ಹರ್ ಘರ್ ತಿರಂಗಾದ ಬಗ್ಗೆ ಸಿದ್ದರಾಮಯ್ಯ ಎಡವಟ್ಟು ಹೇಳಿಕೆ

ಹರ್ ಘರ್ ತಿರಂಗಾ (Har ghar tiranga) ದ ಬಗ್ಗೆ ಸಿದ್ದರಾಮಯ್ಯ (Siddaramaiah) ವ್ಯಂಗ್ಯವಾಡುತ್ತಾ ಯಡವಟ್ಟು ಮಾಡಿದ್ದಾರೆ. ಬಾವುಟ (Flag) ದ ಬಣ್ಣ ಕೇಸರಿ, ಬಿಳಿ, ಹಸಿರು ಎನ್ನುವ ಬದಲಿಗೆ ಕೆಂಪು, ಬಿಳಿ, ಹಸಿರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪಾಗಿ ಹೇಳಿದರು.

ಮೈಸೂರಿನ (Mysuru) ಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನವು ಕಾಂಗ್ರೆಸ್ನಿಂದಲೇ ಆಗಿದೆ. ಇಡೀ ದೇಶವೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಗಾಂಧೀಜಿ (Gandhiji) , ತಿಲಕ (Tilak) ರು ಸೇರಿದಂತೆ ಇನ್ನಿತರ ನಾಯಕರು ದೇಶಕ್ಕಾಗಿ ಮಾಡಿದ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಬಂದಿದೆ. ತ್ಯಾಗ, ಶಾಂತಿ, ಸಮೃದ್ಧಿ ಈ ಬಾವುಟದ ಸಂಕೇತವಾಗಿದ್ದು, ಇದೇ ಧ್ವಜವನ್ನು ಸಾರ್ವಕರ್ ವಿರೋಧ ಮಾಡಿದ್ದರು ಎಂದ ಅವರು, ರಾಷ್ಟ್ರ ಧ್ವಜ ಬಣ್ಣ ಕೆಂಪು, ಬಿಳಿ ಹಸಿರು ಎಂದು ತಪ್ಪಾಗಿ ಹೇಳಿದರು.

ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಎಲ್ಲರೂ ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಆದರೆ ಬಿಜೆಪಿ, ಜೆಡಿಎಸ್ ನವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. 1925ರಲ್ಲಿ ಆರ್ಎಸ್ಎಸ್ ಪ್ರಾರಂಭವಾಯಿತು. ಹೆಡ್ಗೇವಾರ್ ಇದರ ಅಧ್ಯಕ್ಷರಾಗಿದ್ದರು. 1951ರಲ್ಲಿ ಜನಸಂಘ ಆರಂಭವಾಗಿದ್ದು. ಸ್ವಾತಂತ್ರ್ಯ ಬಂದ 4 ವರ್ಷದ ನಂತರ ಜನಸಂಘವಾಗಿದೆ. 1980ರಲ್ಲಿ ಬಿಜೆಪಿ ಪಕ್ಷವಾಗಿದೆ. ಇವಾಗ ಹರ್ ಘರ್ ತಿರಂಗಾ ಅಂತಿದ್ದಾರೆ. ಆಜಾದಿ ಕಾ ಅಮೃತ ಮಹೋತ್ಸವ ಆರ್ಎಸ್ಎಸ್ನ ಮುಖವಾಡ ಎಂದು ಟೀಕಿಸಿದರು. ಇದನ್ನು ಓದಿ : –  ಬಸವರಾಜ ಹೊರಟ್ಟಿ ಕಾರು ಅಪಘಾತ – ಬೈಕ್ ಸವಾರನಿಗೆ ಗಾಯ ಕಿಮ್ಸ್ ಗೆ ದಾಖಲು

ಬಿಜೆಪಿ (BJP) ಯಂತಹ ಭ್ರಷ್ಟ, ಕೋಮುವಾದಿ ಪಕ್ಷ ಮತ್ತೊಂದಿಲ್ಲ. ಬಿಜೆಪಿ, ಜೆಡಿಎಸ್ನವರು ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿಲ್ಲ. ಯಾರಾದರೂ ಒಬ್ಬ ಬಿಜೆಪಿಯವನು ದೇಶಕ್ಕಾಗಿ ಸತ್ತಿದ್ದಾರಾ..? ದೇಶ ಭಕ್ತಿ ಆರಂಭವಾಗಿದ್ದೇ ಕಾಂಗ್ರೆಸ್ ಪಕ್ಷದಿಂದ. ಬಿಜೆಪಿಗೆ ಹೋಗುತ್ತೇನೆ ಅನ್ನುವವರು ಬಿ ಕೇರ್ ಫುಲ್ ಎಂದು ವಾಗ್ದಾಳಿ ನಡೆಸಿದರು.

ಇದನ್ನು ಓದಿ : –  ತಿಪ್ಪರಲಾಗ ಹಾಕಿದರು ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ – ಮುನಿರತ್ನ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!