ಕೃಷಿಕರಿಗೆ, SC-ST ಸಮುದಾಯಕ್ಕೆ ಕೂಲಿಕಾರ್ಮಿಕರಿಗೆ, ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಸರ್ಕಾರದ ಪ್ರತಿಯೊಂದು ಯೋಜನೆಗಳು ತಲುಪುವ ನಿಟ್ಟಿನಲ್ಲಿ ಬಜೆಟ್ ಮಂಡಿಸಲಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ್ (ASHWATH NARAYANA) ಹೇಳಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ, ₹5,300 ಕೋಟಿ ಅನುದಾನ ಮೀಸಲಿಟ್ಟ ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕರುನಾಡಿನ ರೈತರು ಹಾಗೂ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.
ನಮ್ಮ ಅನ್ನದಾತರಿಗೆ ಈ ಯೋಜನೆ ವರದಾನವಾಗಲಿದೆ.#AmritKaalBudget @nsitharaman pic.twitter.com/2iBW9SIRFU
— Dr. Ashwathnarayan C. N. (@drashwathcn) February 1, 2023
ಬೆಂಗಳೂರಿ (BANGALORE)ನಲ್ಲಿ ಮಾತನಾಡಿದ ಅವರು , ಜನ ಸಾಮಾನ್ಯರ ಹಾಗೂ ಕೃಷಿಕರ ಬಜೆಟ್ ಇದಾಗಿದೆ. ವಿಶೇಷವಾಗಿ ಕಾರ್ಮಿಕ , ಶ್ರಮಿಕ ವರ್ಗಕ್ಕೆ ಆದಾಯ ತೆರಿಗೆ ಕಡಿತ ಮಾಡಲಾಗಿದೆ . ಇನ್ಫ್ರಾಸ್ಟ್ರಕ್ಚರ್ ಸ್ಲಾಬ್ ಏಳುವರೆ ಕೋಟಿ ಇದ್ದದ್ದು 35% ಜಾಸ್ತಿ ಮಾಡಿ 10 ಲಕ್ಷ ಕೋಟಿಗೆ ಏರಿಕೆ ಮಾಡಿದ್ದಾರೆ. ಇದು ಉದ್ಯೋಗ ಸೃಷ್ಟಿಗೆ ಸಹಕಾರಿಯಾಗುತ್ತೆ. ಇದು ಸರ್ಕಾರಕ್ಕೆ ಆದಾಯ ಕೊಡುತ್ತೆ. ನೀರಾವರಿಗೆ ಆದ್ಯತೆ ಕೊಡುವ ನಿಟ್ಟಿನಲ್ಲಿ ಕರ್ನಾಟಕಕ್ಕೆ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ನೀಡಲಾಗಿದೆ. ಸಣ್ಣ ನೀರಾವರಿ ಯೋಜನೆಗೆ ಅವಕಾಶ ಮಾಡಿಕೊಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 79 ಸಾವಿರ ಕೋಟಿ ಮೀಸಲಿಟ್ಟು. ಬಡವರಿಗೆ ಸೂರು ಯೋಜನೆ ಕೊಡಲು ಡಿಸ್ಟ್ರಿಕ್ಟ್ ಡೆವೆಲಪ್ಮೆಂಟ್ ಯೋಜನೆಯಡಿ 500 ಬ್ಲಾಕ್ ಗಳನ್ನಾಗಿ ಮಾಡಿ ಹಣ ಬಿಡುಗಡೆ ಮಾಡಲಾಗಿದೆ. ಇದು ಉತ್ತಮ ಬೆಳವಣಿಗೆಯಾಗಿದೆ. ಏಕಲವ್ಯ ಮಾಡೆಲ್ ಶಾಲೆಗೆ ಉನ್ನತೀಕರಣ ಮಾಡೋದಕ್ಕೆ ೩೮ ಸಾವಿರ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗವನ್ನು ನೇಮಕಾತಿ ಮಾಡಲಾಗುತ್ತದೆ ಎಂದು ತಿಳಿಸಿದ್ರು.
ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಧಾನಿ ಶ್ರೀ @narendramodi ಸರ್ಕಾರವು ಈ ಬಜೆಟ್ನಲ್ಲಿ ₹5,300 ಕೋಟಿ ಮೀಸಲಿಟ್ಟಿದೆ.
ಈ ಮೂಲಕ ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ 2.25 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಈ ಐತಿಹಾಸಿಕ ಯೋಜನೆಗೆ ವೇಗ ನೀಡಿದೆ ನಮ್ಮ ಕೇಂದ್ರ ಸರ್ಕಾರ.#AmritKaalBudget pic.twitter.com/F9wS5SM7pU
— Dr. Ashwathnarayan C. N. (@drashwathcn) February 1, 2023
ಪ್ರಧಾನಿ ನರೇಂದ್ರ ಮೋದಿ (NARENDRA MODI) ನಿರ್ಮಲಾ ಸೀತಾರಾಮನ್ ಹಾಗೂ ಸಚಿವ ಸಂಪುಟಕ್ಕೆ ಧನ್ಯವಾದಗಳು . ರೈತರು, ಮಹಿಳೆಯರು, ದೀನ ದಲಿತರ ಪರವಾಗಿ ಭರವಸೆ ಮೂಡಿಸುವ ಬಜೆಟ್ ನ್ನು ಕೊಟ್ಟಿದ್ದಾರೆ. ತೆರಿಗೆ ವಿನಾಯಿತಿಯನ್ನ ೫ ಲಕ್ಷದಿಂದ ೭ ಲಕ್ಷಕ್ಕೆ ಹೆಚ್ಚಿಸಿರೋದು ಸಂತಸದ ವಿಚಾರ. ನಾಡಿನ ಪರವಾಗಿ ವಿತ್ತ ಸಚಿವೆ ಹಾಗೂ ಪ್ರಧಾನಿ ಮೋದಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದು ತಿಳಿಸಿದ್ರು.
ಇದನ್ನುಓದಿ :- ಮೇಕೆದಾಟು ಯೋಜನೆಗೆ ಸಾವಿರ ಕೋಟಿ ಇಟ್ಟಿದ್ದೀವಿ ಅಂತಾರೆ – ಯಾಕೆ ಇನ್ನೂ ಕಾಮಗಾರಿ ಆರಂಭವಾಗಿಲ್ಲ – ಡಿ.ಕೆ ಶಿವಕುಮಾರ್