ನೂತನವಾಗಿ ನೇಮಕವಾದ ಪದಾಧಿಕಾರಿಗಳ ಸಭೆ ಮಾಡಿದ್ದೇವೆ. ಚುನಾವಣೆಗೆ ಸಮಯ ಕಡಿಮೆ ಇದೆ. ಒಂದು ವರ್ಷ ಅಷ್ಟೇ ಬಾಕಿಯಿದೆ ಅಷ್ಟೇ. 24*7 ಕೆಲಸ ಮಾಡಬೇಕು ಎಂದು ಹೇಳಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ಕಾರದಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ.ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪಿಎಂ ಗೆ ಪತ್ರ ಬರೆದಿದ್ದಾರೆ. ಪಿಎಂ ನಾನು ಚೌಕಿದಾರ ಎಂದು ಹೇಳ್ತಾರೆ.ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಕೇಂದ್ರದ ಕುಮ್ಮಕ್ಕಿದೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ರು.
ಪಿಎಸ್ಐ ಪರೀಕ್ಷೆ ಅಕ್ರಮ ವಿಚಾರ
ದಿವ್ಯ ಹಾಗರಗಿ ಅರೆಸ್ಟ್ ಮಾಡಲು ಆಗ್ತಿಲ್ಲ. ಪೊಲೀಸರೇ ರಕ್ಷಣೆ ಮಾಡ್ತಿದ್ದಾರೆ. ಸರ್ಕಾರ ಭ್ರಷ್ಟಾಚಾರ ಪಾಲು ಪಡೆದಿದೆ. ಈಶ್ವರಪ್ಪ ಭ್ರಷ್ಟಾಚಾರದ ಆರೋಪದಲ್ಲಿ ಸಿಕ್ಕಿ ರಾಜೀನಾಮೆ ಕೊಟ್ರು. ನಾಗೇಶ್ ಸಹ ರಾಜೀನಾಮೆ ಕೊಟ್ರು.
ಸೆಕ್ಸ್ ಸ್ಕ್ಯಾಂಡಲ್ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ರು. ಇನ್ನೂ 3 ಜನ ಮಂತ್ರಿಗಳು ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕೂಡಲೇ ಉಳಿದ ಸಚಿವರ ಹೆಸರು ಹೇಳಬೇಕು ಎಂದು ತಿಳಿಸಿದ್ರು.
ಇದನ್ನೂ ಓದಿ :- ಒಟಿಟಿಯಲ್ಲಿ ‘ಜೇಮ್ಸ್’ ಪ್ರಸಾರ – ಏಪ್ರಿಲ್ 14ಕ್ಕಾಗಿ ಕಾದು ಕುಳಿತಿರುವ ಪುನೀತ್ ಅಭಿಮಾನಿಗಳು