ತಮಿಳುನಾಡಿನಲ್ಲಿ ಅದ್ದೂರಿಯಾಗಿ ಆಚರಿಸುವ ಆಡಿ ಕಾರ್ತಿಗೆ ಹಬ್ಬವನ್ನ ನಗರದ ಸುಬ್ರಮಣ್ಯ ದೇವಾಲಯ (Subramanya temple) ದಲ್ಲಿ ಸಡಗರದಿಂದ ಭಕ್ತಿ ಪೂರ್ವಕವಾಗಿ ಆಚರಣೆ ಮಾಡಿದರು.
ಕೆ ಆರ್.ಪುರ (KR.Puram) ದ ವಿಜಿನಪುರ ಗ್ರಾಮದ ರೈಲ್ವೆ ಸ್ಟೇಷನ್ ಬಳಿ ಶ್ರೀ ವಿನಾಯಕ ಸುಬ್ರಮಣ್ಯ ದೇವಾಲಯದಲ್ಲಿ 45 ನೇ ಆಡಿ ಕಾರ್ತಿಗೆ ಕಾವಡಿ ಹಬ್ (Kavadi festival) ಬದ ಹಿನ್ನಲೆ ಮುಂಜಾನೆಯಿಂದ ಸಾವಿರಾರು ಭಕ್ತರು ತಮ್ಮ ಹರಕೆಗಳನ್ನ ಈಡೇರಿಸುತ್ತಿದ್ದಾರೆ. ಬಿಜೆಪಿ ಮುಖಂಡ ಎಂಎಲ್ ಡಿಸಿ ಮುನಿರಾಜ್ (Muniraju) ಮತ್ತು ಗ್ರಾಮದ ಮುಖಂಡರು ಆಡಿ ಕಾರ್ತಿಗೆ ಹಬ್ಬಕ್ಕೆ ಸುಬ್ರಮಣ್ಯ ದೇವರಿಗೆ ವಿಶೇಷವಾದ ಪೂಜೆ ಅಭಿಷೇಕ ಮಾಡಿ ಹೂವಿನ ಅಲಂಕಾರವನ್ನ ಮಾಡಿಸಿದರು.
ವಿಜಿನಪುರ ಸುತ್ತಮುತ್ತಲಿನ ಪ್ರದೇಶಗಳಿಂದ 30 ಸಾವಿರ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಕಳೆದ ಎರಡು ವರ್ಷಗಳ ಕಾಲ ಕೊರೋನಾ ಮಹಾಮಾರಿ ಹಿನ್ನೆಲೆ ಸ್ಥಗಿತಗೊಂಡ ಕಾವಡಿ ಹಬ್ಬ ಈ ವರ್ಷ ಅದ್ದೂರಿಯಾಗಿ ಜರುಗಿತು. ಇದನ್ನೂ ಓದಿ :- ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅನಾಹುತ – ಕಂಪನಿ ಮ್ಯಾನೇಜರ್ ಬಂಧನ – ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ ಹಾಲಪ್ಪ ಆಚಾರ್
ದೇವಸ್ಥಾನಕ್ಕೆ ಬರುವ ಸಾವಿರಾರು ಜನಕ್ಕೆ ಸಚಿವ ಬೈರತಿ ಬಸವರಾಜ್ (Bairathi basavaraj) ನೇತ್ರತ್ವದಲ್ಲಿ ಬಿಜೆಪಿ ಮುಖಂಡ ಎಂಎಲ್ ಡಿಸಿ ಮುನಿರಾಜ್ ಪ್ರಸಾದವನ್ನ ಆಯೋಜನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ದೇವಾಲಯದ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ : – ಯತ್ನಾಳ್ ಎರಡೂವರೆ ಸಾವಿರ ಕೋಟಿ ಕೊಟ್ರೆ ಸಿಎಂ ಮಾಡ್ತಾರೆ ಅಂದ್ರು ಅದು ಶಿಸ್ತಾ…? – ಬಿಜೆಪಿ ಗೆ ಸಿದ್ದರಾಮಯ್ಯ ಪ್ರಶ್ನೆ