ಕನ್ನಡ ಸಿನಿಮಾ ರಂಗದ ಹೆಸರಾಂತ ನಟ ವಸಿಷ್ಠ ಸಿಂಹ (VASISTA SIMHA )ಮತ್ತು ನಟಿ ಹರಿಪ್ರಿಯಾ (HARI PRIYA) ಜೋಡಿಯ ಆರತಕ್ಷತೆ ಸಮಾರಂಭ ಶನಿವಾರ ಬೆಂಗಳೂರಿನ ಹೊರವಲಯದ ಪ್ರತಿಷ್ಠಿತ ರೆಸಾರ್ಟ್ ನಲ್ಲಿ ನಡೆಯಿತು.
ಕುಟುಂಬದ ಸದಸ್ಯರು, ಸಿನಿಮಾ ರಂಗದ ಕಲಾವಿದರು ಮತ್ತು ತಂತ್ರಜ್ಞರು ಹಾಗೂ ನಾನಾ ಕ್ಷೇತ್ರಗಳು ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಗೋಲ್ಡನ್ ಸ್ಟಾರ್ ಗಣೇಶ್, ಮಾಳವಿಕಾ ಅವಿನಾಶ್ ದಂಪತಿ, ಅಮೂಲ್ಯ ಜಗದೀಶ್, ಹಿರಿಯ ನಟ ಶ್ರೀನಾಥ್, ಲಹರಿ ಮ್ಯೂಸಿಕ್ ನ ಲಹರಿ ವೇಲು, ರಮೇಶ್ ಅರವಿಂದ್, ಗಿರಿಜಾ ಲೋಕೇಶ್, ಶರಣ್, ಶೃತಿ, ಪ್ರಿಯಾಂಕಾ ಉಪೇಂದ್ರ ದಂಪತಿ ಸೇರಿದಂತೆ ಹಲವರು ಆರಕ್ಷತೆಯಲ್ಲಿ ಭಾಗಿಯಾಗಿ ಜೋಡಿ ಶುಭಹಾರೈಸಿದರು. ಇದನ್ನು ಓದಿ :- ಕನ್ನಡ ಚಿತ್ರರಂಗದ ಹಿರಿಯ ನಟ ಮನದೀಪ್ ರಾಯ್ ನಿಧನ…!
ಜ.26 ರಂದು ಈ ಜೋಡಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿತ್ತು. ಮದುವೆ ಸಮಾರಂಭದಲ್ಲೂ ಸಿನಿಮಾ ರಂಗದ ಅನೇಕ ಸೆಲೆಬ್ರಿಟಿಗಳು ಮತ್ತು ರಾಜಕೀಯ ಗಣ್ಯರು ಕೂಡ ಭಾಗಿಯಾಗಿದ್ದರು. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಸಂಸದ ಪ್ರತಾಪ್ ಸಿಂಹ, ಸಚಿವ ಸೋಮಶೇಖರ್, ಶಾಸಕ ರಾಮದಾಸ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದನ್ನು ಓದಿ :- ಭ್ರಷ್ಟಾಚಾರ ಆರೋಪ- ಮಂಗಳೂರು ನಗರ ಪೊಲೀಸ್ ಕಮಿಷನರ್ ಗೆ ಲೋಕಾಯುಕ್ತ ನೋಟಿಸ್ ಜಾರಿ