ರಾಮನಗರ (Ramnagara) ವಿಧಾನಸಭೆ ಕ್ಷೇತ್ರ (Assembly constituency) ಕ್ಕೆ ನಿಖಿಲ್ ಕುಮಾರಸ್ವಾಮಿ (Nikhil kumarswamy) ಜೆಡಿಎಸ್ ಅಭ್ಯರ್ಥಿ (JDS Candidate) ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ, ಇದರ ಬೆನ್ನಲ್ಲೆ ಸುದ್ದಿಗೋಷ್ಠಿ ನಡೆಸಿರುವ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಕುಮಾರಸ್ವಾಮಿ (Kumarswamy) ಕುಟುಂಬದ ವಂಶಪಾರಂಪರ್ಯ ರಾಜಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಜನತೆ ಅಂತ್ಯ ಹಾಡಲಿದ್ದಾರೆ ಎಂದು ಯೋಗೇಶ್ವರ್ (CP.Yogeshwar) ಹೇಳಿದ್ದಾರೆ. ಕ್ಷೇತ್ರದಲ್ಲಿ 1,500 ಕೋಟಿ ರು. ಅನುದಾನ ತಂದಿರುವುದಾಗಿ ಕುಮಾರಸ್ವಾಮಿ ಹೇಳಿದ್ದು, ಈ ಎಲ್ಲ ಕಾಮಗಾರಿಯನ್ನು ಬೇನಾಮಿ ಹೆಸರಿನಲ್ಲಿ ತಾವೇ ನಡೆಸಿದ್ದಾರೆ. ಗುತ್ತಿಗೆದಾರರಿಂದ ದಂಧೆ ನಡೆಸಿ, ಆ ಪಾಪದ ಹಣವನ್ನು ಹೆಲಿಕಾಪ್ಟರ್ ನಲ್ಲಿ ಹೂವಿನ ರೂಪದಲ್ಲಿ ಚೆಲ್ಲಿಸಿಕೊಳ್ಳುತ್ತಿದ್ದಾರೆ’ ಎಂದು ಲೇವಡಿ ಮಾಡಿದರು. ಇದನ್ನು ಓದಿ :- ಸಹಕಾರ ಸಂಘದ ಭ್ರಷ್ಚಾಚಾರದಲ್ಲಿ ಸಚಿವ ಸೋಮಶೇಖರ್ ಕುಮ್ಮಕ್ಕಿದೆ – ಡಿಕೆಶಿ
ಕುಮಾರಸ್ವಾಮಿ ಬಗ್ಗೆ ಬಿ.ಎಲ್. ಸಂತೋಷ್ ಹೇಳಿಕೆ ಸರಿಯಾಗಿಯೇ ಇದೆ. ಸಂತೋಷ್ ಜೀ ಅವರ ಬಗ್ಗೆ ವೈಯಕ್ತಿಕ ಟೀಕೆ ಸರಿಯಲ್ಲ. ಅವರು ನಮ್ಮ ನಾಯಕರು ಎಂದು ತಿರುಗೇಟು ನೀಡಿದ್ರು. ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ವಿಚಾರದಲ್ಲಿ ಜೆಡಿಎಸ್ ಜನರ ದಿಕ್ಕು ತಪ್ಪಿಸುತ್ತಿದೆ. ಕಳೆದ ಬಾರಿಯೂ ಇವರ ಮಾತು ನಂಬಿಕೊಂಡು ಜನರ ಆಸ್ತಿ ಹರಾಜಾಯಿತು ಎಂದು ಹೇಳಿದ್ದಾರೆ.
ಇದನ್ನು ಓದಿ :- ಪಂಚಮಸಾಲಿಗಳ ವಿರಾಟ್ ಪಂಚಶಕ್ತಿ ಸಮಾವೇಶ- ಸುವರ್ಣಸೌಧದತ್ತ ಸಾಗಿದ ಬೃಹತ್ ಪಾದಯಾತ್ರೆ