ಸಂತೋಷ್ ಪಾಟೀಲ್ ನಾನು ಮುಖಾಮುಖಿ ಎಂದೂ ಭೇಟಿಯಾಗಿಲ್ಲ – ಆಶಾ ಐಹೊಳೆ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ, ಕಾಂಗ್ರೆಸ್ ನಾಯಕಿ ಆಶಾ ಐಹೊಳೆ ಪತ್ರ ಬರೆದಿರುವ ವಿಚಾರ ಈಗ ಬೆಳಕಿಗೆ ಬಂದಿದೆ.


ಇದಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಆಶಾ ಐಹೊಳೆ 2020ರಲ್ಲಿ ಹಿಂಡಲಗಾ ಗ್ರಾಮದ ಲಕ್ಷ್ಮಿದೇವಿ ಜಾತ್ರೆ ಇತ್ತು. ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು ನನ್ನ ಬಳಿ ಬಂದಿದ್ದರು. ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಲೇಟರ್ ನೀಡುವಂತೆ ಕೋರಿದ್ದರು.

After accusing Minister Eshwarappa of corruption, Belagavi BJP worker ends  life | Deccan Herald

ಆ ಪ್ರಕಾರ ಗ್ರಾಪಂ ಅಧ್ಯಕ್ಷರಿಗೆ, ಸದಸ್ಯರಿಗೆ ನಾನು ಲೇಟರ್ ಕೊಟ್ಟಿದ್ದು ನಿಜ. ಆದರೆ ನಾನು ಕೊಟ್ಟ ಲೇಟರ್‌ಗೆ ಏನು ಆಕ್ಷನ್ ಆಗಿದೆ ಎಂಬುದು ನನಗೆ ಗೊತ್ತಿಲ್ಲ. RDPR ಇಲಾಖೆ ಅನುಮೋದನೆ ನೀಡಿರುವ ವಿಷಯ ನನಗೆ ಇವತ್ತಷ್ಟೇ ಗೊತ್ತಾಗಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ನಾನು ಮುಖಾಮುಖಿ ಎಂದೂ ಭೇಟಿಯಾಗಿಲ್ಲ. ಅವರ ಆತ್ಮಹತ್ಯೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಆದರೆ ಸಂತೋಷ್ ಆತ್ಮಹತ್ಯೆಯ ದುರಂತ ಮಾಡಿಕೊಳ್ಳಬಾರದಿತ್ತು. RDPR ಇಲಾಖೆಯಿಂದ ಬಂದಿರುವ ರಿಸೀವ್ ಕಾಪಿನೂ ನನಗೆ ಸಿಕ್ಕಿಲ್ಲ. ಕಾಮಗಾರಿಗಳ ಮಂಜೂರಾತಿಗೆ ನನ್ನ ಬಳಿ ಹಿಂಡಲಗಾ ಗ್ರಾಪಂ ಸದಸ್ಯರು ಬಂದಿದ್ದರು. ಕೆಲಸ ಆದ ಬಗ್ಗೆ ನನಗೇನೂ ಮಾಹಿತಿ ನೀಡಿಲ್ಲ, ಆ ಬಗ್ಗೆ ಗೊತ್ತೂ ಇಲ್ಲ. ನನ್ನ ಪತ್ರಕ್ಕೆ ಅನುಮೋದನೆ ನೀಡಿರುವ ಪತ್ರವೂ ಇವತ್ತಷ್ಟೇ ಸಿಕ್ಕಿದೆ. 17 ಫೆ 2021 ಕ್ಕೆ ಅನುಮೋದನೆ ಆಗಿರುವುದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ :-  ಸೂರ್ಯಾಸ್ತದ ಬಳಿಕ ಕೆಂಪು ಕೋಟೆಯಲ್ಲಿ ಮೋದಿ ಭಾಷಣ

Contractor Santosh Patil death case: FIR against Karnataka minister  Eshwarappa


ಸಂತೋಷ್ ಪಾಟೀಲ್ ನನಗೆ ಗೊತ್ತೇ ಎಂಬ ಈಶ್ವರಪ್ಪ ಹೇಳಿಕೆ ವಿಚಾರ
ಈ ಬಗ್ಗೆ ತನಿಖಾಧಿಕಾರಿಗಳು ಡೀಪ್ ಸ್ಟಡಿ ಮಾಡಬೇಕು. ನಾನು ಕೊಟ್ಟಿರುವ ಲೆಟರ್ ಬಗ್ಗೆ ಮೇಲಾಧಿಕಾರಿಗಳಿಗೆ ಎಷ್ಟು ಮಾಹಿತಿ ಇದೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ರು.

ಇದನ್ನೂ ಓದಿ :- ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ – ಆನಂದ್ ಸಿಂಗ್



			

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!