ಕೇಂದ್ರ ಸರ್ಕಾರದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ವಿವಿಧ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯ ಅಧ್ಯಕ್ಷರು, ಸಂಘಟನೆ ಅಧ್ಯಕ್ಷರು ಭಾಗಿಯಾಗಿದ್ರು 2 ದಿನಗಳ ಕಾಲ ಪೂರ್ಣಪ್ರಮಾಣದ ಚರ್ಚೆ ನಡೆಯಿತು. ಮೋದಿಯವ್ರು ನಮಗೆ ಮಾರ್ಗದರ್ಶನ ನೀಡಿದ್ರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ (C.T RAVI) ಹೇಳಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ (BJP) ಬೆಳವಣಿಗೆ ಸಕಾರಾತ್ಮಕವಾಗಿದೆ. ಕರ್ನಾಟಕ ನಂತರ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವ್ಯಕ್ತವಾಗಿದೆ. ಕರ್ನಾಟಕ ಜೊತೆಗೆ ತೆಲಂಗಾಣ(THELAGANA) ವೂ ಬಿಜೆಪಿಯ ಮಡಿಲಿಗೆ ಬೀಳುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ರು.
ತಮಿಳುನಾಡಿ(THAMILNADU) ನಲ್ಲಿ ಬಿಜೆಪಿ ಬೆಳವಣಿಗೆ ಆಶಾದಾಯಕವಾಗಿದೆ. ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai ) ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುತ್ತಿದೆ. ತಮಿಳುನಾಡಿನ ಜನ ಬದಲಾವಣೆ ಬಯಸುತ್ತಿರೋದು ಅನುಭವಕ್ಕೆ ಬರ್ತಿದೆ. ಪಾಂಡಿಚೇರಿಯಲ್ಲಿ ಈಗಾಗಲೇ ಅಧಿಕಾರದಲ್ಲಿ ಪಾಲುದಾರರಾಗಿದ್ದೇವೆ. ಆಂಧ್ರದಲ್ಲಿ ಪ್ರಯತ್ನ ಪಡಬೇಕಿದೆ. ಕೇಂದ್ರದ ವಿವಿಧ ಯೋಜನೆಗಳು 70ರಷ್ಟು ಜನರಿಗೆ ಮುಟ್ಟಬೇಕಿದೆ. ಯಾವುದೇ ಜಾತಿ, ಧರ್ಮದ ತಾರತಮ್ಯ ಇಲ್ಲದೆ ಬಡವರಿಗೆ, ದಲಿತರಿಗೆ, ಮಹಿಳೆಯರಿಗೆ ನ್ಯಾಯ ಒದಗಿಸೋ ಕೆಲಸ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದೆ. ಅದರ ಲಾಭಾಂಶವನ್ನ ಪಕ್ಷದ ಜೊತೆ ಯಶಸ್ವಿಯಾಗಿ ಜೋಡಿಸಬೇಕಿದೆ. ಇದರಿಂದ ದಕ್ಷಿಣದಲ್ಲೂ ಬಿಜೆಪಿ ಸಧೃಡವಾಗೋದ್ರಲ್ಲಿ ಅನುಮಾನವಿಲ್ಲ ಎಂದು ಹೇಳಿದ್ರು. ಇದನ್ನೂ ಓದಿ : – ಮಹಾ ಹೈಡ್ರಾಮಕ್ಕೆ ಅಧಿಕೃತ ತೆರೆ – ಬಹುಮತ ಪರೀಕ್ಷೆಯಲ್ಲಿ ಏಕನಾಥ್ ಶಿಂಧೆ ಪಾಸ್
ನೂಪುರ್ ಶರ್ಮಾ (NUPUR SHARMA) ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಭಿಪ್ರಾಯದ ಬಗ್ಗೆ ಮಾತನಾಡಿ, ಸುಪ್ರೀಂ ಕೋರ್ಟ್ ಸತ್ಯದ ಪಕ್ಷಪಾತಿ ಎಂದು ಭಾವಿಸಿದ್ದೇನೆ. ಕೋರ್ಟ್ ಒಂದು ತಂಡವನ್ನು ನೇಮಕಾತಿ ಮಾಡಿ ಯಾವ ಯಾವ ಧರ್ಮಗಳಲ್ಲಿ ಎಷ್ಟು ಒಳ್ಳೆದು ಹಾಗೂ ಕೆಟ್ಟದು ಇದೆ ಎಂದು ಅವಲೋಕನ ಮಾಡಿಸಿ, ಸತ್ಯವನ್ನು ದೇಶದ ಮುಂದೆ ಇಟ್ಟರೆ ಹೊರಬರುತ್ತದೆ ಎಂದು ಸಲಹೆ ನೀಡಿದರು. ಅವಾಗ ನೂಪುರ್ ಶರ್ಮಾ ಹೇಳಿದ್ದು ಸತ್ಯವೋ, ಸುಳ್ಳೋ ಎಂದು ಗೊತ್ತಾಗುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ (SIDDARAMAIAH) ಹೇಳಿದ್ದು ಉಲ್ಟಾ ಆಗುತ್ತದೆ. ಇದು ಐತಿಹಾಸಿಕ ಸತ್ಯ. ಸಿದ್ದರಾಮಯ್ಯ ಅವರಿಗೆ ಅವರ ಮಾತನ್ನು ಬೇಕಾದರೆ ರಿ ಟೆಲಿಕಾಸ್ಟ್ ಮಾಡಿ ತೋರಿಸಿ. ಮೋದಿ ಅಪ್ಪನಾಣೆಗೂ ಪ್ರಧಾನಿ ಆಗಲ್ಲ ಎಂದಿದ್ದರು. ಆದರೆ ಎರಡು ಬಾರಿ ಪ್ರಧಾನಿ ಆದರು. ನಾನೇ ಮುಂದಿನ ಸಿಎಂ ಎಂದರು. ಆದರೆ ಚಾಮುಂಡೇಶ್ವರಿಯಲ್ಲಿ ಸೋತರು. ಉಲ್ಚಾ ಮಚ್ಚೆ ಇರಬಹುದು ಸಿದ್ದರಾಮಯ್ಯ ಅವರನ್ನ ಪರೀಕ್ಷೆ ಮಾಡಲಿ ಎಂದು ವ್ಯಂಗ್ಯವಾಡಿದರು. ಇನ್ನು ಸಿದ್ದರಾಮೋತ್ಸವ ಬಗ್ಗೆ ಕೇಳಿದ ಪ್ರಶ್ನೆಗೆ, ನಾವು ಭಾರತದ ಉತ್ಸವ ಮಾಡಬೇಕು ಎಂದು ಹೊರಟಿದ್ದೇವೆ. ಅವರು ಅವರ ಪ್ರಶಂಸೆ ಮಾಡಬೇಕು ಎಂದು ಹೊರಟಿದ್ದಾರೆ. ಇದನ್ನೂ ಓದಿ : – EKNATH SINDHE -ಏಕ್ ನಾಥ್ ಸಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ – ಬಿಜೆಪಿಯಿಂದ ಅಧಿಕೃತ ಘೋಷಣೆ
ಮಾಡಲಿ ಎಂದರು. 75 ವರ್ಷ ಪೂರ್ಣಗೊಳಿಸುವುದು ಒಂದು ಸಾಧನೆಯೇ..? ಅವರ ಸಿದ್ದರಾಮೋತ್ಸವ ಮಾಡಲಿ. ಅವರ ನಂಬಿಕೆಗೆ ನಾವು ಬೇಡ ಎನ್ನಲ್ಲ ಎಂದರು. ಇನ್ನು ದತ್ತ ಪೀಠ ಪೂಜೆ ಸಲ್ಲಿಕೆ ವಿಚಾರವಾಗಿ ಸಂಪುಟ ಸಭೆಯಲ್ಲಿ ಆದ ತೀರ್ಮಾನದ ಬಗ್ಗೆ ಮಾತನಾಡಿ, ಸರ್ಕಾರ ಸಂಪುಟ ಉಪ ಸಮಿತಿ ನೇಮಕ ಮಾಡಿತ್ತು. ಸುದೀರ್ಘ ಅಹವಾಲು ಸ್ವೀಕರಿಸಿ ಹಿಂದೂ ಅರ್ಚಕರ ನೇಮಕ ಕುರಿತಂತೆ ಹಾಗೂ ವಾರದಲ್ಲಿ ಎರಡು ದಿನ ಮುಜಾವರ್ ಪೂಜೆ ಸಲ್ಲಿಕೆಗೆ ಶಿಫಾರಸು ಮಾಡಲಾಗಿದೆ. ಸರ್ಕಾರ ಇದನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಇದನ್ನು ನಾನು ಸ್ವಾಗತ ಮಾಡ್ತೇನೆ ಎಂದರು.
ಇದನ್ನೂ ಓದಿ :- ತುಂಗಭದ್ರ ನದಿಯ ಕಲುಷಿತ ನೀರು ಕುಡಿದು 40ಕ್ಕೂ ಅಧಿಕ ಜನ ಅಸ್ವಸ್ಥ – ಓರ್ವ ಮಹಿಳೆ ಸಾವು