ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ಮ್ಯಾಜಿಕ್ ನಂಬರ್ 172 ಆಗಿದ್ದು 174 ಸಂಸದರ ಬೆಂಬಲ ಹೊಂದಿರುವ ಶಹಬಾಜ್ ಷರೀಫ್ (Shahbaz Sharif) ಇಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಪಾಕಿಸ್ತಾನ ಮುಸ್ಲಿಂ ಲೀಗ್ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರರಾಗಿರುವ ಶಹಬಾಜ್ ಷರೀಫ್ ಸಂಜೆ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆ ಇದೆ. ಈಗಾಗಲೇ ಶಹಬಾಜ್ ಷರೀಫ್ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪಿಪಿಪಿ (PPP) ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಅವರನ್ನು ಭೇಟಿಯಾಗಿ ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ. ಪ್ರಮುಖ ಪಕ್ಷವಾದ ಪಿಪಿಪಿ ನಾಯಕ ಬಿಲಾವಲ್ ಭುಟ್ಟೋ ವಿದೇಶಾಂಗ ಸಚಿವರಾಗುವ ಸಾಧ್ಯತೆ ಇದೆ. 342 ಸದಸ್ಯ ಬಲದ ಪಾಕಿಸ್ತಾನ ಸಂಸತ್ತಿನಲ್ಲಿ ಬಹುಮತಕ್ಕೆ 172 ಮತ ಬೇಕು. ಪಿಎಂಎಲ್-ಎನ್ ಹಾಗೂ ಪಿಪಿಪಿ ನೇತೃತ್ವದ ಕೂಟಕ್ಕೆ ಈಗಾಗಲೇ 174 ಸದಸ್ಯರ ಬೆಂಬಲವಿದೆ. ಇದನ್ನು ಓದಿ :- ವಿಶ್ವಾಸಮತ ಗಳಿಸುವಲ್ಲಿ ವಿಫಲವಾದ ಪಾಕ್ ಪ್ರಧಾನಿ ಇಮ್ರಾನ್ ಖಾನ್
ಇಮ್ರಾನ್ ಸರ್ಕಾರ ಉರುಳಿಸುವಲ್ಲಿ ಅಮೆರಿಕಅಮೆರಿಕ ಸೇರಿದಂತೆ ನಾಲ್ಕು ಜನರು ಪ್ರಮುಖ ಪಾತ್ರ ವಹಿಸಿದ್ದರು. ಶೆಹಬಾಜ್ ಶರೀಫ್, ಆಸಿಫ್ ಅಲಿ ಜರ್ದಾರಿ, ಬಿಲಾವಲ್ ಭುಟ್ಟೊ ಜರ್ದಾರಿ, ಮೌಲಾನಾ ಫಜ್ಲುರ್ ರೆಹಮಾನ್ ಈ ನಾಲ್ಕು ನಾಯಕರು ಇಮ್ರಾನ್ ಸರ್ಕಾರ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೌಲಾನಾ ಫಜ್ಲುರ್ ರೆಹಮಾನ್ ಪಾಕ್ ಪಾಕ್ ನ ಮುಸ್ಲಿಂ ಧರ್ಮಗುರು ಆಗಿದ್ದಾರೆ.
ಇಮ್ರಾನ್ ಖಾನ್ (Imran Khan) ಪಾಕ್ ಸೇನಾ ಮುಖ್ಯ ಖಮರ್ ಜಾವೇದ್ ಬಾಜ್ವಾ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಹಲವು ಬಾರಿ ಇಮ್ರಾನ್ ಖಾನ್ ಅವರನ್ನ ಕಾಪಾಡಿದ್ದೇ ಜಾವೇದ್ ಬಾಜ್ವಾ. ಆದರೆ ಇಮ್ರಾನ್ ತನ್ನ ಸ್ಥಾನ ಉಳಿಸಿಕೊಳ್ಳಲು ಕೊನೆ ಕ್ಷಣದಲ್ಲಿ ಸೇನಾ ಮುಖ್ಯಸ್ಥ ಬಾಜ್ವಾ ಅವರನ್ನು ವಜಾಗೊಳಿಸುವ ಪ್ರಯತ್ನದ ಮೂಲಕ ಅಧಿಕಾರದಲ್ಲಿ ಉಳಿದುಕೊಳ್ಳಲು ಯಯತ್ನಿಸಿದ್ದರು.ತ್ ಯತ್ನಿಸಿದ ಪ್ರಧಾನಿ ಇಮ್ರನ್ ಖಾನ್ ಇಂತಹ ಕೊನೆಯ ಹತಾಶೆಯ ಸಾಹಸಕ್ಕೆ ಮುಂದಾಗಿದ್ದರು.
ಇದನ್ನು ಓದಿ :- “ಇಮ್ರಾನ್ ಓರ್ವ ಸೈಕೋಪಾತ್” ಅಂದ ಪಾಕ್ ಸುಂದರಿ ಯಾರು ಗೊತ್ತಾ..?