ಜೈಲಿನಿಂದಲೇ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿದ ಎಸ್.ಕೆ ಬಸವರಾಜನ್

ಜೈಲಿನಲ್ಲಿದ್ದುಕೊಂಡೇ ಚಿತ್ರದುರ್ಗ (Chitradurga) ಕ್ಷೇತ್ರದ ಕಾಂಗ್ರೆಸ್ (Congress) ಟಿಕೆಟ್ ಗಾಗಿ ಮಾಜಿ ಶಾಸಕ ಎಸ್. ಕೆ ಬಸವರಾಜನ್ (SK.Basavarajan) ಅರ್ಜಿ ಸಲ್ಲಿಸಿದ್ದಾರೆ.

ಜೈಲಿನಲ್ಲಿದ್ದುಕೊಂಡೇ ಚಿತ್ರದುರ್ಗ (Chitradurga) ಕ್ಷೇತ್ರದ ಕಾಂಗ್ರೆಸ್ (Congress) ಟಿಕೆಟ್ ಗಾಗಿ ಮಾಜಿ ಶಾಸಕ ಎಸ್. ಕೆ ಬಸವರಾಜನ್ (SK.Basavarajan) ಅರ್ಜಿ ಸಲ್ಲಿಸಿದ್ದಾರೆ. ಮುರುಘಾ ಮಠ (Murugha matha) ದಲ್ಲಿ ಫೋಟೋಗಳು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಶದಲ್ಲಿರುವ ಮಠದ ಮಾಜಿ ಆಡಳಿತಾಧಿಕಾರಿಯಾದ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಬೆಂಬಲಿಗರ ಮೂಲಕ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿಯನ್ನು KPCC ಕಚೇರಿಗೆ ಸಲ್ಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ 2 ಲಕ್ಷ ರೂ. ಬಿಲ್ಡಿಂಗ್ ಫಂಡ್ ನೀಡಿ ಟಿಕೆಟ್ ಗೆ ಅರ್ಜಿ ಹಾಕಿದ್ದಾರೆ. ಎಸ್.ಕೆ. ಬಸವರಾಜನ್ 2008ರಲ್ಲಿ JDS ನಿಂದ ಚಿತ್ರದುರ್ಗ ಶಾಸಕರಾಗಿದ್ದರು. ಅದಾದ ಬಳಿಕ 2013ರಲ್ಲಿ JDS ಅಭ್ಯರ್ಥಿಯಾಗಿ ಸೋತಿದ್ದು, 2018ರಲ್ಲಿ ಎಸ್.ಕೆ ಬಸವರಾಜನ್ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಇದೀಗ 2023ಕ್ಕೆ ಕಾಂಗ್ರೆಸ್ ಅಭ್ಯರ್ಥಿಯ ಆಕಾಂಕ್ಷಿಯಾಗಿದ್ದಾರೆ. ದಸರಾ ಉತ್ಸವದ ಅಂಗವಾಗಿ ನಡೆದ ಪೀಠಾರೋಹಣದ ಹಿಂದಿನ ದಿನ ಅಕ್ಟೋಬರ್ 5 ರಂದು ಮಧ್ಯರಾತ್ರಿ ವೇಳೆ ರಾಜಾಂಗಣದಲ್ಲಿ ಗೋಡೆಗೆ ಹಾಕಿದ್ದ 47 ಫೋಟೋಗಳು ಕಳ್ಳತನವಾಗಿದ್ದವು. ಧಾರ್ಮಿಕ ಮುಖಂಡರು, ರಾಷ್ಟ್ರಪತಿ, ಪ್ರಧಾನಿ, ಹಾಗೂ ರಾಜ್ಯದ ಸಿಎಂಗಳ ಜೊತೆಗಿನ ಮುರುಘಾಶ್ರೀ ಫೋಟೋಗಳನ್ನು ಕಳ್ಳರು ಕದ್ದೊಯ್ದಿದ್ದರು. ಆ ಬಳಿಕ ವಿಚಾರಣೆ ಆರಂಭಿಸಿದ ಪೊಲೀಸರು ನವೆಂಬರ್ 7 ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಇದನ್ನೂ ಓದಿ : – ತುಮಕೂರಿನಲ್ಲಿ ತಾಯಿ, ಅವಳಿ ಶಿಶು ಸಾವು ಪ್ರಕರಣ – ಮೃತ ಕಸ್ತೂರಿ ಮೊದಲ ಪುತ್ರಿ ಹೆಸರಲ್ಲಿ 10 ಲಕ್ಷ ರೂ FD – ಕೆ.ಸುಧಾಕರ್

ಹೊಸಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮೋಹನ ಮೂರ್ತಿ ಅಲಿಯಾಸ್ ಸ್ವಾಮಿ, ಎಸ್ಜೆ ಎಮ್ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಶಿವಾನಂದ ಸ್ವಾಮಿಯನ್ನು ಫೋಟೋ ಕಳವು ಮಾಡಿದ ಆರೋಪದಡಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ರು. ಈ ವೇಳೆ ಬಸವರಾಜನ್ ಫೋಟೋವನ್ನು ಕಳವು ಮಾಡುವಂತೆ ಪ್ರಚೋದನೆ ನೀಡಿದ್ದರು ಎಂಬ ಸತ್ಯ ಒಪ್ಪಿಕೊಂಡಿದ್ದರು. ಹಾಗಾಗಿ ಪೊಲೀಸರು ಬಸವರಾಜನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ : – JDS ಪಕ್ಷದ ಪಂಚರತ್ನ ಕಾರ್ಯಕ್ರಮ ದಿನಾಂಕ ನಿಗದಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!