ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್ ಪಿಎಂಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಮೇಕೆದಾಟು ಯೋಜನೆ ಬಗ್ಗೆ ಕಾವೇರಿ ರಿವರ್ ಮಾನಿಟರಿಂಗ್ ಬೋರ್ಡ್ನಲ್ಲಿ ಡಿಪಿಆರ್ ಅಪ್ರೂವ್ ಮಾಡಬೇಕು ಅಂತ ನಾವು ಹೇಳಿದ್ದೇವೆ. ಈಗಾಗಲೇ ಅನೇಕ ಸಭೆಗಳು ಆಗಿದೆ. ಇಷ್ಟರಲ್ಲೇ ಅಂತಿಮ ಸಭೆ ಕೂಡ ಬರ್ತಿದೆ. ಈ ಮಧ್ಯೆ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ. ತಮಿಳುನಾಡು ಸಿಎಂ ಪಿಎಂಗೆ ಪತ್ರ ಬರೆದಿದ್ದಾರೆ ಎಂಬ ವಿಚಾರ ಗೊತ್ತಾಗಿದೆ. ಇದನ್ನೂ ಓದಿ : – ನ್ಯಾಷನಲ್ ಹೆರಾಲ್ಡ್ ಕೇಸ್ – ಇಂದೂ ಕೂಡ ED ಯಿಂದ ರಾಹುಲ್ ಗಾಂಧಿ ವಿಚಾರಣೆ
ಪತ್ರದ ಪ್ರತಿಯನ್ನು ತರೆಸಿಕೊಳ್ಳುತ್ತೇನೆ. ತಮಿಳುನಾಡಿನವರ ಬೇಡಿಕೆ ಕಾನೂನು ಬಾಹಿರ. ನಮ್ಮ ನೀರಿಗೆ ಹುನ್ನಾರ ನಡೆಸುತ್ತಿದ್ದಾರೆ. ನಮ್ಮ ನೀರಿನ ಅಡಿಯಲ್ಲಿ,ನಮ್ಮ ರಾಜ್ಯದಲ್ಲಿ ನಾವು ಮೇಕೆದಾಟು ಮಾಡ್ತಿದ್ದೇವೆ. ಅದಕ್ಕೆ ಈಗಾಗಲೇ ಅನೇಕ ಪಕ್ರಿಯೆಗಳು ನಡೆದಿದೆ. ಇದಕ್ಕಾಗಿ 15 ಸಭೆ ನಡೆದಿದೆ. ಆಗ ತಮಿಳುನಾಡು ಸಭೆಯಲ್ಲಿ ಭಾಗಿಯಾಗಿಲ್ಲ. ರಾಜಕೀಯಕ್ಕಾಗಿ ಇಷ್ಟೆಲ್ಲಾ ಮಾಡ್ತಿದ್ದಾರೆ. ಇದೆಲ್ಲ ರಾಜಕೀಯ ಸ್ಟಂಟ್. ಕಾನೂನು ಬಾಹಿರ ಪತ್ರವನ್ನು ಕೇಂದ್ರ ಪರಿಗಣಿಸಬಾರದು ಎಂದು ತಿಳಿಸಿದ್ರು.
ಇದನ್ನೂ ಓದಿ : – ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಹೈಡ್ರಾಮ – ಸಂಸದ ವೇಣುಗೋಪಾಲ್ ಅಸ್ವಸ್ಥ