ಬಿಜೆಪಿ (BJP) ಯು ಪ್ರಮುಖ ಅಜೆಂಡ ಈವರೆಗೂ ಕಾಂಗ್ರೆಸ್ (Congress) ಮುಕ್ತ ರಾಜ್ಯವಾಗಿತ್ತು. ಈಗ ಪ್ರಾದೇಶಿಕ ಪಕ್ಷಗಳನ್ನ ಮುಗಿಸುವುದಾಗಿದೆ ಎಂದು ದೇವನಹಳ್ಳಿ (Devnahalli) ಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (Kumarswamy) ಹೇಳಿದ್ದಾರೆ. ಕರ್ನಾಟಕದಲ್ಲಿರೊ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಿಲ್ಲಿಸಿದ್ದಾರಾ..? ಚುನಾಯಿತ ಸರ್ಕಾರಗಳನ್ನ ಹೇಗಂದ್ರೆ ಹಾಗೆ ಅಸ್ಥಿರಗೊಳಿಸುತ್ತಿದ್ದಾರೆ.
ಇದು ಈ ದೇಶದ ಡೆಮಾಕ್ರಸೀ (Democracy) ನಾ ಎಂದು ಪ್ರಶ್ನಿಸಿದ್ದಾರೆ. ಕಾರ್ಯಕಾರಿಣಿಯಲ್ಲಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡ್ತೀರಾ. ದಕ್ಷಿಣ ಭಾರತದಲ್ಲಿ ಬಾಗಿಲು ತೆಗೆಯಬೇಕು ಅಂತ ತಮಿಳುನಾಡು (Tamil nadu) , ಆಂಧ್ರ ಪ್ರದೇಶ (Andhra pradesh) ದಲ್ಲಿ ಒರಿಸ್ಸಾ (Orissa) ದಲ್ಲಿ ಪ್ರಾದೇಶಿಕ ಪಕ್ಷಗಳನ್ನ ಮುಗಿಸಲು ಹೊರಟಿದ್ದೀರಾ ಎಂದು ಗುಡುಗಿದ್ದಾರೆ. ಈ ಪಕ್ಷಗಳು ಆಯಾ ಪ್ರಾದೇಶಿಕ ಸಮಸ್ಯೆಗಳನ್ನಿಟ್ಟುಕೊಂಡು ಹೋರಾಟ ಮಾಡ್ತಿರೂ ಪಕ್ಷಗಳನ್ನು ಕುಟುಂಬ ರಾಜಕಾರಣ ಅಂತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.ನಾವು ಕೊಟ್ಟ ಮನವಿಗಳಿಗೆ ಇವರ ಬಳಿ ಪುರಸ್ಕಾರವಿಲ್ಲ. ನಾವು ಇವರ ಬಳಿ ಗುಲಾಮರಂತೆ ನಿಲ್ಲಬೇಕಾ.ಇವರ ಅಜೆಂಡ ಕುಟುಂಬ ರಾಜಕಾರಣ ಅಂತ್ಯವಲ್ಲ, ವಿರೋಧ ಪಕ್ಷಗಳನ್ನ ದಮನ ಮಾಡಬೇಕು ಅನ್ನೋದು. ಇದನ್ನೂ ಓದಿ : – ಸಿದ್ದರಾಮಯ್ಯ ನಿವಾಸಕ್ಕೆ ಸಿಎಂ ಇಬ್ರಾಹಿಂ ದಿಢೀರ್ ಭೇಟಿ !
ದೇಶದಲ್ಲಿ ವಿರೋಧ ಪಕ್ಷ ಇಲ್ಲವಾಗಬೇಕು ಅನ್ನೂ ಅಜೆಂಡವನ್ನಿಟ್ಟುಕೊಂಡು ಈ ರೀತಿ ಮಾಡ್ತಿದ್ದಾರೆ. ದಕ್ಷಿಣ ಭಾರತದ ಮತದಾರರು ಬುದ್ದಿವಂತರಿದ್ದಾರೆ, ಉತ್ತರ ಭಾರತ ರಾಜಕೀಯ ಬೇರೆ ದಕ್ಷಿಣ ಭಾರತ ರಾಜಕೀಯ ಬೇರೆಯೇ ಆಗಿದೆ. ಮುಂದಿನ ದಿನಗಳಲ್ಲಿ ಕುತಂತ್ರ ರಾಜಕಾರಣಕ್ಕೆ ಮತದಾರ ಬುದ್ದಿ ಕಲಿಸಿ ಪ್ರತ್ಯುತ್ತರ ನೀಡ್ತಾರೆ ಎಂದು ಹೆಚ್ಡಿ ಕುಮಾರಸ್ವಾಮಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : – BANGLORE BREAKING- ವಾಸಕ್ಕೆ ಯೋಗ್ಯವಾಗಿಲ್ಲವಂತೆ ಬೆಂಗಳೂರು- ಜಾಗತಿಕ ಸೂಚ್ಯಂಕದಲ್ಲಿ ಅತಿ ಕಳಪೆ ಸ್ಥಾನ ಪಡೆದ ಸಿಲಿಕಾನ್ ಸಿಟಿ