ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ( siddaramaiah ) ಅವರ 75 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಮಧ್ಯರಾತ್ರಿ ಹುಬ್ಬಳ್ಳಿ ( huballi ) ಖಾಸಗಿ ಹೊಟೇಲ್ ನಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಲಾಗಿದೆ.
ಕಾಂಗ್ರೆಸ್ ( congress ) ನಾಯಕರು ಸರಿಯಾಗಿ 12 ಗಂಟೆಗೆ ಜನ್ಮದಿನ ಆಚರಣೆ ಮಾಡಿದರು. ಕೇಕ್ ಕತ್ತರಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( d.k shivkumar ) ಅವರಿಗೆ ಸಿದ್ದರಾಮಯ್ಯ ತಿನ್ನಿಸಿದರು. ಈ ವೇಳೆ ಡಿಕೆಶಿ ಕೂಡಾ ಸಿದ್ದರಾಮಯ್ಯಗೆ ಕೇಕ್ ತಿನ್ನಿಸಿ ಶುಭ ಹಾರೈಸಿದರು. ಜನ್ಮದಿನ ಆಚರಣೆ ವೇಳೆ ಹಲವು ನಾಯಕರು ಭಾಗಿಯಾಗಿದ್ದರು. ಪಕ್ಷದ ವರಿಷ್ಠ ರಾಹುಲ್ ಗಾಂಧಿ ಸಮ್ಮುಖದಲ್ಲಿ ಇಂದು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ನಡೆಯಲಿದೆ. ಇದರಿಂದ ಸಿದ್ದರಾಮಯ್ಯಗೆ ಎಷ್ಟರ ಮಟ್ಟಿಗೆ ಲಾಭ ಆಗಬಹುದು ಅನ್ನೋದು ಅವರ ಬೆಂಬಲಿಗರ ಲೆಕ್ಕಾಚಾರವಾಗಿದೆ. ಇದನ್ನು ಓದಿ :- SDPI –PFI ಬಿಜೆಪಿ ಸಾಕಿರುವ ಸಂಘಟನೆಗಳು – ಸಿದ್ದರಾಮಯ್ಯ ಗಂಭೀರ ಆರೋಪ
ಭಾರೀ ಮಳೆ, ಪ್ರವಾಹ ಭೀತಿಯ ನಡುವೆಯೂ ಅವರ ಅಭಿಮಾನಿಗಳು ಬೆಣ್ಣೆ ನಗರಿ ದಾವಣಗೆರೆ( davanagere ) ಯಲ್ಲಿ ಇಂದು ಸಿದ್ದರಾಮೋತ್ಸವ ( siddaramosthava ) ಹಮ್ಮಿಕೊಂಡಿದ್ದಾರೆ. ಬೆಳಗ್ಗೆಯಿಂದಲೇ ಕನ್ನಡ ನಾಡಿನ ಮೂಲೆ ಮೂಲೆಗಳಿಂದ ಸಿದ್ದರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಲಕ್ಷಗಟ್ಟಲೆ ಜನ ದಾವಣಗೆರೆಯತ್ತ ಮುಖ ಮಾಡಿದ್ದಾರೆ. ಹಲವರು ನಿನ್ನೆಯೇ ದಾವಣಗೆರೆಗೆ ಬಂದು ಬೀಡುಬಿಟ್ಟಿದ್ದಾರೆ. ಬೃಹತ್ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆಂದ ಮೇಲೆ ಅದಕ್ಕೆ ಸರಿಯಾದ ಊಟ-ತಿಂಡಿ, ಆಸನ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮ ನಡೆಯುವ ಮುಖ್ಯ ವೇದಿಕೆ, ಕೆಳಗೆ ಸಭಾಂಗಣದಲ್ಲಿ ಆಸನ ವ್ಯವಸ್ಥೆಯನ್ನು ಚಾಚೂ ತಪ್ಪದೆ, ಯಾವುದಕ್ಕೂ ಚ್ಯುತಿ ಬರದಂತೆ ನೋಡಿಕೊಳ್ಳುತ್ತಿದ್ದಾರೆ.
ಸಿದ್ದರಾಮೋತ್ಸವ ನಡೆಯುವ ಸ್ಥಳದಲ್ಲಿ 4.5 ಲಕ್ಷ ಕುರ್ಚಿಗಳನ್ನು ಹಾಕಲಾಗಿದ್ದು 6 ಲಕ್ಷಕ್ಕೂ ಅಧಿಕ ಮಂದಿ ಇಂದು ಭಾಗಿಯಾಗುವ ನಿರೀಕ್ಷೆಯಿದೆ. ಉತ್ಸವಕ್ಕೆ ಬರುವವರಿಗೆ ಈ ಜಡಿ ಮಳೆಗೆ ತಿನ್ನಲು ಬಿಸಿಬಿಸಿ ಬಿಸಿಬೇಳೆ ಬಾತ್, ಸಿಹಿಯಾದ ಮೈಸೂರು ಪಾಕ್, ಇಡ್ಲಿ, ಪೊಂಗಲ್, ಚಿತ್ರಾನ್ನ, ಬಿಸಿ ಬಿಸಿ ಕಾಫಿ, ಟೀ, ಹಾಲು, ನೀರಿನ ವ್ಯವಸ್ಥೆಯಿದೆ. ಕಳೆದ ಒಂದು ವಾರದಿಂದ ಹಾಲು ತುಪ್ಪ ಎಣ್ಣೆಯಿಂದ 5 ಲಕ್ಷ ಗರಿಗರಿ ಮೈಸೂರು ಪಾಕ್ ತಯಾರಿಸಲಾಗಿದೆ. ಒಂದೇ ಬಾರಿ 10 ಸಾವಿರ ಕಾರ್ಯಕರ್ತರಿಗೆ ಉಣಬಡಿಸುವುದಕ್ಕೆ ಕೌಂಟರ್ ಗಳು ಸಜ್ಜಾಗಿವೆ. ಸುಮಾರು 2, 500 ಅಡುಗೆ ಸಿಬ್ಬಂದಿಗಳು ಭರ್ಜರಿ ಊಟ ತಯಾರಿಸಲು ಮುಂದಾಗಿದ್ದಾರೆ.
ಇದನ್ನು ಓದಿ :- “ಶೀಘ್ರಮೇವ ತೃತೀಯ ಸಿಎಂ ಪ್ರಾಪ್ತಿರಸ್ತು” ! –ಬಿಜೆಪಿ, ಬೊಮ್ಮಾಯಿ ಕಾಲೆಳೆದ ಕಾಂಗ್ರೆಸ್