ಪಂಜಾಬ್ ಹಾಡುಗಾರ ಸಿಧು ಮೂಸೆವಾಲ (Siddu moosewala) ಹತ್ಯೆ ಪ್ರಕರಣದಲ್ಲಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ (Lawrence bishnoi) ಮಾಸ್ಟರ್ ಮೈಂಡ್ ಎಂದು ದೆಹಲಿ ಪೊಲೀಸರು (Delhi police) ಹೇಳಿದ್ದಾರೆ.
ಪಂಜಾಬ್ ನ ಮಾನ್ಸಾದಲ್ಲಿ ಕಳೆದ ತಿಂಗಳು ನಡೆದ ಭೀಕರ ಹತ್ಯೆಯಲ್ಲಿ ಶಾಮೀಲಾಗಿದ್ದ ಆರೋಪಿಯ ನಿಕಟ ಸಹಚರನನ್ನೂ ಬಂಧಿಸಲಾಗಿದೆ.
ಜೈಲಿನಲ್ಲಿದ್ದುಕೊಂಡೂ ಖ್ಯಾತ ಗಾಯಕನ ಹತ್ಯೆಗೆ ಬಿಷ್ಣೋಯ್ ಹೇಗೆ ಯೋಜನೆ ರೂಪಿಸಿದ್ದ ಎಂಬುದರ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ವಿಶೇಷ ಪೊಲೀಸ್ ಆಯುಕ್ತ ಹೆಚ್ ಎಸ್ ಧಲಿವಾಲ್ (Hs. Dhalival) ಹತ್ಯೆ ಪ್ರಕರಣದಲ್ಲಿ ಇನ್ನೂ ಐವರನ್ನು ಗುರುತಿಸಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ :- ಖ್ಯಾತ ಚಿತ್ರಸಾಹಿತಿ ಪುರುಷೋತ್ತಮ ಕಣಗಾಲ್ ನಿಧನ