RSS & ಚಡ್ಡಿ ಕುರಿತ ಟೀಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಯಡಿಯೂರಪ್ಪ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು ಇದು ಯಾರಿಗೂ ಶೋಭೆ ತರುವಂತಹದ್ದಲ್ಲ.
ವಿಪಕ್ಷ ನಾಯಕನಾಗಿ ಸಿದ್ದರಾಮಯ್ಯ ಗೌರವಯುತವಾಗಿ ನಡೆದುಕೊಳ್ತಾರೆ ಅನ್ನೋ ನಿರೀಕ್ಷೆ ಇತ್ತು. RSS ಮತ್ತು ಚಡ್ಡಿ ಬಗ್ಗೆ ಮಾತನಾಡಿದ್ರೆ ಸಿದ್ದುಗೆ ಇರುವ ಗೌರವ ಸಹ ಹಾಳಾಗುತ್ತೆ ಎಂದು ಹೇಳಿದ್ದಾರೆ. ಪಠ್ಯ ಪರಿಷ್ಕರಣೆ ವಿವಾದದ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಎಲ್ಲ ಸರಿಪಡಿಸುತ್ತೇವೆಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಪಠ್ಯ ಪರಿಷ್ಕರಣೆಯನ್ನ ದೊಡ್ಡ ಗೊಂದಲ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ : – ಬೆಲೆ ಹೆಚ್ಚಳ ಮಾಡಿರೋದು ಮೋದಿ ಸಾಧನೆ – ಬೆಳಗಾವಿಯಲ್ಲಿ ಸಿದ್ದರಾಮಯ್ಯ ಟಾಂಗ್
ಸಿದ್ದು & ಯಡಿಯೂರಪ್ಪ ಮುಖಾಮುಖಿ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿ ಅನಿರೀಕ್ಷಿತವಾಗಿ ಸಿದ್ದರಾಮಯ್ಯ ಹೊರಟಿದ್ದರು. ಆಗ ನಾನು ಸಹ ಹೊರಟಿದ್ದೆ. ನಾನು ಕೂತಿದ್ದೆ ಅವರು ಬಂದರು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ..ನಮ್ಮ ಕಟ್ಟಾ ವಿರೋಧಿಗಳು ತಾನೆ ಅವರು ಎಂದು ಹೇಳಿದ್ರು. ನಾನು ಎಲ್ಲರ ಜೊತೆ ಸ್ನೇಹ ವಿಶ್ವಾಸ ಇಟ್ಟುಕೊಂಡಿದ್ದೇನೆ, ಅದರ ಬಗ್ಗೆ ಪ್ರಶ್ನೆ ಇಲ್ಲ ಎಂದು ಯಡಿಯೂರಪ್ಪ ಹೇಳಿದ್ರು.
ಇದನ್ನೂ ಓದಿ : – ಮಂಕಿಪಾಕ್ಸ್ ಬಗ್ಗೆ ರಾಜ್ಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ – ಡಾ. ಕೆ ಸುಧಾಕರ್