ರಾಜ್ಯ ಸರ್ಕಾರದ 40%ಗೆ ಕೇಂದ್ರ ಸರ್ಕಾರ ಮುದ್ರೆ ಒತ್ತಿದೆ – ಸಿದ್ದರಾಮಯ್ಯ

ರಾಜ್ಯ ಬಿಜೆಪಿ ಸರ್ಕಾರದ ಅಕ್ರಮಕ್ಕೆ ಕೇಂದ್ರ ಗೃಹ ಸಚಿವರ ಅಂಕಿತ ಒತ್ತಿದ್ದಾರೆ. ನಿನ್ನೆ ಅಮಿತ್ ಶಾ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಬೊಮ್ಮಾಯಿ ಸರ್ಕಾರಕ್ಕೆ ಶಹಬ್ಬಾಸ್ ಗಿರಿ ಕೊಟ್ಟು ಹೋಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Amit Shah Assures Punjab CM Channi of Probe Into AAP's 'Links With SFJ',  Says 'Myself Looking Into It'

ಪಿಎಸ್ಐ ನೇಮಕಾತಿ ಅಕ್ರಮ, 40% ಕಮಿಷನ್ ಹಗರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಮನ್ ಮ್ಯಾನ್ ಸರ್ಕಾರವೆಂದು ಅರುಣ್ ಸಿಂಗ್ ಹೇಳಿದ್ದಾರೆ. 40% ಕಮಿಷನ್ ಸರ್ಕಾರಕ್ಕೆ ಸಹಮತ ನೀಡಿದ್ದಾರೆ. ರಾಜ್ಯ ಸರ್ಕಾರದ ಕ್ರಮಕ್ಕೆ ಕೇಂದ್ರ ಸರ್ಕಾರ ಮುದ್ರೆ ಒತ್ತಿದೆ ಎಂದು ದೂರಿದ್ದಾರೆ. 40 ಪರ್ಸೆಂಟ್ ಕಮಿಷನ್ ಸರ್ಕಾರವೆಂದು ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಸಂತೋಷ್ ಪಾಟೀಲ್ ಹೇಳಿದ್ದರು. ಮಠಕ್ಕೆ ಬಿಡುಗಡೆಯಾದ ಅನುದಾನಕ್ಕೂ 40% ಕೊಡಬೇಕು. ರಾಜ್ಯ ಸರ್ಕಾರದ ವಿರುದ್ಧ ಸ್ವಾಮೀಜಿ ಆರೋಪ ಮಾಡಿದ್ದರು. ಬಿಬಿಎಂಪಿ ವಿರುದ್ಧವೂ 40% ಆರೋಪ ಕೇಳಿಬಂದಿತ್ತು. ಗೋಶಾಲೆಗೆ ಬಿಡುಗಡೆಯಾದ ಹಣಕ್ಕೂ 40% ಕೊಡಬೇಕು. ಸರ್ಕಾರದ ವಿರುದ್ಧ ಇಷ್ಟೆಲ್ಲಾ ಆರೋಪ ಕೇಳಿಬಂದರೂ ಬೆಂಗಳೂರಿಗೆ ಬಂದಿದ್ದ ಕೇಂದ್ರ ಬಿಜೆಪಿ ನಾಯಕರಿಂದ ಮೆಚ್ಚುಗೆ ನೀಡಿದ್ದಾರೆ. ಇದನ್ನೂ ಓದಿ :- ಪೂನಾದಲ್ಲಿ ದಿವ್ಯಾ ಹಾಗರಗಿ ಅವರಿಗೆ ಆಶ್ರಯ ಕೊಟ್ಟಿರೋದು ಕಾಂಗ್ರೆಸ್ – ಆರಗ ಜ್ಞಾನೇಂದ್ರ ಆರೋಪ

ಇದರ ಅರ್ಥ ರಾಜ್ಯ ಸರ್ಕಾರದ ಅಕ್ರಮಕ್ಕೆ ಕೇಂದ್ರ ಸಹಮತವಿದೆ ಎಂದು. ನಮ್ಮ ಸರ್ಕಾರದ ವಿರುದ್ಧ 10% ಸರ್ಕಾರವೆಂದು ಹೇಳಿದ್ರು. ಯಾವುದೇ ದಾಖಲೆ ಇಲ್ಲದೆ ಮೋದಿ ಆರೋಪ ಮಾಡಿದ್ದರು. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40% ಬಗ್ಗೆ ಪ್ರಧಾನಿ ಮೋದಿಗೆ ಗುತ್ತಿಗೆದಾರರ ಸಂಘ ಪತ್ರ ಬರೆದು ತಿಳಿಸಿದ್ದರು. ಆದರೆ ಪ್ರಧಾನಿ ಮೋದಿ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ನಾನು ತಿನ್ನಲ್ಲ ತಿನ್ನಲು ಬಿಡಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು. ರಾಜ್ಯ ಸರ್ಕಾರದ 40 ಪರ್ಸೆಂಟ್ನಲ್ಲಿ ಕೇಂದ್ರಕ್ಕೆ ಪಾಲಿದೆ ಅಂದರ್ಥ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

All is not well with Uttarakhand BJP as 3 MLAs allege betrayal by leaders -  Hindustan Times

ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಈಗ ತನಿಖೆ ನಡೆಸುತ್ತಿದ್ದಾರೆ. ಗೃಹಸಚಿವ ಆರಗ ಜ್ಞಾನೇಂದ್ರರನ್ನು ಕೂಡಲೇ ವಜಾಗೊಳಿಸಬೇಕು. ಕೇಂದ್ರ ಗೃಹಸಚಿವ ಅಮಿತ್ ಶಾ ಇಂಥವರ ಬೆನ್ನು ತಟ್ಟಿಹೋಗಿದ್ದಾರೆ. ಇವರ ನಡೆ ಗಮನಿಸಿದೆ ಅಕ್ರಮಕ್ಕೆ ಕೇಂದ್ರದ ಬೆಂಬಲವಿದೆಯಾ? ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ, ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಸಾಲದು. ಇವರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ :- ಪಿಎಸ್ಐ ಪರೀಕ್ಷೆ ಅಕ್ರಮವನ್ನು ಪೊಲೀಸರೇ ಹೊರತಂದಿದ್ದಾರೆ – ಹೆಚ್.ಡಿ ಕುಮಾರಸ್ವಾಮಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!