ಮಹಾರಾಷ್ಟ್ರ ಸರ್ಕಾರದಲ್ಲಿನ (Maharastra government) ರಾಜಕೀಯ ಬಿಕ್ಕಟ್ಟು ಉತ್ತುಂಗಕ್ಕೆ ತಲುಪಿದೆ. ಈ ಮಧ್ಯೆ ಇಂದು ಬಂಡಾಯ ನಾಯಕ ಏಕನಾಥ್ ಶಿಂಧೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddav thackery) ಅವರಿಗೆ ಪತ್ರ ಬರೆದು ತಮ್ಮ ಅಸಮಾಧಾನಕ್ಕೆ ಕಾರಣವೇನು, ಸರ್ಕಾರದಲ್ಲಿ ತಮಗೆ ಏನಾಗುತ್ತಿತ್ತು, ತಮಗೆ ಯಾವ ರೀತಿ ಅನ್ಯಾಯ, ಅಪಮಾನವಾಗುತ್ತಿತ್ತು ಎಂದು ಪತ್ರ ಬರೆದಿದ್ದಾರೆ.
ಮಹಾ ಅಘಾಡಿ (Maha aghadi) ಮೈತ್ರಿ ಸರ್ಕಾರದಲ್ಲಿ ಶಿವಸೇನೆಯ ಸಿಎಂ ಇದ್ದರೂ ವರ್ಷಾ ಬಂಗಲೆ (Varsha bunglow) ಗೆ ಭೇಟಿ ನೀಡುವ ಅವಕಾಶವನ್ನು ಪಕ್ಷದ ಶಾಸಕರು ಹೊಂದಿರಲಿಲ್ಲ. ಸಿಎಂ ಅವರನ್ನು ಭೇಟಿಯಾಗಬೇಕೋ ಬೇಡವೋ ಎಂದು ಅವರ ಸುತ್ತಲಿನ ಜನ ನಿರ್ಧರಿಸುತ್ತಿದ್ದರು. ನಮ್ಮನ್ನು ಅವಮಾನಿಸಲಾಗುತ್ತಿತ್ತು.
ಸಿಎಂ ಯಾವತ್ತೂ ಸೆಕ್ರೆಟರಿಯೇಟ್‌ನಲ್ಲಿ ಇರುತ್ತಿರಲಿಲ್ಲ ಬದಲಾಗಿ ಮಾತೋಶ್ರೀ (ಠಾಕ್ರೆ ನಿವಾಸ) ದಲ್ಲಿ ಇರುತ್ತಿದ್ದರು ಎಂದು ಹೇಳಿದ್ದಾರೆ. ಏಕನಾಥ್ ಶಿಂಧೆ (EKHNATH SINDHE) ಯ ಬೆಂಬಲಿಗ ಬಂಡಾಯ ಶಾಸಕರ ದೂರುಗಳನ್ನು ಪತ್ರದಲ್ಲಿ ಲಗತ್ತಿಸಲಾಗಿದೆ. ನಾವು ಸಿಎಂ ಸುತ್ತಲಿನವರಿಗೆ ಕರೆ ಮಾಡುತ್ತಿದ್ದೆವು, ಆದರೆ ನಮ್ಮ ಕರೆಗೆ ಯಾರೂ ಕ್ಯಾರೇ ಅನ್ನುತ್ತಿರಲಿಲ್ಲ. ಈ ಎಲ್ಲಾ ಸಂಗತಿಗಳಿಂದ ಬೇಸತ್ತು ಏಕನಾಥ್ ಶಿಂಧೆ ಅವರ ಮನವೊಲಿಸಿದ್ದೇವೆ. ನಾವು ಸಿಎಂ ಅವರನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೂ, ಕಾಂಗ್ರೆಸ್ ಮತ್ತು ಎನ್‌ಸಿಪಿಯವರು ಸಿಎಂ ಭೇಟಿ ಮಾಡುವ ಅವಕಾಶಗಳನ್ನು ಪಡೆಯುತ್ತಿದ್ದೆರು. ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಸರಿಯಾಗಿ ಹಣ ಬಿಡುಗಡೆಯಾಗುತ್ತಿರಲಿಲ್ಲ.
ಹಿಂದುತ್ವ ಮತ್ತು ರಾಮಮಂದಿರವು ಪಕ್ಷಕ್ಕೆ ನಿರ್ಣಾಯಕ ವಿಷಯವಾಗಿರುವಾಗ, ಪಕ್ಷವು ನಮ್ಮನ್ನು ಅಯೋಧ್ಯೆಗೆ ಭೇಟಿ ನೀಡುವುದನ್ನು ಏಕೆ ತಡೆಯಿತು? ಆದಿತ್ಯ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕರನ್ನು ಕರೆಸಿ ಅಯೋಧ್ಯೆಗೆ ಹೋಗದಂತೆ ತಡೆಯಲಾಯಿತು ಎಂದೆಲ್ಲ ಪತ್ರದಲ್ಲಿ ದೀರ್ಘವಾಗಿ ಶಿವಸೇನೆ ನಾಯಕರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ : – ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ – ರಿಯಾ ಚಕ್ರವರ್ತಿ ಸೇರಿ 35 ಮಂದಿ ವಿರುದ್ಧ NCB ಚಾರ್ಜ್ ಶೀಟ್