ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ (Congress)ಹಾಗೂ ಜೆಡಿಎಸ್ (Jds) ಮೈತ್ರಿ ವಿಚಾರಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ(Hd.Devegowda) ಪ್ರತಿಕ್ರಿಯಿಸಿದ್ದಾರೆ ತುಮಕೂರಿನಲ್ಲಿ (Tumkuru) ಮಾತನಾಡಿದ ಅವರು ಈ ವಿಚಾರದಲ್ಲಿ ಯಾರ ಬಗ್ಗೆನೂ ದೋಷ ಪಡುವುದು ಬೇಕಾಗಿಲ್ಲ.
ಯಾರ್ಯಾರು ಏನೇನು ಮಾತಾಡುತ್ತಿದ್ದಾರೋ ನೀವು ನೋಡ್ತಾ ಇದ್ದೀರಾ.ನನಗೆ ಸ್ವಲ್ಪ ಗಂಟಲ ಬಾಧೆ ಇದೆ.ಈ ವಿಷಯದಲ್ಲಿ ನಾನು ಯಾರ ಬಗ್ಗೆನೂ ಟೀಕೆ ಮಾಡಲ್ಲ.ಎಲ್ಲವನ್ನೂ ತಾವುಗಳೇ ಜನತೆ ಮುಂದೆ ಪ್ರತಿಯೊಂದು ನಿಮಿಷಕ್ಕೂ ಸುದ್ದಿಯನ್ನ ಮುಟ್ಟಿಸುತ್ತಿದ್ದೀರಾ.ಎಲ್ಲ ವಿಷಯವನ್ನೂ ವಿಶ್ಲೇಷಣೆ ಮಾಡೋಕೆ ಆಗೋಲ್ಲ.ತಾವ್ಯಾರೂ ಬೇಸರ ಮಾಡ್ಕೋಬೇಡಿ.ನಾವು ಎರಡನೇ ಅಭ್ಯರ್ಥಿಯಾಗಿ ಭಾರತೀಯ ಜನತಾ ಪಾರ್ಟಿಗೆ ಅವಕಾಶ ಕೊಡಬಾರದು ಅನ್ನೋದನ್ನ ಶ್ರೀಮಾನ್ ಖರ್ಗೆಯವರೇ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡ್ತಿದ್ದಾರೆ. ಯಾರನ್ನೂ ದೂರೋಕೆ ಹೋಗಲ್ಲ. ಖರ್ಗೆ ಅವರ ವರ್ಕ್ ಪರಿಣಾಮ ಗೊತ್ತಿದೆ. ಒಂದೇ ಒಂದು ಸೀಟು ಇದ್ದದ್ದು, ಇದರಲ್ಲಿ ಕುಪೇಂದ್ರ ರೆಡ್ಡಿ (Kupendra reddy) ಎಷ್ಟು ವರ್ಷ ಇದ್ರು. ನಾನು ಎಷ್ಟು ವರ್ಷ ಇದ್ದೆ. ಇನ್ನು 22, 30, 35, 40 ಸೀಟುಗಳು ಬರುತ್ತವೆ. ಖರ್ಗೆಯವರಿಗೆ ಇದರ ಪರಿಣಾಮ ಏನಾಗುತ್ತೇ ಅಂತಾ ಗೊತ್ತಿದೆ. ಖರ್ಗೆಯವರೇ ಮುಂದಾಳತ್ವ ವಹಿಸಿಕೊಂಡು ಕೆಲಸ ಮಾಡ್ತಿದ್ದಾರೆ.ಇದರ ಬಗ್ಗೆ ವಿಶ್ಲೇಷಣೆ ಮಾಡೋಲ್ಲ ಎಂದು ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.
ಪಠ್ಯಪುಸ್ತಕ ಚರ್ಚೆ ವಿಚಾರ.
ಸಾಹಿತ್ಯದಲ್ಲಿ ಕುವೆಂಪು (Kuvmepu) ನಷ್ಟು ಎತ್ತರಕ್ಕೆ ಬೆಳೆದ ಮತ್ತೊಬ್ಬ ವ್ಯಕ್ತಿ ಸಿಗಲ್ಲ.ನಾನು ಈವರೆಗೂ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.ಒಂದು ಸಮುದಾಯ ಎಷ್ಟರ ಮಟ್ಟಿಗೆ ನಡೆದುಕೊಳ್ಳುತ್ತದೆ ಅನ್ನೋದು ಸಾಬೀತಾಗಿ ಹಿಂದೆ ಹೋಗಿದೆ. ಕುವೆಂಪು ರಾಷ್ಟ್ರಮಟ್ಟದ ವ್ಯಕ್ತಿ ಎಂದು ಗಮನಿಸಬೇಕಾದ್ರೆ. ಹಿಂದೆ ಏನೇನು ನಡೆಯಿತು ಅಂತ ಹೇಳಲು ಹೋಗಲ್ಲ.ಅವರು ಶ್ರೀರಾಮಾಯಣ ದರ್ಶನಂ (Sriramayana darshanam) ಬರೆದರು. ಅವರ ಗುರುಗಳಿಗೊಸ್ಕರ ಪುಸ್ತಕ ಬರೆದಿದ್ದೇನೆ ಅಂತ ಹೇಳಿದರು.ಅವರ ಮನಸಿನಲ್ಲಿ ಏನಿತ್ತು ಅನ್ನೋದು ಈಗ ಚರ್ಚೆ ಬೇಡ. ಕುವೆಂಪುರವರ ವಿಚಾರವನ್ನು ಪಠ್ಯದಿಂದ ಕೈ ಬಿಟ್ಟಿದ್ದಾರೆಂದು ಕೇಳಿದರೆ ಮನಸಿಗೆ ನೋವಾಗುತ್ತದೆ.ಅದರ ಬಗ್ಗೆ ಬೀದಿಯಲ್ಲಿ ನಿಂತು ಹೋರಾಟ ಮಾಡುವ ಶಕ್ತಿ ಇಲ್ಲ ಎಂದು ದೇವೇಗೌಡ ತಿಳಿಸಿದ್ರು. ಇದನ್ನೂ ಓದಿ : – ಪ್ರತಿಪಕ್ಷಗಳ ಮಾತಿಗೆ ನಾನು ತಲೆ ಕೆಡಿಸಿಕೊಳ್ಳಲ್ಲ – ಬಸವರಾಜ್ ಹೊರಟ್ಟಿ