ಲೋಕಸಭೆಯಲ್ಲಿ(Lok sabha) ಗುರುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ (Sonia Gandhi) ಮತ್ತು ಕೇಂದ್ರ ಸಚಿವೆ ಸ್ಮತಿ ಇರಾನಿ (Smriti Irani) ನಡುವೆ ವಾಕ್ಸಮರ ನಡೆದಿದೆ. ಸೋನಿಯಾ ಗಾಂಧಿ ಅಮೇಥಿ ಸಂಸದೆ ಸ್ಮೃತಿ ಇರಾನಿ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ದೂರಿದೆ.
ರಾಯ್ ಬರೇಲಿ ಸಂಸದೆ, ಸೋನಿಯಾ ಗಾಂಧಿಯನ್ನು ಬಿಜೆಪಿ ಸಚಿವೆ ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸದನದಲ್ಲಿ ಕಲಾಪ ಮುಂದೂಡಿದ ವೇಳೆ ಈ ವಾಕ್ಸಮರ ನಡೆದಿದೆ ಎಂದು ಹೇಳಲಾಗಿದೆ.
ಕಲಾಪ ಮುಂದೂಡಿದ ಬಳಿಕ ಅಲ್ಲಿಂದ ಹೊರ ಹೋಗುತ್ತಿದ್ದ ಸೋನಿಯಾ ಈ ಘೋಷಣೆ ಕೇಳಿದ ಕೂಡಲೇ ಟ್ರಷರಿ ಬೆಂಚ್ ಬಳಿ ಹೋಗಿದ್ದಾರೆ.
ಸೋನಿಯಾ ಗಾಂಧಿ ಬಿಜೆಪಿ ನಾಯಕಿ ರಮಾ ದೇವಿ ಬಳಿ ಹೋಗಿ ಈ ವಿವಾದದಲ್ಲಿ ನನ್ನ ಹೆಸರನ್ನೇಕೆ ಎಳೆದುತರಲಾಗುತ್ತಿದೆ ಎಂದು ಕೇಳಿದ್ದಾರೆ. ಚೌಧರಿ ಬಾಯ್ತಪ್ಪಿ ಹಾಗೆ ಹೇಳಿದ್ದಾರೆ. ಈ ಬಗ್ಗೆ ಅವರು ಈಗಲೇ ತಮ್ಮ ನಿಲುವು ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದಿದ್ದಾರೆ. ರಮಾ ದೇವಿ ಮತ್ತು ಸೋನಿಯಾ ಗಾಂಧಿ ಮಾತಾಡುತ್ತಿದ್ದಂತೆ ಸ್ಮೃತಿ ಇರಾನಿ ಮಧ್ಯಪ್ರವೇಶಿಸಿದ್ದಾರೆ . ಇದನ್ನೂ ಓದಿ :- BREAKING -ಬಿಬಿಎಂಪಿ ಚುನಾವಣೆ – ಒಂದು ವಾರದಲ್ಲಿ ಮೀಸಲಾತಿ ಪಟ್ಟಿ ಪ್ರಕಟಿಸಲು ಸುಪ್ರೀಂಕೋರ್ಟ್ ಸೂಚನೆ
ಬಿಜೆಪಿ ಹೇಳುವ ಪ್ರಕಾರ ಸ್ಮೃತಿ ಇರಾನಿ, ಸೋನಿಯಾ ಗಾಂಧಿ ಅವರಲ್ಲಿ ಸಮಸ್ಯೆ ಏನು ಎಂದು ಕೇಳಿದ್ದಾರೆ. ಅಷ್ಟೊತ್ತಿಗೆ ಸಿಟ್ಟುಗೊಂಡ ಕಾಂಗ್ರೆಸ್ ಅಧ್ಯಕ್ಷೆ ಸ್ಮೃತಿ ಇರಾನಿಯತ್ತ ತಿರುಗಿ, ನನ್ನಲ್ಲಿ ನೀವು ಮಾತನಾಡಬೇಡಿ ಎಂದಿದ್ದಾರೆ.
ಇದನ್ನೂ ಓದಿ :- ಶಿಕ್ಷಕರ ನೇಮಕಾತಿ ಹಗರಣ – ಬಂಧಿತ ಪಾರ್ಥ ಚಟರ್ಜಿಯನ್ನ ಸಂಪುಟದಿಂದ ವಜಾಗೊಳಿಸಿದ ಮಮತಾ ಬ್ಯಾನರ್ಜಿ