಿಮಾನಿಗಳು
ಚಿಕ್ಕಬಳ್ಳಾಪುರ ನಗರದ ಚಿಂತಾಮಣಿಯ ಅಂಜನಿ ಚಿತ್ರಮಂದಿರ ಮತ್ತು ಎಸ್.ಎಲ್ .ಎನ್ ಚಿತ್ರಮಂದಿರ ಹಾಗೂ ಬಾಲಾಜಿ ಚಿತ್ರಮಂದಿರಗಳಲ್ಲಿ ಮಧ್ಯ ರಾತ್ರಿ 1 ಗಂಟೆಯಲ್ಲಿ ಸಿನಿಮಾ ಪ್ರದರ್ಶನ ಕಂಡಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮವನ್ನು ಆಚರಿಸಿದ್ದಾರೆ. ಇದನ್ನು ಓದಿ :-JAMES FILM – ಜೇಮ್ಸ್ ಸಿನಿಮಾ ವಿವಾದದ ಬಗ್ಗೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹೇಳಿದ್ದೇನು ಗೊತ್ತಾ..?
ಕೋಲಾರ ಜಿಲ್ಲೆಯಲ್ಲಿ ಒಟ್ಟು 10 ಚಿತ್ರಮಂದಿರಗಳಲ್ಲಿ (RRR) ಸಿನಿಮಾ ಪ್ರದರ್ಶನ
ಕೋಲಾರ ಜಿಲ್ಲೆಯಲ್ಲೂ ಆರ್.ಆರ್.ಆರ್ ಸಿನಿಮಾದ ಹವಾ ಜೋರಾಗಿದೆ. ಜಿಲ್ಲೆಯ ಒಟ್ಟು 10 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಕೋಲಾರ ನಗರದ ನಾರಾಯಣಿ ಚಿತ್ರಮಂದಿರದಲ್ಲಿ ಮೊದಲ ಪ್ಯಾನ್ ಶೋ ಆರಂಭ ಆಗಿದೆ.
ಹೊಸಪೇಟೆಯಲ್ಲಿ RRR ಮೊದಲ ಶೋ ಪ್ರದರ್ಶನ
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಖಖಖ ಮೊದಲ ಶೋ ಬೆಳಗಿನ ಜಾವ 1-30 ಕ್ಕೆ ಪ್ರಾರಂಭವಾಗಿದೆ. ಹೊಸಪೇಟೆಯ ಮೀರಾಲಂ ಮತ್ತು ಲಕ್ಷ್ಮೀ ಚಿತ್ರಮಂದಿರಗಳಲ್ಲಿ ಮೊದಲ ಶೋ ಪ್ರದರ್ಶನ ಕಂಡಿದೆ.
ಇದನ್ನು ಓದಿ :- MEKEDATU – ತಮಿಳುನಾಡಿಗೆ ಕರ್ನಾಟಕ ತಿರುಗೇಟು! ತಮಿಳುನಾಡು ನಿರ್ಣಯ ಖಂಡಿಸಿ ಸರ್ವಾನುಮತದ ನಿರ್ಣಯ ಅಂಗೀಕಾರ