ಹುಬ್ಬಳ್ಳಿ – ಧಾರವಾಡ (Hubballi – dharwad) ಪಾಲಿಕೆಯಿಂದ ರಾಷ್ಟ್ರಧ್ವಜ (National flag) ಲೋಪ ಹಿನ್ನೆಲೆಯಲ್ಲಿ , ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahalad joshi) ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ .
ಅಂತಹ ಲೋಪ ಎಸಗಿರುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕು. ಇದನ್ನ ಸ್ವೀಕಾರ ಮಾಡುವ ಮೊದಲು ಪರಿಶೀಲನೆ ಮಾಡಬೇಕು. ಇಂತಹ ಲೋಪವಾದ ಧ್ವಜಗಳನ್ನ ಪರಿಶೀಲನೆ ಮಾಡದೇ ಸ್ವೀಕಾರ ಮಾಡಲಾಗಿದೆ. ಈ ರೀತಿ ಲೋಪ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ವಿಚಾರ
ರಾಜ್ಯದಲ್ಲಿ ಆ ತರಹದ ಯಾವುದೇ ಪ್ರಶ್ನೆ ಇಲ್ಲ, ಅಧಿಕಾರ ವಲಯದಲ್ಲಿ ಅಸ್ಥಿರತೆ ಕಾಪಾಡಬೇಕು. ಸಿಎಂ ವಿಚಾರದಲ್ಲಿ ಜಗದೀಶ ಶೆಟ್ಟರ್ ಹೆಸರು ಯಾರು ಮುನ್ನೆಲೆಗೆ ತಂದಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ರಾಷ್ರ್ಟ್ರೀಯ ನಾಯಕತ್ವದಲ್ಲಿಯೂ ಯಾವುದೇ ಚರ್ಚೆ ಇಲ್ಲ ಎಂದು ಹೇಳಿದರು. ಇದನ್ನೂ ಓದಿ : – ಶಿಕ್ಷಣ ಸಚಿವ ಬಿ ಸಿ ನಾಗೇಶ್ ವಜಾ ಮಾಡಬೇಕು – ಟ್ವಿಟ್ ಮೂಲಕ ಕಿಡಿಕಾರಿದ ‘ಕಾಂಗ್ರೆಸ್
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ (Ganeshotsava) ಆಚರಣೆಗಾಗಿ ಹಿಂದೂ ಸಂಘಟನೆಗಳ ಹೋರಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಈದ್ಗಾ ಮೈದಾನ (Idga ground) ಪಾಲಿಕೆ ವ್ಯಾಪ್ತಿಯಲ್ಲಿದೆ . ಈ ವಿಚಾರದಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸ್ವತಂತ್ರ ಅಧಿಕಾರ ಇದೆ. ಇದರ ಬಗ್ಗೆ ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅವರಿಗೆ ಬಿಟ್ಟ ವಿಚಾರ. ಧಾರ್ಮಿಕ ಆಚರಣೆ ವಿಚಾರವಾಗಿ ಸುಪ್ರೀಂಕೋರ್ಟ್ ನಿಂದಲೇ ಆದೇಶವಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಇದನ್ನೂ ಓದಿ : – ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ನೆರವೇರಿದ ರಾಯರ ಪೂರ್ವಾರಾಧನೆ