ಇಂದಿನಿಂದ ಜುಲೈ 4ರವರೆಗೆ ರಾಜ್ಯಾದ್ಯಂತ ಎಸ್ಎಸ್ಎಲ್ಸಿ(SSLC) ಪೂರಕ ಪರೀಕ್ಷೆಗಳು ನಡೆಯಲಿದೆ. ಮೊದಲ ದಿನವಾದ ಇಂದು ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದೆ.
ಪೂರಕ ಪರೀಕ್ಷೆಗೆ ಒಟ್ಟು 94,649 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 63,363 ಬಾಲಕರು ಹಾಗೂ 31,283 ಬಾಲಕಿಯರು ಪರೀಕ್ಷೆ ನೋಂದಣಿಯಾಗಿದ್ದಾರೆ. ರಾಜ್ಯಾದ್ಯಂತ 423 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇದನ್ನೂ ಓದಿ : – ಅಂಜನಾದ್ರಿ ಪರ್ವತಕ್ಕೆ ಮೈಸೂರಿನ ಯದುವೀರ್ ದಂಪತಿ ಭೇಟಿ
ಎಸ್ಎಸ್ಎಲ್ಸಿ ಪ್ರಮುಖ ಪರೀಕ್ಷೆಗೆ ಇದ್ದ ಕೋವಿಡ್ ಮಾರ್ಗಸೂಚಿಗಳೇ ಪೂರಕ ಪರೀಕ್ಷೆಗೆ ಇರಲಿವೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಉಚಿತ ಬಸ್ ಸೇವೆ ನೀಡುತ್ತಿದೆ. ಪರೀಕ್ಷಾ ಕೇಂದ್ರಕ್ಕೆ ಹೋಗುವ ವಿದ್ಯಾರ್ಥಿಗಳು ಎಕ್ಸಾಂ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಬಹುದಾಗಿದೆ.
ಇದನ್ನೂ ಓದಿ : – ರಾಜ್ಯದಲ್ಲಿ ಕೊರೊನಾ ಬೆನ್ನಲ್ಲೇ ಡೆಂಗ್ಯೂ ಆತಂಕ