ಉತ್ತರ ಕನ್ನಡ (Uttar kannada ) ಜಿಲ್ಲೆ ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕ ವಿ.ಎಸ್. ಪಾಟೀಲ್ ( Vs patil) ಇಂದು ಬಿಜೆಪಿ ತೊರೆದು ಕಾಂಗ್ರೆಸ್ (Congress) ಸೇರ್ಪಡೆಯಾದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿದ್ದ ಪಾಟೀಲ್, ಈ ಹಿಂದೆ ಶಿವರಾಂ ಹೆಬ್ಬಾರ್ ವಿರುದ್ಧ ಗೆಲುವು ಸಾಧಿಸಿದ್ದರು.
ವಿ.ಎಸ್ .ಪಾಟೀಲ್ರನ್ನು ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ (RV Deshpande) ಪಕ್ಷಕ್ಕೆ ಕರೆತಂದಿದ್ದಾರೆ. ಬೆಂಗಳೂರಿನ ಕೆಪಿಸಿಸಿ (KPCC) ಕಚೇರಿಯಲ್ಲಿ ಮಾಜಿ ಶಾಸಕ ಪಾಟೀಲ್ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಪಕ್ಷ ಸೇರ್ಪಡೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಎದುರು ಸ್ವಲ್ಪ ಮುಜುಗರಕ್ಕೀಡಾದ್ರು. ಪಕ್ಷಕ್ಕೆ ಬರ ಮಾಡಿಕೊಳ್ಳುವ ಸಲುವಾಗಿ ವಿ ಎಸ್ ಪಾಟೀಲರ ರಾಜಕೀಯ ಜೀವನದ ಬಗ್ಗೆ ಹೇಳುತ್ತಿದ್ದ ಡಿಕೆ ಶಿವಕುಮಾರ್ ಅವರು ಹಳಿಯಾಳದಿಂದ (Haliyal) ವಿ ಎಸ್ ಪಾಟೀಲ್ 2004 ರಲ್ಲಿ ಸ್ಪರ್ಧೆ ಮಾಡಿದ್ದರು ಎಂದರು. ಆಗ ಪಕ್ಕದಲ್ಲಿದ್ದ ದೇಶಪಾಂಡೆ ಅವರು ಹಳಿಯಾಳ ಅಲ್ಲ, ಹಳಿಯಾಳ ಅಲ್ಲ ಎಂದು ಎರಡೆರಡು ಬಾರಿ ಡಿಕೆ ಶಿವಕುಮಾರ್ ಅವರನ್ನು ತಡೆದರು. ಇಲ್ಲ ಹಳಿಯಾಳದಿಂದ ಸ್ಪರ್ಧೆ ಅಂತಾನೇ ಡಿಕೆ ಶಿವಕುಮಾರ್ ಪುನರುಚ್ಚರಿಸಿದರು. ಇದನ್ನು ಓದಿ : – ಬೆಂಗಳೂರಿನಲ್ಲಿ ನಕಲಿ ಡಾಕ್ಟರ್ ಎಡವಟ್ಟು – ಜ್ವರ ಎಂದು ಹೋದ ಮಹಿಳೆ ಕಾಲಿಗೆ ಗಂಡಾಂತರ
ಅದಕ್ಕೆ ಪ್ರತಿಯಾಗಿ ದೇಶಪಾಂಡೆ ಅವರೂ ಇಲ್ಲವೇ ಇಲ್ಲ. ಅವರದ್ದು ಹಳಿಯಾಳ ಅಲ್ಲ ಎಂದು ಮತ್ತೆ ಅಡ್ಡಿಪಡಿಸಿದರು. ಕೊನೆಗೆ, ಹೌದು ಹಳಿಯಾಳದಿಂದ ಒಮ್ಮೆ ಸ್ಪರ್ಧೆ ಮಾಡಿದ್ದೆ ಎಂದು ಸ್ವತಃ ವಿಎಸ್ ಪಾಟೀಲ್ ಅವರೇ ಸ್ಪಷ್ಟಪಡಿಸಿದರು. ಈ ಮಧ್ಯೆ, ಹಳಿಯಾಳ ಅಂತ ಹೇಳಿದೆ ಅಷ್ಟೇ, ಗೆದ್ದಿದ್ದಾರೆ ಎಂದಿಲ್ಲ! ಎಂದು ಡಿಕೆ ಶಿವಕುಮಾರ್ ನಗುತ್ತಲೇ ಸ್ಪಷ್ಟನೆ ನೀಡಿದ್ರು.
ಕೊನೆಗೆ 75 ವರ್ಷ ವಯಸ್ಸಿನ ಹಿರಿಯ ನಾಯಕ ದೇಶಪಾಂಡೆ ಅವರೂ ಸಹ ನಗುನಗುತ್ತಲೇ ಓಹೋ 9 ಚುನಾವಣೆ ಆಯ್ತು ನಂದು, ಯಾರು ಯಾವಾಗ ಅಂತೆಲ್ಲ ಮರೆತುಹೋಗಿದೆ ಎಂದು ಸಮಜಾಯಿಷಿ ಕೊಟ್ಟರು.
ಇದನ್ನು ಓದಿ : – ಅಸೆಂಬ್ಲಿ ಚುನಾವಣೆ ನಂತರವೇ ಬಿಬಿಎಂಪಿಗೆ ಚುನಾವಣೆ! ಸುಪ್ರೀಂ ಕೋರ್ಟ್ ಡೆಡ್ ಲೈನ್