ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC.Nagesh) ಪ್ರತಿಕ್ರಿಯೆ ನೀಡಿದ್ದಾರೆ. ಬರಗೂರು ರಾಮಚಂದ್ರಪ್ಪ 150 ತಪ್ಪುಗಳನ್ನು 167 ಪೇಜ್ಗಳಲ್ಲಿ ಮಾಡಿದ್ರು.
ನಮ್ಮ ಕಾಲದಲ್ಲಿ ಕೇವಲ 17 ತಪ್ಪುಗಳಾಗಿವೆ ಅದನ್ನು ಸರಿ ಮಾಡಿದ್ದೇವೆ. ಎನ್.ಇ.ಪಿ ಪ್ರಕಾರ ಶಿಕ್ಷಣ ಇಲಾಖೆಯ ಹೆಸರನ್ನು ಬದಲಾಯಿಸಲಾಗಿದೆ. ಆಡಳಿತಾತ್ಮಕ ಬದಲಾವಣೆ ಬಗ್ಗೆ ಮುಂದೆ ಚರ್ಚಿಸುತ್ತೇವೆ ಎಂದು ತಿಳಿಸಿದ್ರು.
ಡಿ.ಕೆ ಶಿವಕುಮಾರ್ ಪಠ್ಯಪುಸ್ತಕ ಹರಿದ ಪ್ರಕರಣ
ಸರಸ್ವತಿಯನ್ನ ಹರಿದು ಹಾಕುವ ಸಂಸ್ಕ್ರತಿ ಈ ದೇಶದಲ್ಲಿ ಇರಲಿಲ್ಲ. ಸರಸ್ವತಿ ಅಕಸ್ಮಾತ್ ಕಾಲಿಗೆ ತಾಗಿದ್ರೆ ನಾವು ಕಣ್ಣಿಗೆ ಒತ್ಕೊೞಡು ನಮಸ್ಕಾರ ಮಾಡ್ತಿವಿ. ಡಿ.ಕೆ.ಶಿವಕುಮಾರ್ (DK.Shivkumar) ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ. ಅದಕ್ಕೆ ನಾವೇನು ಮಾಡೋಕ್ಕಾಗಲ್ಲ. ಈಗಾಗಲೆ 75ರಷ್ಟು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ತಲುಪಿದೆ ಎಂದು ಹೇಳಿದ್ರು. ಇದನ್ನೂ ಓದಿ : – ಯಾವುದೇ ಕಾರಣಕ್ಕೂ ಬಿಬಿಎಂಪಿ ಚುನಾವಣೆ ಮುಂದೂಡುವುದಿಲ್ಲ – ಎಸ್.ಟಿ ಸೋಮಶೇಖರ್
ದೇವೇಗೌಡರ ಪತ್ರ ವಿಚಾರ
ದೇವೇಗೌಡರು (Devegowda), ಹಿರಿಯರು, ಗೌರವಾನ್ವಿತರು. ಅವರ ಮನೆಗೆ ಹೋಗಿ ಎಲ್ಲಾ ತಿಳಿಸಿ ಬಂದಿದ್ದೇನೆ. ಅವರಿಗೆ ಸತ್ಯದ ಮನವರಿಕೆ ಆಗಿದೆ ಎಂದು ನನಗೆ ವಿಶ್ವಾಸವಿದೆ ದೇವೇಗೌಡರಿಗೆ ಕುವೆಂಪು ಅವರ ಬಗ್ಗೆ ಏನೇನೊ ಹೇಳಿ ಬಿಟ್ಟಿದ್ದರು. ನಾವು ಸತ್ಯವನ್ನು ಅವರ ಮುಂದೆ ಇಟ್ಟಿದ್ದೇವೆ. ರೋಹಿತ್ ಚಕ್ರತೀರ್ಥ (Rohith chakrateertha) ವಿರುದ್ಧ ದೂರು ದಾಖಲಾಗಿದ್ದು 2017 ರಲ್ಲಿ.
ಆಗ ಸಿದ್ದರಾಮಯ್ಯ (Siddarmaiah) ಸಿಎಂ ಇದ್ದರು. ಡಿ.ಕೆ. ಶಿವಕುಮಾರ್ ಸಚಿವರಾಗಿದ್ದರು. ಕುವೆಂಪು ಅವರಿಗೆ ಅವಮಾನ ಆಗಿದ್ರೆ ಅವತ್ತೆ ಕ್ರಮ ಕೈಗೊಳ್ಳಬೇಕಿತ್ತು. ಪ್ರಕರಣದ ಕುರಿತಂತೆ ಸರ್ಕಾರ ಬಿ ರೀಪೋರ್ಟ್ ಹಾಕಿತ್ತು. ಈ ಎಲ್ಲಾ ವಿಚಾರವನ್ನು ದೇವೇಗೌಡರಿಗೆ ತಿಳಿಸಿ ಬಂದಿದ್ದೇನೆ ಎಂದು ತಿಳಿಸಿದ್ರು. ಇದನ್ನೂ ಓದಿ : – ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ರಾಜಕೀಯ – ಕೆಲ ವಾರ್ಡ್ ಗಳೇ ಮಾಯ – ಕಾಂಗ್ರೆಸ್ ಶಾಸಕರಿಗೆ ಆಘಾತ