ಖ್ಯಾತ ನಟ ರಜನಿಕಾಂತ್ ( RAJANIKANTH ) ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 72ನೇ ವರ್ಷದ ಬರ್ತ್ಡೇ ಪ್ರಯುಕ್ತ ಎಲ್ಲರೂ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ.
ಅಭಿಮಾನಿಗಳಿಗೆ ಈ ದಿನ ನಿಜಕ್ಕೂ ಹಬ್ಬವೇ ಸರಿ. ತಮ್ಮ ಹೆಚ್ಚಿನ ನಟನ ಜನ್ಮದಿನವನ್ನು ಫ್ಯಾನ್ಸ್ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಅವರ ಸಂಭ್ರಮವನ್ನು ಇಮ್ಮಡಿಗೊಳಿಸಲು ರಜನಿಕಾಂತ್ ನಟನೆಯ ‘ಬಾಬಾ’ ( BABA ) ಸಿನಿಮಾ ಮರು ಬಿಡುಗಡೆ ಆಗಿದೆ. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುವ ಮೂಲಕ ತಲೈವಾ ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ. ಆಪ್ತರು ಮತ್ತು ಸೆಲೆಬ್ರಿಟಿಗಳು ಕೂಡ ರಜನಿಕಾಂತ್ ಬರ್ತ್ ಡೇಗೆ ಶುಭ ಕೋರುತ್ತಿದ್ದಾರೆ. ಅವರ ಮುಂಬರುವ ಸಿನಿಮಾಗಳು ಸೂಪರ್ ಹಿಟ್ ಆಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಇದನ್ನು ಓದಿ : – ದಲಿತರ ಹೆಸರಲ್ಲಿ ಅಧಿಕಾರ ಅನುಭವಿಸಿದ್ದು ಮರೆತು ಹೋಯ್ತಾ..? – ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ
ಬರ್ತ್ ಡೇ ಪ್ರಯುಕ್ತ ‘ಬಾಬಾ’ ಮರುಬಿಡುಗಡೆ
ಸ್ಟಾರ್ ನಟರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾಗಳು ರಿಲೀಸ್ ಆಗುವುದು ಸಹಜ. ಆದರೆ ರಜನಿಕಾಂತ್ ಅವರ ಹಳೇ ಸಿನಿಮಾ ‘ಬಾಬಾ’ ಇಂದು ಮರು ಬಿಡುಗಡೆ ಆಗಿದೆ. ಹೊಸ ತಂತ್ರಜ್ಞಾನ ಅಳವಡಿಸಿ, ಹೊಸ ರೂಪದಲ್ಲಿ ಈ ಚಿತ್ರವನ್ನು ತೆರೆಗೆ ತರಲಾಗಿದೆ. ಈ ಸಿನಿಮಾಗಾಗಿ ರಜನಿಕಾಂತ್ ಅವರು ಹೊಸದಾಗಿ ಡಬ್ಬಿಂಗ್ ಕೂಡ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಎರಡು ಶೇಡ್ ನ ಪಾತ್ರ ಇದೆ.
ಇದನ್ನು ಓದಿ : – ಆನೆ ದಾಳಿಗೆ ಒಳಗಾದವರಿಗೆ ಪರಿಹಾರ ಹೆಚ್ಚಳ – 7.5ಲಕ್ಷ ಇದ್ದ ಪರಿಹಾರ 15ಲಕ್ಷಕ್ಕೆ ಹೆಚ್ಚಳ