ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕಳೆದುಕೊಂಡಿರೋದು ಕಾಂಗ್ರೆಸ್ ನವರು – ಸಿದ್ದರಾಮಯ್ಯ

ಬಿಜೆಪಿ ( BJP ) ಯವರು ಡೋಂಗಿಗಳು ಎಂದು ಬಿಜೆಪಿ ಮನೆ ಮನೆ ತ್ರಿರಂಗ ಕಾರ್ಯಕ್ರಮಕ್ಕೆ ವಿಪಕ್ಷನಾಯಕ ಸಿದ್ದರಾಮಯ್ಯ ( SIDDARAMAIAH ) ವ್ಯಂಗ್ಯವಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ( D.K SHIVKUMAR ) ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಜಂಟಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಎಂಥಹ ನಾಟಕ ಮಾಡ್ತೀರಾ ನಾಚಿಕೆ ಆಗಲ್ವ ಬಿಜೆಪಿಯವರಿಗೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ದೇಶದಾದ್ಯಂತ ಪಾದಯಾತ್ರೆ ಮಾಡ್ತಾ ಇದ್ದೇವೆ. ಇದನ್ನು ಓದಿ : – ಗಣೇಶ ಚತುರ್ಥಿಗೆ ಬಿಬಿಎಂಪಿಯಿಂದ ಹಲವು ನಿಯಮಗಳು ಜಾರಿ- ಉಲ್ಲಂಘಿಸಿದವರ ವಿರುದ್ಧ ಕ್ರಮ – ತುಷಾರ್ ಗಿರಿನಾಥ್

224 ಕ್ಷೇತ್ರಗಳಲ್ಲಿಯೂ ಇವತ್ತು ಪಾದಯಾತ್ರೆ ಮಾಡ್ತಾ ಇದ್ದೇವೆ. ಆರ್ ಎಸ್ ಎಸ್ ನವರು ಯಾರಾದರು ಸ್ವಾತಂತ್ರಕ್ಕಾಗಿ ಪ್ರಾಣ ಕೊಟ್ಟಿದ್ದಾರಾ .? ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕಳೆದು ಕೊಂಡಿರೋದು ಕಾಂಗ್ರೆಸ್ ( CONGRESS ) ನವರು ಎಂದು ಹೇಳಿದ್ರು . ಚಿಂತಾಮಣಿಯಲ್ಲಿ ಸುಧಾಕರ್ ಗೆದ್ದರೆ ಮಾತ್ರ ಅಭಿವೃದ್ದಿ ಸಾಧ್ಯ ಎಂದು ತಿಳಿಸಿದ್ರು.

ಹೊಸಕೋಟೆ ( HOSAKOTE ) ನಗರದ ಸಂತೆ ಗೇಟ್ ಬಳಿ ಬೃಹತ್ ಸೇಬಿನ ಹಾರ ಹಾಗೂ ಬೆಳ್ಳಿ ಕಿರೀಟ ಹಾಕುವ ಮೂಲಕ ಕಾಂಗ್ರೆಸ್ ಮುಖಂಡರು ಹಾಗೂ ಅವರ ಅಭಿಮಾನಿಗಳು ಸಿದ್ದರಾಮಯ್ಯ ಅವರನ್ನು ಬರಮಾಡಿಕೊಂಡರು. ಸಿದ್ದರಾಮಯ್ಯ ಆಗಮನ ಹಿನ್ನೆಲೆ ಬೆಂಗಳೂರು, ಕೋಲಾರ ( KOLAR ) ಚಿಂತಾಮಣಿ ಹಾಗೂ ಮಾಲೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬೃಹತ್ ಸೇಬಿನ ಹಾರದಲ್ಲಿದ್ದ ಸೇಬಿಗಾಗಿ ಜನರು ಮುಗಿಬಿದ್ದರು.

ಇದನ್ನು ಓದಿ : – ಮೈದುಂಬಿ ಹರಿಯುತ್ತಿರುವ ಕಪಿಲಾ ನದಿ – ಎದುರಾಗುವುದೇ ನಂಜನಗೂಡಿಗೆ ಪ್ರವಾಹದ ಭೀತಿ..?

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!