ಬಳ್ಳಾರಿ (Ballari) ಯಲ್ಲಿ ಸಚಿವ ಶ್ರೀರಾಮುಲು (Sri ramulu) ಹಾಗೂ ಶಾಸಕ ಜೆ.ಎನ್ ಗಣೇಶ್ (JN.Ganesh) ನಡುವೆ ಮಾತಿನ ಸಮರ ನಡೆದಿದೆ. ಕೋಳೂರು ಬಳಿ ಏತ ನೀರಾವರಿ ಕಾರ್ಯಕ್ರಮ ಉದ್ಘಾಟನೆ ಬಳಿಕ ಸಚಿವ ಹಾಗು ಶಾಸಕರು ಪರಸ್ಪರ ಟಾಂಗ್ ಕೊಟ್ಟಿದ್ದಾರೆ.
ಶ್ರೀ ರಾಮುಲು ಹಾಗೂ ಗಣೇಶ್ ಅಕ್ಕಪಕ್ಕದಲ್ಲೇ ನಿಂತು ಮಾಧ್ಯಮಗಳ ಮೂಲಕ ಮೀಸಲಾತಿ ವಿಚಾರದಲ್ಲಿ ವಾಗ್ಯುದ್ಧ ಮಾಡಿದ್ದಾರೆ.
ವಾಲ್ಮೀಕಿ ಹಾಗೂ ಎಸ್ಟಿ ಜನಾಂಗಕ್ಕೆ ಸಿಹಿ ಸುದ್ದಿ ಕೊಡುವೆ – ಶ್ರೀರಾಮುಲು
ಮೀಸಲಾತಿ ವಿಚಾರದಲ್ಲಿ ಯಾರು ಏನೇ ಮಾತಾಡಿದ್ರೂ ಕೂಡಾ ಅಷ್ಟೇ. ನಾನು ನನ್ನ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಕೊಟ್ಟ ಮಾತನ್ನ ಈಡೇರಿಸುತ್ತೇನೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು ಶೀಘ್ರದಲ್ಲೇ ಸಿಹಿ ಸುದ್ದಿ ಕೊಟ್ಟೇ ಕೊಡುವೆ. ವಾಲ್ಮೀಕಿ ಹಾಗೂ ಎಸ್ಟಿ ಜನಾಂಗಕ್ಕೆ ಸಿಹಿ ಸುದ್ದಿ ಕೊಡುವೆ. ಎಸ್ಸಿ ಜನಾಂಗದವರು 15 ರಿಂದ 17 ಪರ್ಸೆಂಟ್ ಗೆ ಏರಿಸಲು ಕೇಳ್ತಾ ಇದ್ದಾರೆ. ವಾಲ್ಮೀಕಿ ಜನಾಂಗದವರು 7.5 ಕ್ಕೆ ಏರಿಕೆಗೆ ಕೇಳ್ತಾ ಇದ್ದಾರೆ. ಎಸ್ಸಿ ಜನಾಂಗಕ್ಕೆ 17 ಪರ್ಸೆಂಟ್ ಮಾಡಿಕೊಡುವೆ, ಎಸ್ಟಿ ಗೆ 7.5 ಗೆ ಮಾಡಿ ಕೊಡುವೆ ಎಂದು ಹೇಳಿದರು. ಈ ವಿಚಾರದಲ್ಲಿ ವ್ಯಂಗ್ಯವಾಡುವರಿಗೆ ಟ್ವೀಟ್ ಮೂಲಕ ಏನು ಉತ್ತರ ಕೊಡಬೇಕು ಕೊಟ್ಟಿರುವೆ. ನನಗೇನು ಯಾರು ಬುದ್ದಿ ಕಲಿಸೋದು ಬೇಕಿಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ. ಇದನ್ನೂ ಓದಿ : – ಐಟಿ ಕ್ಯಾಪಿಟಲ್ ಬೆಂಗಳೂರು ಈಗ ಡ್ರಗ್ಸ್ ಕ್ಯಾಪಿಟಲ್, ಪಾಟ್ ಹೋಲ್ ಕ್ಯಾಪಿಟಲ್ ಆಗ್ತಿದೆ – ಕೃಷ್ಣ ಭೈರೇಗೌಡ ವ್ಯಂಗ್ಯ
ಸಚಿವರೇ ಪದೇ ಪದೇ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ – ಜೆ.ಎನ್ ಗಣೇಶ್
ಸಚಿವರು ಈಗಾಗಲೇ ಮೀಸಲಾತಿ ಕೊಡ್ತೀವಿ ಅಂತಾ ಹೇಳಿ ಹತ್ತು ವರ್ಷ ಆಯ್ತು. ಒಬ್ಬ ರಾಜಕಾರಣಿ ಒಂದು ಸಾರಿ ಹೇಳಿದ ಮೇಲೆ ಆ ಮಾತು ನಡೆಸಿಕೊಡಬೇಕು ಎಂದು ಶಾಸಕ ಜೆ.ಎನ್ ಗಣೇಶ್ ಹೇಳಿದ್ದಾರೆ. ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಮೀಸಲಾತಿ ಕೊಡುತ್ತೇನೆ ಎಂದಿದ್ದರು. ರಕ್ತದಲ್ಲಿ ಬೇಕಾದ್ರೂ ಬರೆದು ಕೊಡ್ತೀವಿ ಅಂತಾ ಹೇಳಿಕೊಂಡು ರಾಜ್ಯದಲ್ಲಿ ತಿರುಗಾಡಿದ್ದಾರೆ. ಸಚಿವರೇ ಪದೇ ಪದೇ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದು ಆರೋಪಿಸಿದರು. ರಕ್ತದಲ್ಲಿ ಬರೆದುಕೊಡುವೆ, ರಾಜಿನಾಮೆ ಕೊಡ್ತಿವಿ ಎಂದಿದ್ದರು ರಾಮುಲು. ಇಷ್ಟು ಹೇಳಿ ರಾಜಕಾರಣಿ ಆರಾಮವಾಗಿ ಇರೋದಲ್ಲ. ಕರ್ನಾಟಕದಲ್ಲಿ 45 ಲಕ್ಷ ಜನ ವಾಲ್ಮೀಕಿ ಜನ ಸಂಖ್ಯೆ ಇದೆ. 105 ಸೀಟು ಕೊಟ್ಟಿದ್ದಾರೆ, ನೀವು ಮೀಸಲಾತಿ ಘೋಷಣೆ ಮಾಡದಿದ್ದರೆ ಇಡೀ ರಾಜ್ಯದ್ಯಂತ ಪ್ರತಿಭಟನೆ ನಡೆಸ್ತೇವೆ ಎಂದು ಕಿಡಿಕಾರಿದರು. ಒಂದು ಸಮಾಜಕ್ಕೆ ಸುಳ್ಳು ಹೇಳಿ , ಮೋಸ ಮಾಡಿದ ಬಿಜೆಪಿ ಸರ್ಕಾರವನ್ನ ಧಿಕ್ಕಾರ ಮಾಡಲು ಇಡೀ ರಾಜ್ಯದ ಜನ ರೆಡಿ ಇದ್ದಾರೆ ಎಂದು ಜೆ. ಎನ್ ಗಣೇಶ್ ಬಿಜಿಪಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : – ಮುರುಘಾ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ಸೆ.2ಕ್ಕೆ ಮುಂದೂಡಿಕೆ- ತಕರಾರು ಸಲ್ಲಿಕೆಗೆ ಅವಕಾಶ