ಸಿದ್ದರಾಮೋತ್ಸವ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ (SIDDARAMAIAH) ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ (D.K SHIVKUMAR) ಗೆ ಬಿಜೆಪಿ ಟಕ್ಕರ್ ನೀಡಿದ್ದು, ತಾವೇ ನಿರ್ದೇಶಿಸುತ್ತಿರುವ ಚಲನಚಿತ್ರಕ್ಕೆ ಸಿದ್ದರಾಮಯ್ಯ ನಾಯಕರಾಗಲು ಹೊರಟಿದ್ದಾರೆ ಎಂದು ಟ್ವೀಟ್ (TWEET) ಮೂಲಕ ಕಾಲೆಳೆದಿದೆ.
ತಾವೇ ನಿರ್ದೇಶಿಸುತ್ತಿರುವ ಚಲನಚಿತ್ರಕ್ಕೆ ಸಿದ್ದರಾಮಯ್ಯ ನಾಯಕರಾಗಲು ಹೊರಟಿದ್ದಾರೆ. ಸಿದ್ದರಾಮೊತ್ಸವ ಎನ್ನುವುದು ಸಿದ್ದರಾಮಯ್ಯ ಬ್ಯಾನರ್ ಅಡಿ ತಯಾರಾಗುತ್ತಿರುವ ಚಿತ್ರವಾಗಿದೆ. ಈ ಚಿತ್ರದ ಮೂಲಕ ತಾವೇ ಮುಂದಿನ ಸಿಎಂ ಎಂಬ ಸಂದೇಶ ನೀಡುವುದು ಖಚಿತ.
ಕನಕಪುರ(KANAKAPURA) ದ ಬಂಡೆಯೊಂದು ಪಕ್ಷ ಪೂಜೆಯೇ ಅಂತಿಮ, ವ್ಯಕ್ತಿ ಪೂಜೆಯಲ್ಲ ಎಂದು ಗುಡುಗುತ್ತಿದೆ. ಆ ಬಂಡೆಗೆ ಡೈನಾಮೆಟ್ ಇಡಲು ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಸಿದ್ದರಾಮೋತ್ಸವದ ಬಳಿಕ ಕನಕಪುರದ ಬಂಡೆ ಛಿದ್ರವಾಗಲಿದೆಯೇ? ಎಂದು ವಾಗ್ದಾಳಿ ನಡೆಸಿದೆ. ಇದನ್ನೂ ಓದಿ : – ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ ಇದೆ- ಅದಕ್ಕೆ ಹೇಳಿದೆಲ್ಲ ಉಲ್ಟಾ ಆಗ್ತಿದೆ – ಸಿ.ಟಿ ರವಿ
ಕೆಪಿಸಿಸಿ ಅಧ್ಯಕ್ಷರ ವಿರೋಧ ನಡುವೆಯೂ ಸಿದ್ದರಾಮೋತ್ಸವ ನಡೆಯಲಿದೆ ಎಂದಾದರೆ ಡಿಕೆಶಿ ಇದ್ದೂ ಇಲ್ಲದಂತಾಗಿದ್ದಾರೆ. ಸಿದ್ದರಾಮೊತ್ಸವ ಕೇವಲ ಸಿದ್ದರಾಮಯ್ಯರ ಜನ್ಮದಿನೋತ್ಸವವಲ್ಲ. ಅದು ಡಿಕೆಶಿಯ ರಾಜಕೀಯ ಬೆಳವಣಿಗೆಗೆ ತೋಡುತ್ತಿರುವ ಗುಂಡಿ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿರುವ ಹಲ್ಲಿಲ್ಲದ ಹಾವು ಎಂದು ವ್ಯಂಗ್ಯ ಮಾಡಿದ್ದಾರೆ.
ಇದನ್ನೂ ಓದಿ : – ಮಹಾ ಹೈಡ್ರಾಮಕ್ಕೆ ಅಧಿಕೃತ ತೆರೆ – ಬಹುಮತ ಪರೀಕ್ಷೆಯಲ್ಲಿ ಏಕನಾಥ್ ಶಿಂಧೆ ಪಾಸ್