ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರಿಗೂ ಮುಸ್ಲಿಮರೇ ಬೇಕು ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಸಿದ್ದು, ಡಿಕೆಶಿ ಇಬ್ಬರಿಗೂ ಸಾಬ್ರೇ ಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ತಾಲಿಬಾನ್ ಸರ್ಕಾರ ಬರುತ್ತೆ. ಸಿದ್ದರಾಮಯ್ಯ ಅವರಿಗೆ ಸಿಎಂ ಆಗಿದ್ದಾಗ ಯಧುವಂಶದವರು ನೆನಪಾಗಲಿಲ್ಲ. ಯಧುವಂಶ ನಿರ್ವಂಶ ಮಾಡಲು ಹೊರಟ ಅವರು ಟಿಪ್ಪು ಜಯಂತಿ ಮಾಡಿದ್ರು ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ : – ಜಿಟಿ ದೇವೇಗೌಡ ಮೊಮ್ಮಗಳು ಅನಾರೋಗ್ಯದಿಂದ ವಿಧಿವಶ
ಕಾಂಗ್ರೆಸ್ಸಿನಲ್ಲಿ ಇವತ್ತು ಎರಡು ಟೀಂ ಇದೆ. ಒಂದು ಸಿದ್ದರಾಮಯ್ಯ ಟೀಂ, ಮತ್ತೊಂದು ಡಿ.ಕೆ.ಶಿವಕುಮಾರ್ ಟೀಂ. ಸಿದ್ದರಾಮಯ್ಯ ಅವರ ಟೀಂನ ವೈಸ್ ಕ್ಯಾಪ್ಟನ್ ಗೋರಿಪಾಳ್ಯದ ಬಸ್ಸು ಮತ್ತು ಜಮೀರಣ್ಣ. ಡಿ.ಕೆ.ಶಿವಕುಮಾರ್ ಟೀಂನ ವೈಸ್ ಕ್ಯಾಪ್ಟನ್ ನಲಪಾಡ್. ಈ ಹಿಂದೆ ಫರ್ಜೀ ಕೆಫೆಯಲ್ಲಿ ನಲಪಾಡ್ ಅವರು ಪುಂಡಾಟಿಕೆ ಮಾಡಿದ್ದರು. ಇವರಿಬ್ಬರಿಗೂ ಸಾಬ್ರೇ ಬೇಕು, ಕಾಂಗ್ರೆಸ್ಸಿನಲ್ಲಿ ಹಿಂದೂಗಳಿಗೆ ಯಾರಿದ್ದಾರೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : – ವಿಧಾನ ಪರಿಷತ್ತಿನ ಏಳು ಸ್ಥಾನಗಳಲ್ಲಿ ಬಿಜೆಪಿ ಶಾಸಕರಿಗೆ ನಾಲ್ಕು ಸ್ಥಾನಗಳು