ಕೋಲಾರ ( KOLARA ) ದಲ್ಲಿ ಸಿದ್ದರಾಮಯ್ಯ ( SIDDARAMAIAH ) ದೇವಸ್ಥಾನಗಳ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಕೊಪ್ಪಳದಲ್ಲಿ ಸಚಿವ ಎಂಟಿಬಿ ನಾಗರಾಜ್ (MTB NAGARAJ ) ಪ್ರತಿಕ್ರಿಯೆ ನೀಡಿದ್ದಾರೆ.
ಕೋಲಾರ ನನ್ನ ಕ್ಷೇತ್ರದ ಪಕ್ಕದ ಊರು. ಸಿದ್ದರಾಮಯ್ಯ ಸಿಎಂ ಆದವರು. 5 ವರ್ಷ ಆಡಳಿತ ಮಾಡಿದವರು. ಸಿದ್ದರಾಮಯ್ಯ ಎಲ್ಲಿ ಬೇಕಾದರೂ ನಿಲ್ಲಬಹುದು. ಸಿದ್ದರಾಮಯ್ಯ ಇನ್ನೂ ಎಲ್ಲಿ ನಿಲ್ಲುತ್ತೇನೆ ಎಂದು ಹೇಳಿಲ್ಲ. ಕಾಂಗ್ರೆಸ್ ಅಭ್ಯರ್ಥಿ, ತನ್ನ ಕ್ಷೇತ್ರ ಯಾವುದು ಎಂದು ಇನ್ನೂ ಸಿದ್ದರಾಮಯ್ಯ ಹೇಳಿಲ್ಲ ಎಂದು ಹೇಳಿದ್ರು.
ಕುರುಬ ಸಮಾಜ ಮೀಸಲಾತಿ ಕೊಡಬೇಕು ಎನ್ನುವ ವಿಚಾರವಾಗಿ ಮಾತನಾಡಿದ ಅವರು, ಎಲ್ಲ ಸಮುದಾಯಗಳು ಮೀಸಲಾತಿ ಕೇಳ್ತಿದ್ದಾರೆ. ಆದರೆ ಕಾನೂನುಗಳಲ್ಲಿ ಅವಕಾಶ ಬೇಕಲ್ವಾ . ಸುಪ್ರೀಂ ಕೋರ್ಟ್ ನ ಕಟ್ಟುನಿಟ್ಟಿನ ಆದೇಶವಿದೆ. ಯಾವ ಯಾವ ಸಮುದಾಯಗಳಿಗೆ ಎಷ್ಟು ಕೊಡ್ಬೇಕು ಅನ್ನೊದನ್ನ ನೋಡ್ಕೊಂಡು ಕೋರ್ಟ್ ಹಂಚಿಕೆ ಮಾಡಲಿದೆ. ಮೀಸಲಾತಿ ಕೇಳೋದು ಎಲ್ಲರ ಹಕ್ಕು ಎಂದು ತಿಳಿಸಿದ್ರು. ಇದನ್ನೂ ಓದಿ : – ದೇವನಹಳ್ಳಿಯಲ್ಲಿ ಶಾಲಾ ಮಕ್ಕಳ ಜೊತೆ ಊಟ ಮಾಡಿದ ಹೆಚ್.ಡಿ ಕುಮಾರಸ್ವಾಮಿ
ಆಪರೇಷನ್ ಕಮಲದಲ್ಲಿ ಸೋತಿದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಪಕ್ಷ ಬಿಟ್ಟು ಬಂದಿದಕ್ಕೆ ಕಾರ್ಯಕರ್ತರು ಬೇಜಾರಗಿದ್ದಕ್ಕೆ ನಾನು ಸೋತೆ. ನಾನು ಒಂದು ಸಲ ಪಕ್ಷ ಬದಲಾಯಿಸಿದ್ದೇನೆ. ಪದೇ ಪದೇ ಪಕ್ಷ ಬದಲಾಯಿಸುವುದಿಲ್ಲ. ನಾನು ಬಿಜೆಪಿ ಪಕ್ಷದಿಂದಲೇ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಮುಂದಿನ 2023 ರಲ್ಲಿ ಬಿಜೆಪಿ 150 ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತೆ ಎಂದು ಹೇಳಿದ್ರು.
ಇದನ್ನೂ ಓದಿ : – ಬಿಜೆಪಿ ಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಮೊದಲು ಅದನ್ನು ನೋಡಿಕೊಳ್ಳಲಿ – ಡಿ.ಕೆ ಶಿವಕುಮಾರ್