ಮಹಾರಾಷ್ಟ್ರ ಸಿಎಂ ಉದ್ಧವ್ (Uddav Thackray) ಠಾಕ್ರೆ ತಮಗೆ ನಿಷ್ಠರಾಗಿರುವ ಶಾಸಕರ ಸಭೆ ಕರೆದಿದ್ದಾರೆ. ಈ ವೇಳೆ ಬಂಡಾಯ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆಯಿದೆ. ಆದ್ರೆ ಇದು ಉದ್ಧವ್ ಠಾಕ್ರೆಗೆ ಮುಳುವಾಗುವ ಸಾಧ್ಯತೆ ಇದೆ.
ಏಕನಾಥ ಶಿಂಧೆ (Ekhanath Sindhe) ಬಣದಲ್ಲಿರುವ ಶಾಸಕರ ಸಂಖ್ಯೆ ಪಕ್ಷದ ಒಟ್ಟು ಶಾಸಕರ ಮೂರನೇ ಎರಡರಷ್ಟು ಇರುವುದು ದೃಢಪಟ್ಟರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಾಗುವುದಿಲ್ಲ. ಅವರು ತಮ್ಮದೇ ನಿಜವಾದ ಶಿವಸೇನೆ ಎಂದು ಪ್ರತಿಪಾದಿಸಬಹುದು. ತಮ್ಮ ಬಣವನ್ನೇ ಅಧಿಕೃತ ಶಿವಸೇನಾ ಪಕ್ಷ ಎಂದು ಮಾನ್ಯತೆ ನೀಡುವಂತೆ ಸ್ಪೀಕರ್ ಮತ್ತು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಬಹುದು.
ಶಿವಸೇನಾ (Shivasene) ಪಕ್ಷದ ಚುನಾವಣಾ ಚಿಹ್ನೆಯನ್ನೂ ಕೇಳಬಹುದು. ಇದು ಉದ್ಧವ್ ಗೆ ಮುಳುವಾಗುವ ಸಾಧ್ಯತೆ ದಟ್ಟವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಏಕನಾಥ ಶಿಂಧೆ ಬಣಕ್ಕೆ ಶಿವಸೇನೆಯ ಚಿಹ್ನೆ ಸಿಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ, ಶಿವಸೇನೆಯ ಶಾಸಕರ ಪೈಕಿ 42 ಮಂದಿ ಪ್ರಸ್ತುತ ಏಕನಾಥ್ ಶಿಂದೆ ಬಣದಲ್ಲಿದ್ದಾರೆ.ಇನ್ನೂ ಸಂಸದರೂ ಏಕನಾಥ್ ಶಿಂಧೆಗೆ ಜೈ ಎಂದಿದ್ದಾರೆ. ಅದರಲ್ಲೂ ಏಕನಾಥ್ ಶಿಂಧೆ ಪುತ್ರ ಬಿಜೆಪಿ ಸಂಸದರಾಗಿದ್ದು ಅವರ ಜೊತೆ ಅನೇಕ ಸಂಸದರೂ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ : – ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳಿಂದ ದಾಳಿ – ಕಡತಗಳ ಪರಿಶೀಲನೆ
ಅಂಕಿಸಂಖ್ಯೆಗಳ ಲೆಕ್ಕಾಚಾರದಲ್ಲಿ ಏಕನಾಥ ಶಿಂಧೆ ಬಣದ ಹೈ ಮೇಲಾಗಿದೆ. ಮಹಾರಾಷ್ಟ್ರದ ವಿಧಾನಸಭೆಯ 106 ಬಿಜೆಪಿ ಶಾಸಕರ ಜೊತೆಗೆ ಏಕನಾಥ ಶಿಂಧೆ ಬಣದ 42 ಮಂದಿ ಬೆಂಬಲ ಸೇರಿದರೇ 148ಕ್ಕೆ ಸಂಖ್ಯಾಬಲ ಹೆಚ್ಚಾಗುತ್ತದೆ. ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 145 ಸದಸ್ಯ ಬಲ ಸಾಕಾಗಿದೆ. ಹೀಗಾಗಿ ಶಿವಸೇನೆಯ ಬಂಡಾಯದ ಲಾಭ ಪಡೆದುಕೊಂಡ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ. ಇದನ್ನೂ ಓದಿ : – ಜೆ.ಡಿ.ಎಸ್ ನಿಂದ ಉಚ್ಛಾಟನೆ ಮಾಡಿದ್ದು ನನಗೆ ಸಂತೋಷವಾಗಿದೆ- ಎಸ್ ಆರ್ ಶ್ರೀನಿವಾಸ್