ಇಂದು ಪುನೀತ್-ಅಶ್ವಿನಿ ವಿವಾಹ ವಾರ್ಷಿಕೋತ್ಸವ- ಆದರ್ಶ ದಂಪತಿ ಎಂದು ಬಣ್ಣಿಸಿದ ಸಂತೋಷ್ ಆನಂದ್ ರಾಮ್

ಇಂದು ಪುನೀತ್ ರಾಜ್ಕುಮಾರ್ (Puneeth rajkumar) ಹಾಗೂ ಅಶ್ವಿನಿ (Ashwini puneethrajkumar) ದಂಪತಿಯ ವಿವಾಹ ವಾರ್ಷಿಕೋತ್ಸವ (Anniversary) . ಅಪ್ಪು ಇಂದು ಭೌತಿಕವಾಗಿ ನಮ್ಮೊಂದಿಗೆ ಇದ್ದಿದ್ದರೆ ಈ ದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರು. ಆದ್ರೆ ಅವರಿಲ್ಲ ಎಂಬ ಕೊರಗಿನಲ್ಲಿ ಯಾವ ವಿಶೇಷ ದಿನವೂ ಮೊದಲಿನಂತೆ ಆಪ್ತವಾಗುತ್ತಿಲ್ಲ. ಅಪ್ಪು ಬಿಟ್ಟುಹೋದ ಎಲ್ಲ ಕೆಲಸಗಳನ್ನು ಅಶ್ವಿನಿ ಮುಂದುವರಿಸುತ್ತಿದ್ದಾರೆ.

ಇಂದು ಪುನೀತ್ ರಾಜ್ ಕುಮಾರ್ (Puneeth rajkumar) ಹಾಗೂ ಅಶ್ವಿನಿ (Ashwini puneethrajkumar) ದಂಪತಿಯ ವಿವಾಹ ವಾರ್ಷಿಕೋತ್ಸವ (Anniversary) . ಅಪ್ಪು ಇಂದು ಭೌತಿಕವಾಗಿ ನಮ್ಮೊಂದಿಗೆ ಇದ್ದಿದ್ದರೆ ಈ ದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರು. ಆದ್ರೆ ಅವರಿಲ್ಲ ಎಂಬ ಕೊರಗಿನಲ್ಲಿ ಯಾವ ವಿಶೇಷ ದಿನವೂ ಮೊದಲಿನಂತೆ ಆಪ್ತವಾಗುತ್ತಿಲ್ಲ. ಅಪ್ಪು ಬಿಟ್ಟುಹೋದ ಎಲ್ಲ ಕೆಲಸಗಳನ್ನು ಅಶ್ವಿನಿ ಮುಂದುವರಿಸುತ್ತಿದ್ದಾರೆ.

ಈ ದಂಪತಿಯ ವೆಡ್ಡಿಂಗ್ ಆ್ಯನಿವರ್ಸರಿ (Wedding Anniversary) ಪ್ರಯುಕ್ತ ನಿರ್ದೇಶಕ ಸಂತೋಷ್ ಆನಂದ್ರಾಮ್ (Santhosh Ananddram) ಅವರು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರ ಅಪರೂಪದ ಫೋಟೋವನ್ನು ಸಂತೋಷ್ ಆನಂದ್ ರಾಮ್ ಶೇರ್ ಮಾಡಿಕೊಂಡಿದ್ದಾರೆ. ದೊಡ್ಮನೆಯ ದಂಪತಿ ಕುರಿತು ವಿಶೇಷ ಸಾಲುಗಳನ್ನು ಬರೆದಿದ್ದಾರೆ. ಈ ಜೋಡಿಯನ್ನು ಆದರ್ಶ ದಂಪತಿ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ : – ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ- ತಾಂಬೂಲ ಬದಲಿಸಿಕೊಂಡ ಕುಟುಂಬ

The Puneeth Rajkumar and Ashwini Revanth love story - India Today

‘ದಾಂಪತ್ಯವೆಂದರೆ ಜೊತೆಯಾಗೋದು, ಜೊತೆಯಲ್ಲಿ ಇರೋದು ಹಾಗೂ ಸಂಗಾತಿಯ ಕನಸುಗಳನ್ನ ನನಸಾಗಿಸೋದು, ಆ ದಾರಿಯಲ್ಲಿ ಹೆಜ್ಜೆ ಹಾಕೋದು. ಈ ನಿಟ್ಟಿನಲ್ಲಿ ನೀವು ಆದರ್ಶ ಮಹಿಳೆ ಹಾಗೂ ಅಪ್ಪು ಅಣ್ಣ ಆದರ್ಶ ವ್ಯಕ್ತಿ (ವಿಶ್ವ ಮಾನವ). ನಿಮಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಅವರನ್ನು ನೀವು ನಿಮ್ಮೊಳಗೆ ಜೀವಂತವಾಗಿ ಉಳಿಸಿಕೊಂಡಿದ್ದೀರಿ. ಈ ನನ್ನ ಶುಭಾಶಯ ನಿರಂತರ’ ಎಂದು ಸಂತೋಷ್ ಆನಂದ್ರಾಮ್ ಪೋಸ್ಟ್ ಮಾಡಿದ್ದಾರೆ. 1991ರ ಡಿಸೆಂಬರ್ 1ರಂದು ಈ ಜೋಡಿಯ ವಿವಾಹ ನೆರವೇರಿತ್ತು.

ಇದನ್ನೂ ಓದಿ : – ಐರಾ ಹೆಸರಲ್ಲಿ ಪ್ರೊಡಕ್ಷನ್ ಹೌಸ್ ನಿರ್ಮಿಸಿದ ಯಶ್ …!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!