ಹನುಮಾನ್ ಚಾಲೀಸಾ ವಿವಾದಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ರಾಣಾ ದಂಪತಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎಫ್ ಐ ಆರ್ ರದ್ದುಗೊಳಿಸುವಂತೆ ಸಲ್ಲಿಕೆ ಮಾಡಿದ್ದ ಅರ್ಜಿ ವಜಾಗೊಂಡಿದೆ.
ತಮ್ಮ ಬಂಧನವನ್ನ ಪ್ರಶ್ನೆ ಮಾಡಿ, ಮುಂಬೈ ಹೈಕೋರ್ಟ್ನಲ್ಲಿ ಸಂಸದೆ ನವನೀತ್ ಕೌರ್ ಹಾಗೂ ಅವರ ಪತಿ ಶಾಸಕ ರವಿ ರಾಣಾ ಅರ್ಜಿ ಸಲ್ಲಿಕೆ ಮಾಡಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ವಜಾಗೊಳಿಸಿದೆ. ರಾಣಾ ದಂಪತಿ ಬಂಧನಕ್ಕೆ ಬಂದ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಎಫ್ಐಆರ್ ದಾಖಲಾಗಿತ್ತು.
ಅದನ್ನ ರದ್ದುಗೊಳಿಸುವಂತೆ ಅಮರಾವತಿ ಸಂಸದೆ ನವನೀತ್ ಹಾಗೂ ಆಕೆಯ ಪತಿ ರವಿ ರಾಣಾ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಈ ಕೇಸ್ನಲ್ಲಿ ದಂಪತಿಗೆ ಹೈಕೋರ್ಟ್ನಿಂದಲೂ ಹಿನ್ನೆಡೆಯಾಗಿದೆ.
ಇದನ್ನೂ ಓದಿ :- ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವಿಚಾರ – ಜಿಗ್ನೇಶ್ ಮೇವಾನಿಗೆ ಕೊನೆಗೂ ಜಾಮೀನು